November 6, 2024

Vijayanagara Express

Kannada News Portal

ಬಸ್ ಪಲ್ಟಿ ಒಂದು ಸಾವು ಹಲವರಿಗೆ ಗಾಯ ಹೋರಾಟಗಾರರಿಂದ ಬಾರಿ ಆಕ್ರೋಶ

1 min read

ಬಸ್ ಪಲ್ಟಿ ಒಂದು ಸಾವು ಹಲವರಿಗೆ ಗಾಯ ಹೋರಾಟಗಾರರಿಂದ ಬಾರಿ ಆಕ್ರೋಶ

 

ಹರಪನಹಳ್ಳಿ : ಆ – 24 , ತಾಲೂಕಿನ ಸತ್ತೂರು ಗ್ರಾಮದ ಕೆರೆ ಹಿಂಭಾಗದಲ್ಲಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಒಬ್ಬರು ಸಾವನ್ನಪ್ಪಿದ್ದು ಹಲವರಿಗೆ ಗಾಯಗಳಾಗಿವೆ .

ಪಲ್ಟಿಯಾದ ಬಸ್ ಕೆ.ಎಸ್.ಆರ್.ಟಿ.ಸಿ. ಗೆ ಸಂಬಂಧಿಸಿದ ಬಸ್ ಆಗಿದ್ದು ಘಟನೆಗೆ ನೇರ ಕಾರಣ ಲೋಕೋಪಯೋಗಿ ಇಲಾಖೆಯ ಹೊಳಲು – ದಾವಣಗೆರೆ ರಾಜ್ಯ ಹೆದ್ದಾರಿ 150 ರಲ್ಲಿ ಆಗಿರುತ್ತದೆ ಘಟನಾ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಇತ್ತೀಚೆಗೆ 1ಕೋಟಿ 50 ಲಕ್ಷ ವೆಚ್ಚದಲ್ಲಿ ರಸ್ತೆಯ ನಿರ್ಮಾಣ ಕಾಮಗಾರಿ ಮಾಡಿದ್ದು ರಸ್ತೆ ಕಾಮಗಾರಿಯ ಸಿಸಿ ರಸ್ತೆ ಮಾತ್ರ ಗಟ್ಟಿಯಾಗಿದ್ದು ರಸ್ತೆ ಎರಡು ಇಕ್ಕಲೆಗಳಲ್ಲಿ ಗಟ್ಟಿಯಾದ ಗ್ರಾವಲ್ ಮಣ್ಣನ್ನು ಹಾಕಿರುವುದಿಲ್ಲ ಮೊದಲೇ ಕೆರೆಯ ಏರಿಯ ಪಕ್ಕದಲ್ಲಿ ಇರುವುದರಿಂದ ರಸ್ತೆ ಕಾಮಗಾರಿಯ 2 ಇಕ್ಕೆಲಗಳಲ್ಲಿ ಗಟ್ಟಿಯಾದ ಮಣ್ಣನ್ನು ಹಾಕಲು ನಿರ್ಲಕ್ಷ ಮಾಡಲಾಗಿದೆ ಅದರಲ್ಲಿಯೂ ಕೆರೆಯ ಪ್ರದೇಶವಾಗಿರುವುದರಿಂದ ಸಾಮಾನ್ಯವಾಗಿ ಜನರು ನಡೆದಾಡಿದರೂ ಸಹ ಮಣ್ಣು ಮೃದುವಾಗಿ ಇರುವುದರಿಂದ ಜನರು ಮತ್ತು ವಾಹನಗಳು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ ಬಸ್ಸು ಆ ಭಾಗದಲ್ಲಿ ಸಾಗುತ್ತಿರುವಾಗ ಎದುರಿಗೆ ಬಂದ ವಾಹನವನ್ನು ಮುಂದಕ್ಕೆ ಸಾಗಲು ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಪಕ್ಕಕ್ಕೆ ಸ್ವಲ್ಪ ಬಸ್ಸು ನಿಧಾನವಾಗಿ ಸರಿದುಕೊಂಡಿದೆ ಕೆಸರಿಗೆ ಗಾಲಿ ತಗುಲಿದ ತಕ್ಷಣ ರಸ್ತೆ ಪಕ್ಕದಲಿರುವ ಕೆಸರು ಮೃದುವಾಗಿದ್ದು ನಿಧಾನವಾಗಿ ಗಾಲಿಯು ಕೆಸರಲ್ಲಿ ಮುಳುಗತೊಡಗಿದೆ ಹಾಗಾಗಿ ನಿಧಾನವಾಗಿ ಬಸ್ಸು ಪಲ್ಟಿಯಾಗಿ ಬುಡಮೇಲಾಗಿ ಬಿದ್ದಿದೆ ಈ ಕಾರಣದಿಂದಾಗಿ ಅಪಘಾತವಾಗಿದೆ ಎಂದು ಕೆಎಸ್ಆರ್.ಟಿ. ಸಿ ಡಿಪೋ ವ್ಯವಸ್ಥಾಪಕರಾದ ರೂಪ ಅವರು ತಿಳಿಸಿರುತ್ತಾರೆ ವಾಹನದ ಸಂಖ್ಯೆ ಕೆ ಎ 17 ಎಫ್ 1441 ದಾವಣಗೆರೆ ಡಿಪೋಕ್ಕೆ ಸಂಬಂಧಿಸಿದ ವಾಹನ ವಾಗಿರುತ್ತದೆ 46 ಪ್ರಯಾಣಿಕರಿದ್ದ ಈ ಬಸ್ಸು ದಾವಣಗೆರೆ ಕಡೆಯಿಂದ ಹರಪನಹಳ್ಳಿ ಕಡೆಗೆ ಸತ್ತೂರು ಮಾರ್ಗವಾಗಿ ಹೊರಟಿದ್ದು ಸತ್ತೂರು ಗ್ರಾಮದ ಹನುಮಕ್ಕ 50 ವರ್ಷ ಮೃತದುರ್ದೈವಿಯಾಗಿರುತ್ತಾರೆ ಪ್ರಕರಣ ಅರಸೀಕೆರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ .


ಬಸ್ ಪಲ್ಟಿಯಾಗಿ ಅಪಘಾತವಾಗಿ ಈ ರೀತಿಯ ಒಬ್ಬರ ಸಾವಿಗೆ ಕಾರಣವಾಗಿ ಹಲವಾರು ಜನರಿಗೆ ಗಾಯವಾಗಿರುವುದಕ್ಕೆ ನೇರವಾಗಿ ಲೋಕೋಪಯೋಗಿ ಇಲಾಖೆಯವರು ನಿರ್ಮಿಸಿರುವ ಬೇಜವಾಬ್ದಾರಿ ರಸ್ತೆಯೇ ಕಾರಣವಾಗಿದೆ ಅತಿ ಹೆಚ್ಚು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಗುತ್ತಿಗೆದಾರರು ರಸ್ತೆಯ ಎರಡು ಕಡೆಗಳಲ್ಲಿ ವಾಹನಗಳು ಸರಾಗವಾಗಿ ಪಕ್ಕಕ್ಕೆ ಸೆರಿದುಕೊಳ್ಳಲು ಗಟ್ಟಿ ಮಣ್ಣನ್ನು ಹಾಕಿ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಕಾಮಗಾರಿಯ ಸಮಯ ಮುಗಿದರು ಇನ್ನೂ ಕಾಮಗಾರಿಯನ್ನು ಪೂರ್ಣಗೊಳಿಸಿರುವುದಿಲ್ಲ ಎಲ್ಲಾ ಕಾರಣಗಳಿಂದಾಗಿ ಸಂಬಂಧಪಟ್ಟ ಇಂಜಿನಿಯರನ್ನು ಈ ಕೂಡಲೇ ಸಸ್ಪೆಂಡ್ ಮಾಡಿ ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಗೊಳಿಸಿ ಬಿಲ್ಲನ್ನು ತಡೆಗಟ್ಟಿ ಮೃತರ ಕುಟುಂಬಕ್ಕೆ ನೀಡಲು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆ ವಿರುದ್ಧ ಉಗ್ರವಾದ ಹೋರಾಟವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು .

ಹೋರಾಟಗಾರ ಹೆಚ್. ವೆಂಕಟೇಶ್
ಕರ್ನಾಟಕ  ರೈತ ಮಿತ್ರ ಸಂಘ ರಾಜ್ಯಾಧ್ಯಕ್ಷ

ರಸ್ತೆಯು ನಿರ್ಮಾಣ ಹಂತದಲ್ಲಿ ಇರುವುದರಿಂದ ಬೇರೆ ಮಾರ್ಗವಾಗಿ ಬಸ್ಸುಗಳನ್ನು ಓಡಾಡಿಸಲು ನಾವು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದೇವು ಆದಾಗ್ಯೂ ಸಹ ಇದೇ ಮಾರ್ಗವಾಗಿ ವಾಹನಗಳು ಓಡಾಡಿವೆ ಆ ಕಾರಣದಿಂದಾಗಿ ಈ ರೀತಿಯ ಅಪಘಾತವಾಗಿದೆ ನಾವು ರಸ್ತೆಯನ್ನು ಎಷ್ಟು ಸಾಧ್ಯವೊ ಅಷ್ಟು ವ್ಯವಸ್ಥಿತವಾಗಿ ನಿರ್ಮಿಸಲು ಪ್ರಯತ್ನಿಸುತಿದ್ದೇವೆ .

ಪ್ರಕಾಶ್ ಪಾಟೀಲ್.
ಸಹಾಯಕ ಕಾರ್ಯ ಪಾಲಕ ಅಭಿಯಂತರರು ಲೋಪಯೋಗಿ ಇಲಾಖೆ ಹರಪನಹಳ್ಳಿ ಉಪವಿಭಾಗ

 

Leave a Reply

Your email address will not be published. Required fields are marked *