ಪಟ್ಟಣದಲ್ಲಿ ಶಾಸಕರ ದಿಡೀರನೆ ಬೀದಿ ದೀಪಗಳ ವೀಕ್ಷಣೆ ಪತ್ರಕರ್ತರ ಅವಶ್ಯಕತೆ ಇಲ್ಲ ಎಂದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ
1 min readಪಟ್ಟಣದಲ್ಲಿ ಶಾಸಕರ ದಿಡೀರ್ ಬೀದಿ ದೀಪಗಳ ವೀಕ್ಷಣೆ ಪತ್ರಕರ್ತರ ಅವಶ್ಯಕತೆ ಇಲ್ಲ ಎಂದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ
ವಿಶೇಷ ವರದಿ: ಪಟ್ನಾಮದ ವೆಂಕಟೇಶ್ ಹರಪನಹಳ್ಳಿ
ಹರಪನಹಳ್ಳಿ: ಮೇ – ಪಟ್ಟಣದ ಹರಿಹರ ಹೊಸಪೇಟೆ ಮುಖ್ಯರಸ್ತೆಯ ಬೀದಿ ದೀಪಗಳ ವೀಕ್ಷಣೆಗಾಗಿ ಸಂಜೆ 7.30 ರ ಸುಮಾರಿಗೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ದಿಢೀರ್ ಭೇಟಿ ನೀಡಿದರು ಈ ಸಂದರ್ಭದಲ್ಲಿ ಅಕಸ್ಮಾತ್ತಾಗಿ ಶಾಸಕಿಯನ್ನು ಕಂಡ ಸ್ಥಳೀಯ ಪತ್ರಕರ್ತರೊಬ್ಬರು ಅವರಡೆಗೆ ಧಾವಿಸಿ, ಫೋಟೋ ತೆಗೆಯಲು ಮುಂದಾದರು ಅವರನ್ನು ನೋಡಿದ ತಕ್ಷಣ ಪತ್ರಕರ್ತರನ್ನು ನಾನು ಬರಲು ಹೇಳಿಲ್ಲ ಅವರ ಅವಶ್ಯಕತೆ ನಮಗಿಲ್ಲ ನಾವು ಕರೆದಾಗ ಬರುವಂತೆ ಈಗ ಹೋಗಿರಿ ಎಂದು ಹೇಳಿದ ಘಟನೆಯು ಗುರುವಾರ ಸಂಜೆ ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ನೆಡೆದಿದೆ .
ಶಾಸಕರೆಂದರೆ ಸಾರ್ವಜನಿಕ ವ್ಯಕ್ತಿಗಳು ,ಜನರು ಅವರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿರುತ್ತಾರೆ ಜನರ ಸೇವೆಗೆ ಒಂದು ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ನೀಡಿದಾಗ ಅವರು ಭೇಟಿ ನೀಡಿದ ಅಥವಾ ಚರ್ಚಿಸಿದ ವಿಷಯಗಳನ್ನು ಆ ಕ್ಷೇತ್ರದ ಜನರಿಗೆ ತಿಳಿಸುವ ಹೊಣೆಗಾರಿಕೆ ಪತ್ರಿಕೆಯ ಆದ್ಯ ಜವಾಬ್ದಾರಿ ಹಾಗೂ ಕರ್ತವೂ ಸಹ ಹೌದು ,ಇದನ್ನು ಜನತೆಗೆ ತಿಳಿಸಬಾರದು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಶಾಸಕರು ಅಥವಾ ಇನ್ನಿತರ ಯಾವುದೇ ಜನಪ್ರತಿನಿಧಿಗಳು ನಿಂತು ಸ್ಥಳ ವೀಕ್ಷಣೆ ಮಾಡುವುದಾಗಲಿ ಅಥವಾ ಯಾವುದಾದರೂ ವಿಷಯವನ್ನು ಚರ್ಚಿಸುತ್ತಿರುವುದಾಗಲಿ ಅದನ್ನು ಪತ್ರಿಕೆಯವರು ಸೆರೆಹಿಡಿಯುವಂತಿಲ್ಲ ಅಥವಾ ಅದನ್ನು ಪತ್ರಿಕೆ ಅಥವಾ ಡಿಜಿಟಲ್ ಮೀಡಿಯಾಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಯಾವುದೇ ನಿರ್ಬಂಧ ವಿಧಿಸಲು ಶಾಸಕರಿಗೆ ಯಾವುದೇ ಹಕ್ಕು ಅಧಿಕಾರ ಖಂಡಿತ ಇರುವುದಿಲ್ಲ .
