ಮುಸ್ಲಿಂ ಸಮುದಾಯಕ್ಕೆ ಶಾಸಕಿ ಎಂ ಪಿ ಲತಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ ಅವರಿಂದ ಅನ್ಯಾಯ : ಮುಸ್ಲಿಂ ಮುಖಂಡರ ಆರೋಪ
1 min readಮುಸ್ಲಿಂ ಸಮುದಾಯಕ್ಕೆ ಶಾಸಕಿ ಎಂ ಪಿ ಲತಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ ಅವರಿಂದ ಅನ್ಯಾಯ : ಮುಸ್ಲಿಂ ಮುಖಂಡರ ಆರೋಪ
ಹರಪನಹಳ್ಳಿ : ಅ – 22 ,ಪುರಸಭೆ ಅಧ್ಯಕ್ಷ ರ ಹುದ್ದೆ ಮುಸ್ಲಿಮರ ಕೈ ತಪ್ಪಲು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ ಅವರೇ ನೇರ ಹೊಣೆ ಎಂದು ಮುಸ್ಲಿಂ ಮುಖಂಡರು ಆರೋಪ ಮಾಡಿದ್ದಾರೆ .
27 ಸದಸ್ಯರ ಬಲವಿರುವ ಪುರಸಭೆಯಲ್ಲಿ 14 ಕಾಂಗ್ರೆಸ್ 10 ಬಿಜೆಪಿ 2 ಪಕ್ಷೇತರ ಒಂದು ಜೆಡಿಎಸ್ ಸದಸ್ಯರಾಗಿರುತ್ತಾರೆ ಕಾಂಗ್ರೆಸ್ ಸಂಪೂರ್ಣ ಬೆಂಬಲವಿದ್ದರೂ ಸಹ ಎರಡು ಬಾರಿ ಅಧಿಕಾರವನ್ನು ಕಳೆದುಕೊಂಡಿತ್ತು ಈ ಬಾರಿ ಅದು ಆಗಬಾರದು ಎಂದು ಶಾಸಕರು ಮೊದಲೇ ಸಭೆಯನ್ನು ನಡೆಸಿದ್ದರು ಆಗ ಯಾವುದೇ ಅಕ್ಷೇಪಗಳನ್ನು ಎತ್ತದೆ ಸ್ವತಃ ಕಾಂಗ್ರೆಸ್ ಪಕ್ಷದವರೇ ಮುಸ್ಲಿಂ ಜನಾಂಗಕ್ಕೆ ಪುರಸಭೆಯ ಅಧ್ಯಕ್ಷರ ಸ್ಥಾನ ಸಿಗಬಾರದು ಎಂಬ ಷಡ್ಯಂತ್ರದಿಂದ ಧಾರವಾಡ ಉಚ್ಚ ನ್ಯಾಯಾಲಯದ ಪೀಠದಿಂದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ತಡಯಾಜ್ಞೆಯನ್ನು ತಂದು ಅದರ ಪ್ರತಿಯನ್ನು ಬಿಜೆಪಿಯ ಸದಸ್ಯರ ಕೈಯಲ್ಲಿ ಕೊಟ್ಟು ಚುನಾವಣಾ ಅಧಿಕಾರಿಗೆ ತಲುಪಿಸಿ ಈ ರೀತಿ ಮಾಡಿರುವುದು ಸರಿಯಲ್ಲ ಇದಕ್ಕೆ ನೇರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ವಿ ಅಂಜಿನಪ್ಪನವರೆ ನೇರ ಹೊಣೆಗಾರರಾಗಿದ್ದಾರೆ .
ತಾಲೂಕಿನಲ್ಲಿ 28000 ಮುಸ್ಲಿಂ ಮತಗಳನ್ನು ಹೊಂದಿದ್ದು ಮುಸ್ಲಿಂ ಸಮಾಜಕ್ಕೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯು ಸಹ ಇದುವರೆಗೂ ನೀಡಿರುವುದಿಲ್ಲ ಮುಸ್ಲಿಂ ಸಮಾಜದ ಶೇಕಡ 100ರಷ್ಟು ಮತಗಳನ್ನು ಕಾಂಗ್ರೆಸ್ಸಿಗೆ ನೀಡುತ್ತಾ ಬರುತ್ತಿದ್ದು ಕೇಂದ್ರದಲ್ಲಿರುವ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಸಹ ಮುಸ್ಲಿಮರಿಗೆ ಅನ್ಯಾಯವನ್ನು ಮಾಡುವುದನ್ನು ಮನಗದಲ್ಲಿಟ್ಟುಕೊಂಡು ಸದಾ ಕಾಂಗ್ರೆಸ್ ಪರವಾಗಿಯೇ ಇರುವ ಮುಸ್ಲಿಮರಿಗೆ ತಾಲೂಕಿನಲ್ಲಿ ಬಾರಿ ಅನ್ಯಾಯವಾಗಿದೆ .
ಮುಸ್ಲಿಂ ಸಮಾಜದ ಅಭ್ಯರ್ಥಿ ಯೊಬ್ಬರು ಪುರಸಭೆ ಅಧ್ಯಕ್ಷ ರಾಗುವುದನ್ನು ಸಹಿಸದ ಕಾಂಗ್ರೆಸ್ ಪಕ್ಷದವರೇ ಈ ರೀತಿ ಮಾಡಿರುವುದು ದುರದೃಷ್ಟಕರ ಸಂಗತಿ ಆ ಕಾರಣಕ್ಕಾಗಿ ಇದಕ್ಕೆ ಕಾರಣಕರ್ತರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ ಅಂಜಿನಪ್ಪನವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಆಗ್ರಹಿಸಿದ್ದಾರೆ .
ಇವರು ತಾಲೂಕಿನಲ್ಲಿ ಮುಸ್ಲಿಂ ಸಮಾಜವನ್ನು ರಾಜಕೀಯವಾಗಿ ವ್ಯವಸ್ಥಿತ ರೀತಿಯಲ್ಲಿ ಅತ್ತಿಕಲು ಪ್ರಯತ್ನಿಸುತ್ತಿದ್ದಾರೆ ಅಲ್ಲದೆ ಇದೇ ರೀತಿಯ ಮನಸ್ಥಿತಿಯೂ ಪಕ್ಷದಲ್ಲಿ ಮುಂದುವರೆದಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಬರುವ ಚುನಾವಣೆಗಳಲ್ಲಿ ಮುಸ್ಲಿಂ ಸಮಾಜದವರು ಪಕ್ಷಕ್ಕೆ ತಕ್ಕ ಪಾಠವನ್ನು ತಾಲೂಕಿನಲ್ಲಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಪುರಸಭೆ ಮಾಜಿ ಸದಸ್ಯ ಡಿ .ಜಾವೂರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಬುಸಾಬ್ ಸಾಗೋಲಿ , ಮುಖಂಡರಾದ ದಾದಾಪೀರ್ , ಕೆ ಜಹಾಂಗೀರ್ ,ಪಿಯುಸೂಫ್, ಸೇರಿದಂತೆ ಇತರರು ತಿಳಿಸಿದ್ದಾರೆ