Vijayanagara Express

Kannada News Portal

ವಿ ಎಸ್ ಉಗ್ರಪ್ಪ ಮತ್ತು ಶಂಕರನಹಳ್ಳಿ ಡಾ ಉಮೇಶ್ ಬಾಬು ರವರನ್ನು ಎಂ ಎಲ್ ಸಿ ಯನ್ನಾಗಿ ಮಾಡುವಂತೆ ಒತ್ತಾಯ

1 min read

ವಿ ಎಸ್ ಉಗ್ರಪ್ಪ ಮತ್ತು ಶಂಕರನಹಳ್ಳಿ ಡಾ ಉಮೇಶ್ ಬಾಬು ರವರನ್ನು ಎಂ ಎಲ್ ಸಿ ಯನ್ನಾಗಿ ಮಾಡುವಂತೆ ಒತ್ತಾಯ

 

ಹರಪನಹಳ್ಳಿ : ಜೂ- 2 , ಬಳ್ಳಾರಿ ಭಾಗದ ಅಹಿಂದ ವರ್ಗದ ಮುಖಂಡರುಗಳಾದ ವಿ ಎಸ್ ಉಗ್ರಪ್ಪ ಮತ್ತು ಶಂಕರನಹಳ್ಳಿ ಡಾ .ಉಮೇಶ್ ಬಾಬು ರವರುಗಳಿಗೆ ಎಂ ಎಲ್ ಸಿ ಯಾಗಿ ನೇಮಕ ಮಾಡುವಂತೆ ಅಹಿಂದ ಮುಖಂಡರುಗಳು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಪತ್ರವನ್ನು ಬರೆದಿದ್ದಾರೆ .

ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ತಿಪ್ಪನಹಳ್ಳಿ ತಿಮ್ಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಂತಹ ನಾಯಕರುಗಳಾದ ವಿ ಎಸ್ ಉಗ್ರಪ್ಪ ಮತ್ತು ಹರಪನಹಳ್ಳಿ ತಾಲೂಕಿನ ಕಳೆದ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಶಂಕರನಹಳ್ಳಿ ಡಾ .ಉಮೇಶ್ ಬಾಬು ರವರುಗಳು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದು ಈ ಭಾಗದಲ್ಲಿ ಪಕ್ಷವನ್ನು ಕಟ್ಟುವುದಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ ಬಳ್ಳಾರಿ ಭಾಗದಲ್ಲಿ ಗಣಿ ಧಣಿಗಳು ಎನಿಸಿಕೊಂಡ ರೆಡ್ಡಿ ಬ್ರದರ್ಸ್ ( ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಗಾಲಿ ಸೋಮಶೇಖರ ರೆಡ್ಡಿ, ಶ್ರೀರಾಮುಲು) ಕೈಯಲ್ಲಿ ಸಿಕ್ಕಿದ್ದ ಬಳ್ಳಾರಿಯು ಬಿಜೆಪಿ ಮಯವಾಗಿತ್ತು 1999ರ ನಂತರ ಬಳ್ಳಾರಿಯಲ್ಲಿ ಕಾಂಗ್ರೆಸ್ ಮೂಲೆಗೆ ಸೇರಿತ್ತು ಇಂತಹ ಸಂದರ್ಭದಲ್ಲಿ ಪಕ್ಷವನ್ನು ಸಂಘಟಿಸಲು ಹಿರಿಯರಾದ ಕೆ.ಸಿ.ಕೊಂಡಯ್ಯ, ಬಸವರಾಜೇಶ್ವರಿ ,ಕೋಳೂರು ಬಸವನಗೌಡ ಇವರುಗಳ ಜೊತೆಗೆ ಅನೇಕ ಹಿರಿಯ, ಕಿರಿಯ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಗ್ರಪ್ಪ ಮತ್ತು ಶಂಕರ್ ನಳ್ಳಿ ಉಮೇಶ್ ಬಾಬು ರವರು ಸಾಕಷ್ಟು ಕೆಲಸವನ್ನು ಪಕ್ಷಕ್ಕಾಗಿ ಮಾಡಿದ್ದಾರೆ ಅಲ್ಲದೆ ಉಗ್ರಪ್ಪರವರು ಪಕ್ಷದ ಹಿರಿಯ ಮುತ್ಸದ್ದಿಯಾಗಿದ್ದು ವಾಲ್ಮೀಕಿ ಸಮುದಾಯದ ನಾಯಕರೂ ಸಹ ಆಗಿದ್ದಾರೆ ಅಲ್ಲದೆ ಪರಿಶಿಷ್ಟ ಪಂಗಡದ ವರಾಗಿದ್ದಾರೆ ಇವರನ್ನೂ ಸಹ ಎಂ ಎಲ್ ಸಿ ಮನ್ನಾ ಮಾಡಬೇಕು ಹಾಗೂ ಹಿಂದುಳಿದ ವರ್ಗಗಳಲ್ಲಿ ಬರುವ ಉಪ್ಪಾರ ಸಮುದಾಯಕ್ಕೆ ಇದುವರೆಗೂ ಯಾವ ಸರ್ಕಾರದಲ್ಲೂ ಸಹ ಎಂ ಎಲ್ ಸಿ ಯಾಗಿ ಯಾರನ್ನೂ ಸಹ ನೇಮಕ ಮಾಡಿರುವುದಿಲ್ಲ ಇವರು ಹರಪನಹಳ್ಳಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಉದ್ಯೋಗ ಮೇಳವನ್ನು ನೆಡೆಸಿ ಸುಮಾರು 3000 ನಿರುದ್ಯೋಗಿಗಳು ಉದ್ಯೋಗವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ ಮತ್ತು ಕರೋನಾದ ಸಂದರ್ಭದಲ್ಲಿ ನೂರಾರು ಬಡ ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ ಅಲ್ಲದೆ ಬಡಬಗ್ಗರಿಗೆ ಇನ್ನೂ ನಾನಾ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದಾರೆ ಹಾಗಾಗಿ ಇವರು ಪಕ್ಷಕ್ಕಾಗಿ ದುಡಿದ ಸೇವೆಯನ್ನು ಪರಿಗಣಿಸಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ನೇಮಕ ಮಾಡುವ ಕೋಟಾದಡಿಯಲ್ಲಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ವಿಭಾಗದಿಂದ ವಿ.ಎಸ್ ಉಗ್ರಪ್ಪ ಮತ್ತು ಶಂಕರನಳ್ಳಿ ಉಮೇಶ್ ಬಾಬು ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಬೇಕೆಂದು ಈ ಮೂಲಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಪತ್ರವನ್ನು ಬರೆದಿದ್ದೇವೆ ಈ ಸಂದರ್ಭದಲ್ಲಿ ಅಡಿವಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸನ್ನಕುಮಾರ್, ನಸ್ರುಲ್ಲಾ, ದಕ್ಷಿಣ ಮೂರ್ತಿ,ಮೂಕಣ್ಣ, ಮಂಜುನಾಥ್,ರಾಜಪ್ಪ, ಕೂಡ್ಲಿಗಿಯ ಹನುಮಂತಪ್ಪ, ಮಹೇಂದ್ರ ಸ್ವಾಮಿ, ಎನ್ ತಿಪ್ಪೇಸ್ವಾಮಿ,ಡಿ ಉಮಾ, ಹೊಸಪೇಟೆ ವೆಂಕಟರಮಣ,ತಾರ ಮುಂತಾದವರು ಹಾಜರಿದ್ದರು ಎಂದು ತಿಳಿಸಿದ್ದಾರೆ .

 

ರಾಜ್ಯದಲ್ಲಿ ಇದುವರೆಗೂ ಯಾವುದೇ ಸರ್ಕಾರದಲ್ಲಿ ಉಪ್ಪಾರ ಸಮುದಾಯದವರನ್ನು ಎಂ ಎಲ್ ಸಿ ಯನ್ನಾಗಿ ಮಾಡಿರುವುದಿಲ್ಲ ಹಿಂದುಳಿದ ವರ್ಗಗಳಲ್ಲೇ ಉಪ್ಪಾರ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನ್ಯಾಯ ಒದಗಿಸಬೇಕು.

 

ತಿಪ್ಪನಹಳ್ಳಿ ತಿಮ್ಮಣ್ಣ

ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ

ಕೆಪಿಸಿಸಿ

Leave a Reply

Your email address will not be published. Required fields are marked *