September 18, 2024

Vijayanagara Express

Kannada News Portal

ತಾಲೂಕು ಕ್ರೀಡಾಂಗಣದಲ್ಲಿ ಗೃಹ ರಕ್ಷಕದಳದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

1 min read

 

ತಾಲೂಕು ಕ್ರೀಡಾಂಗಣದಲ್ಲಿ ಗೃಹ ರಕ್ಷಕದಳದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಹರಪನಹಳ್ಳಿ: ಜೂ -14 ,ತಾಲೂಕು ಕ್ರೀಡಾಂಗಣದಲ್ಲಿ ಗೃಹ ರಕ್ಷಕದಳದ ವತಿಯಿಂದ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಹರಪನಹಳ್ಳಿ ತಾಲೂಕಿನಲ್ಲಿರುವ ರಕ್ಷಕ ದಳದ ಸಿಬ್ಬಂದಿ ಮತ್ತು ವಿಶೇಷ ಆಹ್ವಾನಿತರಾದ ರಕ್ಷಕ ದಳದ ವಿಜಯನಗರ ಜಿಲ್ಲಾ ಬೋಧಕರಾದ ಪ್ರಶಾಂತ್ ಪಾಟೀಲ್ ಹಾಗೂ ಹರಪನಹಳ್ಳಿಯ ಸಾಹಿತಿ ದಿವಂಗತ ಕುಂ.ಬಾ ಸದಾಶಿವಪ್ಪ ರವರ ಪುತ್ರರಾದ ಶಿಕ್ಷಕ ಜಯಮಾಲತೇಶ್ ರವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಈ ವೇಳೆ ಮಾತನಾಡಿದ ಗೃಹರಕ್ಷಕ ದಳದ ಜಿಲ್ಲಾ ಬೋಧಕರಾದ ಪ್ರಶಾಂತ್ ಪಾಟೀಲ್ ರವರು 50 ಜನ ಸೇರಿ ಒಂದು ಗಿಡವನ್ನು ನೆಡಬಾರದು 50 ಜನರು ಒಂದೊಂದು ಗಿಡವನ್ನು ನೆಡುವಂತಹ ವ್ಯವಸ್ಥೆಯಾಗಬೇಕು ಕೇವಲ ಗಿಡ ನೆಡುವ ಕಾರ್ಯಕ್ರಮವನ್ನು ಕಾರ್ಯಕ್ರಮ ಫೋಟೋಗಳಿಗೆ ಸೀಮಿತಗೊಳಿಸಬಾರದು ಅದನ್ನು ಅಕ್ಷರಶಃ ಪ್ರತಿಯೊಬ್ಬರು ಗಿಡವನ್ನು ನೆಡುವ ಮೂಲಕ ಪರಿಸರವನ್ನು ಉಳಿಸಬೇಕು ಬೆಳೆಸಬೇಕು ಎಂಬ ಕಾಳಜಿಯನ್ನು ಹೊಂದಿದ್ದರೆ ಮಾತ್ರ ಪರಿಸರವನ್ನು ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದರು .

