ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ
1 min read- ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿರಿ : ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಭಾರತಿ.
ಹರಪನಹಳ್ಳಿ ; ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದು ಹರಪನಹಳ್ಳಿಯ ಹಿರಿಯ ಸಿವಿಲ್ ನ್ಯಾಯಧೀಶರಾದ ಎಂ ಭಾರತಿ ಅಭಿಪ್ರಾಯಪಟ್ಟರು.
ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ನಿಮಿತ್ತ ತಾಲ್ಲೂಕು ಕಾನೂನು ಸೇವಾ ಪ್ರಧಿಕಾರ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾನೂನು ಸೇವಾಸಮಿತಿವತಿಯಿಂದ ತಾಲ್ಲೂಕು ಪಂಚಾಯ್ತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ಅರ್ಹ ಪಲಾನುಭವಿಗಳಿಗೆ ಕಲ್ಯಾಣ ಯೋಜನೆಗಳನ್ನು ವಿತರಿಸುವ ಮೆಗಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದರು.
ಕಾನೂನನ್ನು ಗೌರವಿಸಬೇಕು,ಕಾನೂನು ಎಂಬ ಜ್ಞಾನವನ್ನು ಸೃಜನಾತ್ಮಕ ವಿಚಾರದಲ್ಲಿ ತಿಳಿದುಕೊಂಡು, ನೆರವರೆಯವರಿಗೆ ಮಾರ್ಗದರ್ಶಿ ವ್ಯಕ್ತಿಯಾಗಬೇಕು ಎಂದರು.
ಮಕ್ಕಳು ಕೇವಲ ಶಾಲೆ ಓದಿದರೆ ಸಾಲದು, ಮಹನೀಯರ ಆದರ್ಶದ ಬದುಕನ್ನು ನೋಡಿ ಕಲಿಯಬೇಕು, ವಿದೇಶಿ ಶಿಕ್ಷಣವನ್ನು ಬಿಟ್ಟು ದೇಶಿಯ ಶಿಕ್ಷಣವನ್ನು ಪಡೆದು ತಂದೆ ತಾಯಿಗೆ ಮಾದರಿ ಮಕ್ಕಳಾಗಿ ಬದುಕಬೇಕು ಎಂದು ಪ್ರತಿಪಾದಿಸಿದರು.
ಸಾಮಾನ್ಯ ವ್ಯಕ್ತಿಯೂ ಸಹ ಕಾನೂನು ಬಗ್ಗೆ ತಿಳಿದುಕೊಳ್ಳಲು ಅವಕಾಶ ವಿರುತ್ತದೆ, ದೌರ್ಜನ್ಯಕ್ಕೆ ಒಳಗಾದ ಸಾರ್ವಜನಿಕರು ಪ್ರತಿಯೊಬ್ಬರೂ ಕಾನೂನಿನ ಅರಿವು ತಿಳಿದುದುಕೊಳ್ಳಬೇಕು ಮತ್ತು ನೆರವು ಪಡೆದುಕೊಳ್ಳಬೇಕು . ಹುಟ್ಟಿದಾಗಿನಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಕಾನೂನು ಬಗ್ಗೆ ತಿಳಿದುಕೊಳಬೇಕು, ವಾಹನ ಸವಾರರು ಪ್ರತಿಯೊಬ್ಬರೂ ಪರವಾನಿಗೆ ಪಡೆದುಕೊಂಡು ವಾಹನ ಚಲಾಯಿಸಬೇಕು, ಎಂದರು.