ಶಾಸಕರಾಗಲಿ ,ಸಚಿವರಾಗಲಿ , ಮುಖ್ಯಮಂತ್ರಿಗಳಾಗಲಿ ವಿಧಾನ ಪರಿಷತ್ ಸದಸ್ಯರಾಗಲಿ ,ಸಂಸದರಾಗಲಿ ಯಾವುದೇ ಜನಪ್ರತಿನಿಧಿಗಳೇ ಆಗಲಿ ಇವರೆಲ್ಲರೂ ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾದಂತವರು ಇವರು ಸಾರ್ವಜನಿಕ ವ್ಯಕ್ತಿಗಳಾಗಿರುತ್ತಾರೆ.
ಇವರು ಸಾರ್ವಜನಿಕ ಸ್ಥಳಗಳಲ್ಲಿ ಸೇರಿದಾಗ ಜನರು ಇವರನ್ನು ನೋಡಲು ಮತ್ತು ಇವರು ಯಾವ ಉದ್ದೇಶಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದಾರೆ ಏನು ಮಾಡುತ್ತಿದ್ದಾರೆ ಯಾವ ಸಮಸ್ಯೆ ಪರಿಹರಿಸಲು ಬಂದಿದ್ದಾರೆ ಅಥವಾ ಯಾವುದಾದರೂ ಅಭಿವೃದ್ಧಿ ಕಾರ್ಯಗಳನ್ನು ಶಿಕ್ಷಿಸಲು ಬಂದಿದ್ದಾರೆಯೇ ಎಂಬ ಕುತೂಹಲದಿಂದ ಜನ ಜಂಗುಳಿ ಸೇರುವುದು ಸಹಜ ಕುತೂಹಲದಿಂದ ಸೇರುವ ಹಕ್ಕು ಜನರಿಗಿದ್ದರೆ ಇನ್ನ ಜನ ಪ್ರತಿನಿಧಿಗಳು ಮತ್ತು ನಾಡಿನಲ್ಲಿ ನಡೆಯುವ ವಿಷಯಗಳನ್ನು ಜನರಿಗೆ ತಿಳಿಸುವ ಕೆಲಸದಲ್ಲಿ ನಿರತರಾಗಿರುವಂತ ಪತ್ರಕರ್ತರಿಗೆ ಇರುವುದಿಲ್ಲವೇ ಎಂಬುದು ಪತ್ರಕರ್ತರ ವಾದ ?
ದೇಶ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದ್ದಾಗ ಮಾತ್ರ ಪತ್ರಿಕಾ ಸ್ವಾತಂತ್ರ ಮಟಕಗೊಂಡು ನಿರ್ಭಂ ದಲ್ಲಿರುತ್ತದೆ ಉಳಿದಂತ ಸಂದರ್ಭಗಳಲ್ಲಿ ಪತ್ರಿಕೆಯನ್ನು ನಿರ್ಬಂಧಿಸುವ ಹಕ್ಕು ಯಾರಿಗೂ ಇರುವುದಿಲ್ಲ 2024ನೇ ಇಸ್ವಿ ದೇಶದಲ್ಲಿ ಈಗ ಯಾವುದೇ ತುರ್ತುಪರಿಸ್ಥಿತಿಯು ಜಾರಿ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ನಿರ್ಬಂಧಿಸುತ್ತಿರುವುದು ಒಳ್ಳೆಯದಲ್ಲ .