ಈ ವೇಳೆ ಮಾತನಾಡಿದ ಶಿಕ್ಷಕ ಜಯಮಾಲತೇಶ್
ಗೃಹರಕ್ಷಕ ದಳ ಹರಪನಹಳ್ಳಿ ಉತ್ತಮ ಇತಿಹಾಸವನ್ನು ಹೊಂದಿದ್ದು ಸೇವೆಯ ಮನೋಭಾವದಿಂದ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದೆ. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ತಾಲೂಕು ಕ್ರೀಡಾಂಗಣದಲ್ಲಿ ಸಸ್ಯಗಳನ್ನು ನೆಡುವುದರ ಮೂಲಕ ಉತ್ತಮ ಕಾರ್ಯಕ್ಕೆ ಚಾಲನೆ ನೀಡಿದೆ..
ಹವ್ಯಾಸ ಬದಲಿಸು ಹಣೆಬರ ಬದಲಾದೀತು….
ದೃಷ್ಟಿ ಬದಲಿಸು ದೃಶ್ಯ ಬದಲಾದೀತು…ದೋಣಿ ಬದಲಿಸ ಬೇಕಿಲ್ಲ…ದಿಕ್ಕು ಬದಲಿಸಿದರೆ ಸಾಕು ದಡ ಸಿಕ್ಕಿತು.. ದಡ ಸಿಕ್ಕಿತು…ಎಂಬ ಅಸಾದುಲ್ಲಾ ಬೇಗ್ ರವರ ಮಾತಿನಂತೆ
ಸಸ್ಯಗಳನ್ನು ಬೆಳೆಸದೆ ಹೋದರೆ ಏನಾಗುತ್ತದೆ ಎಂಬುದನ್ನು ಇಂದಿನ ದಿನಮಾನಗಳಲ್ಲಿ ಉಷ್ಣತೆ ಹೆಚ್ಚಾಗುವುದನ್ನು ನಾವು ಕಾಣುತ್ತಿದ್ದೇವೆ ಅದಕ್ಕೆ ಉದಾಹರಣೆಯೆಂದರೆ ಪ್ರತಿ ವರ್ಷ ರಾಜಸ್ಥಾನದಲ್ಲಿ ದಾಖಲಾಗುವ ಉಷ್ಣಾಂಶವು ಈ ವರ್ಷ ಕರ್ನಾಟಕದಲ್ಲೂ ಸಹ ಅತಿ ಹೆಚ್ಚು ಉಷ್ಣಾಂಶವು ದಾಖಲಾಗಿರುವುದನ್ನು ಕಂಡಿದ್ದೇವೆ ಆದ್ದರಿಂದ ಸಸ್ಯಗಳನ್ನು ಬೆಳೆಸುವಲ್ಲಿ ನಾವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.. ಇಂಥ ಜಾಗೃತಿ ಮೂಡಿಸುವ ಕೆಲಸ ಗೃಹ ರಕ್ಷಕ ದಳ ಹರಪನಹಳ್ಳಿ ಇವರಿಂದ ಆಗುತ್ತಿರುವುದು ಶ್ಲಾಘನೀಯ.. ಹರಪನಹಳ್ಳಿಯ ಗೃಹರಕ್ಷಕ ದಳದ ಘಟಕದವರು ಅತ್ಯಂತ ಹೆಚ್ಚಿನ ಶಿಸ್ತು ಮತ್ತು ಸೇವೆಗೆ ಹೆಸರಾಗಿರುವುದು ಇತಿಹಾಸವಿದೆ. ಆರೋಗ್ಯಕ್ಕಿಂತ ಬೇರೆ ಯಾವುದೇ ಭಾಗ್ಯ ಇಲ್ಲ ಎನ್ನುವ ಹಾಗೆ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ಪರಿಸರ ಮುಖ್ಯ ಉತ್ತಮ ಪರಿಸರವನ್ನು ನಿರ್ಮಿಸುವಲ್ಲಿ ಸಸ್ಯಗಳ ಪಾತ್ರ ಮಹತ್ವದಾಗಿದೆ. ಸಸಿಗಳನ್ನು ನೆಡುವ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿರುವ ಹರಪನಹಳ್ಳಿ ಗೃಹ ರಕ್ಷಕ ದಳ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಹೇಳಿದರು.

ಈ ವೇಳೆ ಪಿ.ವಾಗೀಶ್, ಎಸ್ ಎಂ ಮಲ್ಲಿಕಾರ್ಜುನಯ್ಯ , ಮಾತನಾಡಿದರು.
ಈ ಸಂದರ್ಭದಲ್ಲಿ ಎಂ ಮಾಲತೇಶ್ ಜಿ ರಾಮಚಂದ್ರಪ್ಪ, ಕೆ ಬಸವರಾಜ್ ,ಸುಭಾಷ್ ಕೆ ,ಕೋಟೆಪ್ಪ, ಎಸ್ ಹಾಲಸ್ವಾಮಿ, ಯು ಅಜ್ಜಯ್ಯ ,ಕೆ ಲಿಂಗರಾಜ ,ಎಚ್ ರಾಜಪ್ಪ ,ಎಚ್ ಬಸಣ್ಣ ಡಿ ಸುಭಾನ್ , ಕ್ರೀಡಾಂಗಣ ಮಂಜುನಾಥ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *