ಎಂ ಪಿ ಪ್ರಕಾಶ್ ಪತ್ನಿ ರುದ್ರಮ್ಮ ವಿಧಿವಶ
1 min readಎಂ ಪಿ ಪ್ರಕಾಶ್ ಪತ್ನಿ ರುದ್ರಮ್ಮ ವಿಧಿವಶ
ಹರಪನಹಳ್ಳಿ: ಏ – 29 , ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ ಪಿ ಪ್ರಕಾಶ್ ಪತ್ನಿ ಶ್ರೀಮತಿ ರುದ್ರಾಂಭ (83) ಸೋಮವಾರ ಸಂಜೆ 7.15 ಕ್ಕೆ ವಿಧಿವಶರಾಗಿದ್ದಾರೆ .
ಇವರಿಗೆ ಮೂವರು ಪುತ್ರಿಯರು ಒಬ್ಬ ಪುತ್ರ ಅವರಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಒಬ್ಬರಾಗಿದ್ದಾರೆ ಹಾಗೂ ಒಬ್ಬ ಪುತ್ರ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ಅವರಾಗಿದ್ದಾರೆ ಮೃತರು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಹುಲಿ ಗುಡ್ಡದ ಹುಲಿ ಎಂದೇ ಕರೆಯಲ್ಪಡುವ ಅಭಿವೃದ್ಧಿಯ ಹರಿಕಾರ ಸರಳ ಸಜ್ಜನಿಕೆ ನಡೆಯ, ಸಾಂಸ್ಕೃತಿಕ ರಾಯಭಾರಿ ರಂಗ ಕಲಾವಿದ , ಬಹುಮುಖ ಪ್ರತಿಭೆಯ ಎಂ ಪಿ ಪ್ರಕಾಶ್ ರವರು ರಾಜ್ಯದ ಸಚಿವರಾಗಿ ಅನೇಕ ಖಾತೆಗಳನ್ನು ನಿಭಾಯಿಸಿದವರು ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದ ಮಾನ್ಯರು ಚಲನಚಿತ್ರ ನಟರೂ ಕೂಡ ಆಗಿದ್ದರು ಇಂತಹ ಯಶಸ್ಸಿನ ಹಿಂದೆ ಮಾತೃ ಹೃದಯಿ ಸ್ಪೂರ್ತಿ ಹೃದಯಿಯಾಗಿದ್ದ ಎಂ ಪಿ ರುದ್ರಾಂಭ ಅವರ ಶಕ್ತಿ ,ಸಹಾಯ ಸಹಕಾರ ಇದ್ದದ್ದು ಸುಳ್ಳೇನಲ್ಲ ಎಂದು ಅವರ ಹತ್ತಿರದಿಂದ ಕಂಡ ಒಡನಾಡಿಗಳು ಹೇಳಿದ್ದಾರೆ .
ಮೃತರ ಅಂತ್ಯಕ್ರಿಯೆಯನ್ನು ಹೂವಿನಹಡಗಲಿ ಪಟ್ಟಣದ ಅವರ ತೋಟದಲ್ಲಿರುವ ಎಂ ಪಿ ಪ್ರಕಾಶ್ ಮತ್ತು ಎಂ ಪಿ ರವೀಂದ್ರ ರವರ ಸಮಾಧಿಯ ಪಕ್ಕದಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇವರ ಅಗಲಿಕೆ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.