ಹಿರಿಯರನ್ನು ಗೌರವಿಸಿದರೆ ನೆಮ್ಮದಿಯ ಜೀವನವನ್ನು ಕಾಣುವುದಕ್ಕೆ ಸಾದ್ಯವಾಗುತ್ತದೆ, ಹಿರಿಯ ನಾಗರಿಕರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಂಡು ನೆಮ್ಮದಿಯ ಜೀವನ ಮಾಡಬೇಕು. ವಿಕಲಚೇತನರಿಗೆ ಮಾನವೀಯತೆ ತೋರಬೇಕು ಗೌರವದಿಂದ ಕಾಣಬೇಕು, ಯಾರಿಗೂ ತಾರತಮ್ಯವನ್ನು ಮಾಡಬಾರದು, ವಿಕಲಚೇತನ ಎನ್ನುವುದು ಶಾಪವೂ ಅಲ್ಲ ವರವೂ ಅಲ್ಲ , ಮಹಿಳೆಯರು ಆರೋಗ್ಯವಂತ ಮಕ್ಕಳನ್ನು ಪಡೆದುಕೊಳ್ಳಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಜೀವ ಇದ್ದರೆ ಜೀವನ , ನೀರಿನ ಮೇಲೆ ತೇಲಾಡುವ ನಮ್ಮ ಜೀವನ ಯಾವ ಹಂತದಲ್ಲಿ ಏನಾಗುತ್ತದೆ ಎಂದು ನಮಗೆ ಗೊತ್ತಿಲ್ಲ ಇರುವಷ್ಟು ದಿನ ಸಮಾಜಕ್ಕಾಗಿ ಏನಾದರೂ ಸಾಧನೆ ಮಾಡಬೇಕು ಎಂದು ವಿಶ್ಲೇಷಿಸಿದರು. ಇದೆ ವೇಳೆ ವಿಕಲಚೇತನರಿಗೆ UDID ಗುರುತಿನ ಚೀಟಿಯನ್ನು ವಿತರಿಸಿದರು.
ಸಿವಿಲ್ ನ್ಯಾಯಾಧೀಶರಾದ , ಫಕ್ಕೀರವ್ವ ಕೆಳಗೇರಿ, ಮಾತನಾಡಿ, ಆಧಾರ ಕಾರ್ಡ್ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ ,ಆಧಾರ ಕಾರ್ಡ್ ಕುಟುಂಬದ ಜವಾಬ್ದಾರಿ, ಯಾವುದೇ ರೀತಿ ದುರುಪಯೋಗ ಪಡೆದುಕೊಳ್ಳವುದನ್ನು ತಡೆಗಟ್ಟಬಹುದು, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಆಧಾರ್ ಕಾರ್ಡ್ ನ್ನು ಬಳಸುತ್ತಾರೆ ಆದ್ದರಿಂದ ಸಾರ್ವಜನಿಕರು ತಪ್ಪದೇ ಕಡ್ಡಾಯವಾಗಿ ನಿಮ್ಮ ಜೀವದ ಜೊತೆ ಒಂದು ಆಧಾರ್ ಕಾರ್ಡ್ ನ್ನು ಮಾಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ , ವಕೀಲರ ಸಂಘದ ಅಧ್ಯಕ್ಷ, ಕೆ.ಚಂದ್ರಗೌಡ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಎಂ.ಮೃತ್ಯoಜಯ, ಗ್ರೇಡ್ 2 ತಹಶಿಲ್ದಾರ ಪ್ರಕಾಶಗೌಡ , ಧನರಾಜ್, ಸರೋಜ, ಶೇಖರ್ ಗೌಡ, ಬಿ.ಗೋಣಿಬಸಪ್ಪ, ಮುತ್ತಿಗಿ ರೇವಣಸಿದ್ದಪ್ಪ, ಕೆ.ಎಸ್. ವಾಮದೇವ, ಬಂಡ್ರಿ ಆನಂದ, ಎಸ್.ಜಿ.ತಿಪ್ಪೇಸ್ವಾಮಿ, ಸಿ. ಜಾತಪ್ಪ, ಎಂ. ನಾಗೇಂದ್ರಪ್ಪ, ಸಿ. ಹನುಮಂತಪ್ಪ, ಬಿ.ತಿಪ್ಪೇಶ್, ರೇವಣಸಿದ್ದಪ್ಪ, ಬಸವರಾಜ್. ಬಿ,ಕೊಟ್ರೇಶ್,ಚನ್ನಮಲ್ಲಪ್ಪ, ಮತ್ತು ಇತರರು ಹಾಜರಿದ್ದರು.