ಶಾಸಕರು ಖಾಸಗಿ ವಿಚಾರಕ್ಕಾಗಿ ಖಾಸಗಿ ಸ್ಥಳಗಳಲ್ಲಿ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಅಥವಾ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಅಂತ ಫೋಟೋಗಳನ್ನು ತೆಗೆಯುವ ಅಥವಾ ಅದರ ಬಗ್ಗೆ ಪ್ರಶ್ನಿಸುವ ರೀತಿ ಪತ್ರಕರ್ತರು ಮಾಡಿದರೆ ಅದು ತಪ್ಪಾದ ಕ್ರಮವಾಗಿರುತ್ತದೆ ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಶಾಸಕರು ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ನೀಡಿದಾಗ ಅದರ ಬಗ್ಗೆ ಪ್ರಶ್ನಿಸುವ ಪತ್ರಕರ್ತರ ಹಕ್ಕನ್ನು ಯಾವುದೇ ಶಾಸಕರು ಕಸಿದುಕೊಳ್ಳಲು ಅಥವಾ ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಬೇಕಿದೆ .
ಜನಪ್ರತಿನಿಧಿಗಳು ಸಾರ್ವಜನಿಕ ಸ್ಥಳಗಳಲ್ಲಿ ಭೇಟಿ ನೀಡಿದ ಫೋಟೋ ತೆಗೆಯುವ ಅಥವಾ ಸುದ್ದಿಯನ್ನು ಬಿತ್ತರಿಸಸಬಾರದು ಎಂದು ಪತ್ರಕರ್ತರಿಗೆ ಗದರಿಸುವುದು ಸರಿಯಾದ ಕ್ರಮವಲ್ಲ ಆದುದರಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ಈ ರೀತಿ ಪತ್ರಕರ್ತರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಫೋಟೋವನ್ನು ತೆಗೆಯಬಾರದು ಮತ್ತು ನೀವು ನಮ್ಮ ಬಳಿ ಬರಬಾರದು ಎಂದು ಹೇಳುವ ಯಾವುದೇ ಅಧಿಕಾರ ಹಕ್ಕು ಅವರಿಗೆ ಇರುವುದಿಲ್ಲ ಪತ್ರಕರ್ತರನ್ನು ನಿರ್ಬಂಧಿಸುವ ಅಧಿಕಾರವೂ ಸಹ ಅವರಿಗಿಲ್ಲ ಇಂಥದ್ದೇ ಕೆಲಸವನ್ನು ನೀವು ಮಾಡಿ ಇಂತಹ ಕೆಲಸವನ್ನು ನೀವು ಮಾಡಬಾರದು ಎಂದು ಹೇಳುವ ಅಧಿಕಾರವೂ ಸಹ ಅವರಿಗಿರುವುದಿಲ್ಲ ಆದುದರಿಂದ ಪತ್ರಕರ್ತರ ಕಾರ್ಯ ವ್ಯಾಪ್ತಿ ಇತಿಮಿತಿಗಳು ಸಹ ಅವರಿಗೆ ಗೊತ್ತಿದ್ದೆಯಿರುತ್ತದೆ ಆದರೆ ಒಬ್ಬ ಜನ ಪ್ರತಿನಿಧಿಗಳಾದಂತವರು ಪತ್ರಕರ್ತರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಶ್ನೆಯನ್ನು ಕೇಳಿದರೆ ಸಾಧ್ಯವಾದರೆ ಸಮಾಧಾನದಿಂದ ಉತ್ತರಿಸುವ ಕರ್ತವ್ಯವೂ ಸಹ ಅವರಾಗಿರುತ್ತದೆ ಶಾಸಕರು ಇದನ್ನು ತಿಳಿದುಕೊಂಡರೆ ಒಳಿತು ಎಂಬುದು ಪತ್ರಕರ್ತರ ವೈಯಕ್ತಿಕ ಅಭಿಪ್ರಾಯ .
