September 14, 2024

Vijayanagara Express

Kannada News Portal

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ತಾಲೂಕು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಒಳಜಗಳ

1 min read

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ
ತಾಲೂಕು ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಒಳಜಗಳ

ಹರಪನಹಳ್ಳಿ : ಆ – 21 , ಬುಧವಾರ ನಡೆಯಬೇಕಿದ್ದ ಪುರಸಭಾ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯು ಕೋರ್ಟ್ ನ ತಡೆಯಜ್ಞೆಯಿಂದಾಗಿ ರದ್ದುಗೊಂಡಿದೆ .

 

ಹರಪನಹಳ್ಳಿ ಪುರಸಭೆಯ ಸದಸ್ಯರ ಸಂಖ್ಯೆ 27 ಆಗಿದ್ದು ಆ ಸದಸ್ಯರ ಪೈಕಿ 14 ಕಾಂಗ್ರೆಸ್, 10 ಬಿಜೆಪಿ, 2 ಪಕ್ಷೇತರ 1 ಜೆಡಿಎಸ್ ಆಗಿದ್ದು ಪುರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗದ್ದುಗೆಗೇರಲು ಬೇಕಾದ ಸಂಪೂರ್ಣ ಬಹುಮತ ಕಾಂಗ್ರೆಸ್ ಬಳಿಯಲ್ಲಿ ಇದ್ದರೂ ಸಹ ಕಾಂಗ್ರೆಸ್ ನವರೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಯನ್ನು ತಂದಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ರದ್ದುಗೊಂಡು ಮೊದಲ ಬಾರಿಗೆ ಚುನಾವಣೆಗೆ ಮತ ಹಾಕಲು ಬಂದಿದ್ದಂತಹ  ದಾವಣಗೆರೆ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು  ಮುಜುಗರಕ್ಕೆ  ಹೀಡಾಗಿ ಬಾರಿ ಮುಖಭಂಗ ಅನುಭವಿಸಿದಂತಾಯಿತು  ಹಿಗಾಗಿ ಶಾಸಕಿ ಮತ್ತು ಸಂಸದರು ಬಂದ ದಾರಿಗೆ ಸುಂಕವಿಲ್ಲ  ಎಂಬಂತೆ  ಯಾವುದೇ ಪ್ರಯೋಜನವಿಲ್ಲದೆ  ಬರಿಗೈಯಲ್ಲಿ  ವಾಪಸ್ಸಾದರು .

ಇದರಿಂದಾಗಿ ಹರಪನಹಳ್ಳಿಯ ತಾಲೂಕಿನ ಕಾಂಗ್ರೆಸ್ ವಲಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗುಟ್ಟಾಗಿ ಉಳಿಯಲಿಲ್ಲ , ಸಂಪೂರ್ಣ ಬಹುಮತದ ಬೆಂಬಲವಿದ್ದರೂ ಸಹ ಕಾಂಗ್ರೆಸ್ ಈ ಹಿಂದೆ ಕೂಡ ಆಂತರಿಕ ಕಿತ್ತಾಟದಿಂದಾಗಿ ಅಧ್ಯಕ್ಷರ ಗದ್ದುಗೆಯನ್ನು ಏರಲು ಸಾಧ್ಯವಾಗಿರಲಿಲ್ಲ ಇದಕ್ಕೆ ಕಾರಣವೇ ಕಾಂಗ್ರೆಸ್ ನಲ್ಲಿದ್ದ ಗುಂಪುಗಾರಿಕೆ ಮತ್ತು ಒಳಜಗಳ ಎಂದು ಜಗಜ್ಜಹಿರಾಗಿತ್ತು ಆದರೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿ ಬಂದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ಇಂತಹ ಭಿನ್ನಾಭಿಪ್ರಾಯಗಳನ್ನು ದಿನದಿಂದ ದಿನಕ್ಕೆ ಶಮನಮಾಡುತ್ತಾ ಬಂದಿದ್ದರು ಆದರೆ ಇದೀಗ ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್ ಒಳಜಗಳ ಇದ್ದಕ್ಕಿದ್ದಂತೆ ಆರಂಭವಾಗಿದೆ ಶಾಸಕರು ಕಾಂಗ್ರೆಸ್ಸಿನ ಎಲ್ಲಾ ಮುಖಂಡರನ್ನು ಕಾಂಗ್ರೆಸ್ ನಿಂದ ಆಯ್ಕೆಯಾದ ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಶಾಸಕರು ವಿಫರಾಗಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ ಹಾಗಾಗಿ ಪುರಸಭೆಯ ಈ ಚುನಾವಣೆಯಲ್ಲಿ ಈ ರೀತಿಯ ಅಸಮಾಧಾನಗಳು ಗೊಂದಲಗಳು  ಇವುಗಳಿಗೆ ಕಾರಣವಾಗಿವೆ ಎಂದು ಸಹ ಹೇಳಲಾಗುತ್ತದೆ .

ಬುಧವಾರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ರದ್ದುಗೊಂಡ ನಂತರ ಶಾಸಕರ ನಿವಾಸ ಮತ್ತು ಜನಸಂಪರ್ಕ ಕಚೇರಿಯ ಬಳಿ ಅಧ್ಯಕ್ಷರ ಹುದ್ದೆಗೆ ನಾಮಪತ್ರವನ್ನು ಸಲ್ಲಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಫಾತಿಮಾ ಅವರ ಬೆಂಬಲಿಗರು ಕೆಲಕಾಲ ತಮ್ಮ ಆಕ್ರೋಶಗಳನ್ನು ಹೊರಹಾಕುತ್ತಾ ಮುಂದಿನ ದಿನಗಳಲ್ಲಿ ರಾಜಕಾರಣದ ಬಗ್ಗೆ ನಾವು ಹೇಗೆ ಎಂಬುದನ್ನು ತೋರಿಸುತ್ತೇವೆ ಮುಸ್ಲೀಂರು ಮತಗಳನ್ನು  ಹಾಕಿ  ಇವರನ್ನು  ಚುನಾವಣೆಯಲ್ಲಿ  ಗೆಲ್ಲಿಸಿಲ್ಲವೇ   ಮುಸ್ಲಿಂ ಅಭ್ಯರ್ಥಿಯೊಬ್ಬರು ಅಧ್ಯಕ್ಷರಾಗಲು ಕಾಂಗ್ರೆಸ್ ನವರೆ  ಏಕೆ  ವಿರೋಧ  ಮಾಡಬೇಕಾಗಿತ್ತು  ಮುಂದೆ ನೋಡೋಣ ನಮಗೂ ಸಮಯ ಬರುತ್ತೆ ಎಂದು ಬೈದಾಡುತ್ತಾ  ಓಡಾಡುತ್ತಿದ್ದಿದ್ದು ಕಂಡು ಬಂದಿತು  ನಂತರ ಶಾಸಕರ ಆಪ್ತರು ಅವರನ್ನು ಸಮಾಧಾನ ಪಡಿಸಲು  ಯತ್ನಿಸಿದರೂ ಯಾವುದೇ ಪ್ರಯೋಜನವಾಗಲ್ಲಿಲ್ಲ ಹೀಗಾಗಿ ತಾಲೂಕಿನ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯಗಳು ಗುಂಪುಗಾರಿಕೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ .

 

Leave a Reply

Your email address will not be published. Required fields are marked *