ಪ್ರಸ್ತುತ , ದೇಶದಲ್ಲಿ ತುರ್ತು ಪರಿಸ್ಥಿತಿ ಇಲ್ಲ ,ಶಾಸಕರು ಪತ್ರಿಕಾ ವರದಿಗಾರರ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿದ್ದುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ ಪತ್ರಕರ್ತರ ಮೇಲೆ ನಿರ್ಬಂಧ ವಿಧಿಸಲು ಪ್ರಯತ್ನಿಸುವುದಾದರೆ ಸಾರ್ವಜನಿಕವಾಗಿ ಜನ ಸೇವೆಗೆ ಏಕೆ ಬರಬೇಕು? ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮಹತ್ವವನ್ನು ಶಾಸಕರು ಗೌರವಿಸಬೇಕು.
ಹೆಚ್ ವೆಂಕಟೇಶ್ ಹೋರಾಟಗಾರರು , ಕರ್ನಾಟಕ ರೈತ ಮಿತ್ರ ಸಂಘದ ರಾಜ್ಯಾಧ್ಯಕ್ಷ
ಹರಪನಹಳ್ಳಿ ವಿಜಯನಗರ ಜಿಲ್ಲೆ.
ಶಾಸಕರು ಸಾರ್ವಜನಿಕ ವ್ಯಕ್ತಿಗಳು ಅಥವಾ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಅವರು ಯಾವುದೇ ಕೆಲಸಗಳನ್ನು ಮಾಡಲು ಮುಂದಾದರೆ ಅದನ್ನು ವರದಿ ಮಾಡುವ ಹಕ್ಕು ಪತ್ರಕರ್ತರಿಗೆ ಇರುತ್ತದೆ ಇದನ್ನು ನಿರ್ಬಂಧಿಸಲು ಪ್ರಯತ್ನಿಸಿದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅವಮಾನಿಸಿದಂತೆ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪಾತ್ರ ಬಹುದೊಡ್ಡದು ಎಂಬುದನ್ನು ಶಾಸಕರು ಅರ್ಥಮಾಡಿಕೊಳ್ಳಬೇಕಿದೆ .
ಆರ್ ಲೋಕೇಶ್ ಬಿಜೆಪಿ ಮುಖಂಡ ಹರಪನಹಳ್ಳಿ .
ಸರ್ಕಾರದ ನಾಲ್ಕನೇ ಅಂಗ ಎಂದೇ ಕರೆಯಲ್ಪಡುವ ಹಾಗೂ ಸರ್ಕಾರದ ಕಾವಲುಗಾರ ಎಂದು ಕರೆಯಲ್ಪಡುವ ಪತ್ರಿಕೋದ್ಯಮದ ಮಹತ್ವವನ್ನು ಜವಾಬ್ದಾರಿ ಸ್ಥಾನದಲ್ಲಿರುವ ಹರಪನಹಳ್ಳಿ ಶಾಸಕರು ಅರಿತುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲವಾದ ವಿರೋಧ ಪಕ್ಷದ ಜೊತೆಗೆ ಸ್ವತಂತ್ರ ಪತ್ರಿಕ ವರದಿಗಳು ಅಥವಾ ಹೋರಾಟವು ಸಹ ಅತ್ಯವಶ್ಯಕ ಎಂಬುದನ್ನು ಶಾಸಕರು ತಿಳಿದುಕೊಳ್ಳಬೇಕಾಗಿದೆ .
ಮೂಲಿಮನಿ ಹನುಮಂತಪ್ಪ ಬಿಜೆಪಿ ಮುಖಂಡರು ಹರಪನಹಳ್ಳಿ ವಿಜಯನಗರ ಜಿಲ್ಲೆ .