Vijayanagara Express

Kannada News Portal

ವ್ಯಾನಿಟಿ ಬ್ಯಾಗ್ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ ಶಾಸಕಿ ಎಂ ಪಿ ಲತಾ 

1 min read

ವ್ಯಾನಿಟಿ ಬ್ಯಾಗ್ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ ಶಾಸಕಿ ಎಂ ಪಿ ಲತಾ
ಹರಪನಹಳ್ಳಿ: ಜಿ -15 , ಮಹಿಳೆಯರಿಗೆ ವ್ಯಾನಿಟಿ ಬ್ಯಾಗ್ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ ಶಾಸಕಿ ಎಂ ಪಿ ಲತಾ  ಮಲ್ಲಿಕಾರ್ಜುನ್
ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಮಲ್ಲಿಕಾರ್ಜುನ್ ರವರು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಚುನಾವಣೆ ಗುರುತಾದ ವ್ಯಾನಿಟಿಬ್ಯಾಗಿಗೆ ಜನರು  ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಅತೀ ಹೆಚ್ಚು ಮತಗಳನ್ನು ಹಾಕುವ ಮೂಲಕ ಗೆಲುವಿಗೆ ಆಶೀರ್ವದಿಸಿದ್ದ ಕಾರಣಕ್ಕಾಗಿಯೇ ಏನೋ ಗೊತ್ತಿಲ್ಲ ಮಹಿಳೆಯರಿಗೆ ವ್ಯಾನಿಟಿ ಬ್ಯಾಗನ್ನು ವಿತರಿಸುವ ಮೂಲಕ ಸಂತೋಷ ಸಡಗರ ಸಂಭ್ರಮದಿಂದ ಕಾರ್ಯಕ್ರಮವನ್ನು ಆಚರಿಸಿದರು .
ಈ ವೇಳೆ ಮಾತನಾಡಿದ ಶಾಸಕ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ತುಂಗಭದ್ರಾ ನದಿ ದಂಡೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಈ ಬಾರಿ ನಾನು ಶಾಸಕಿಯಾಗಿದ್ದೇನೆ ನಾನು ಶಾಸಕಿ ಆಗುವುದಕ್ಕಿಂತ ಮುಂಚೆನೂ ಸಹ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ ನದಿ ಪಾತ್ರದ ಹಳ್ಳಿಗಳಲ್ಲಿ ಪ್ರತಿವರ್ಷ ಒಂದೊಂದು ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ನನ್ನ ಸಹೋದರನಾದ  ಮಾಜಿ ಶಾಸಕ
ದಿವಂಗತ ಎಂ ಪಿ ರವೀಂದ್ರ ಅವರು ಈ ಕಾರ್ಯಕ್ರಮವನ್ನು ಆರಂಭಿಸಿದ್ದರು ಅಂದಿನಿಂದ ಇಂದಿನವರೆಗೂ ಸಹ ನಮ್ಮ ಕುಟುಂಬದ ಪರವಾಗಿ ಈ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ ಈ ತಾಲೂಕಿನಲ್ಲಿ ಈ ಬಾರಿ  ವಿಧಾನಸಭಾ ಚುನಾವಣೆಯಲ್ಲಿ ಜನರು ನನಗೆ ಅತೀ ಹೆಚ್ಚು ಮತಗಳನ್ನು ಹಾಕುವ ಮೂಲಕ ಶಾಸಕಿ ಆಗಲು ಆಶೀರ್ವದಿಸಿದ್ದಾರೆ ಅವರ ಋಣವನ್ನು  ನಾನು ಎಂದೂ ಮರೆಯುವುದಿಲ್ಲ ಹಾಗೆಯೇ ತಾಲೂಕನ್ನು ಸಹ ನಾವು ಅಭಿವೃದ್ಧಿ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು .
ಈ ವೇಳೆ ಅನೇಕ ಜಾನಪದ ಕಲಾವಿದರಿಂದ ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಯಿತು ಅಲ್ಲದೆ ಜಾನಪದ ಶೈಲಿಯ ಹಾಡುಗಳನ್ನು ಶಾಸಕಿ ಲತಾ ಮಲ್ಲಿಕಾರ್ಜುನ್ ಅವರ ರಾಜಕೀಯ ಜೀವನದ ಮೇಲೆ ರಚಿಸಿ ಕಲಾವಿದರು ಹಾಡಿದರು ಅಲ್ಲದೆ ಡಾಕ್ಟರ್ ರಾಜಕುಮಾರ್ ನಟಿಸಿರುವ ಕಸ್ತೂರಿ ನಿವಾಸ ಸಿನಿಮಾದ ಜನಪ್ರಿಯ ಸಾಹಿತ್ಯವಿರುವ ಹಾಡಾದ ಹಾಡಿಸಿ ನೋಡು ಬೀಳಿಸಿ ನೋಡು ಎಂದೂ  ಉರುಳಿ ಹೋಗದು ಈ ಹಾಡಿನ ಟ್ಯೂನ್ ಗೆ ಎಂದು ಮರೆಯದ ನಮ್ಮ ಎಂಪಿ ಲತಕ್ಕಾ ಎಂಬ ಭಾವುಕವಾದ ರೀತಿಯಲ್ಲಿ ಹಾಡುಗಳನ್ನು ಹಾಡುವ ಮೂಲಕ ಸೇರಿದ್ದ ಜನರ ಮನಸ್ಸನ್ನು ಗೆದ್ದು ಭಾವುಕರಾಗಿ ತಲೆದೂಗುವಂತೆ ಜನರ ಮನಸೂರೆಗೊಂಡರು .
ಸೇರಿದ್ದ ಮಹಿಳೆಯರೆಲ್ಲರೂ ಸಾಲಾಗಿ ಬಂದು ಶಾಸಕರ ಕುಟುಂಬದವರಿಂದ ವ್ಯಾನಿಟಿ ಬ್ಯಾಗ್ ಅನ್ನು ಪಡೆದರು.
ಈ ಸಂದರ್ಭದಲ್ಲಿ  ಎಚ್ ಎಮ್ ಮಲ್ಲಿಕಾರ್ಜುನ ನಿವೃತ್ತ  ಇಂಜಿನಿಯರ್,ಗೌತಮ್ ಪ್ರಭು, ಯುವ ಮುಖಂಡ ಹೆಚ್ ಟಿ ಹನುಮಂತಪ್ಪ, ಮತ್ತೂರು ಬಸವರಾಜ್, ಶಿವಯೋಗಿ, ಚಲವಾದಿ ಸೋಮಪ್ಪ , ನಾಗರಾಜ್, ತಹಸಿಲ್ದಾರ್ ಗಿರೀಶ್ ಬಾಬು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ನಾಯ್ಕ್ ,ನಿಟ್ಟೂರು ಮುಖಂಡ ಸಿದ್ದಪ್ಪ ,ವೈಕ್ಕೆ ಬಿ ದುರ್ಗಪ್ಪ ,ಎಂವಿ ಅಂಜಿನಪ್ಪ ,ನಂದ್ಯಾಲ ಬಸವರಾಜ್, ಹಲವಾಗಲು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಕೋಸುಂಬಿ ಮಂಜುನಾಥ್ , ಹಲುವಾಗಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರತ್ನಮ್ಮ ,ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮಿ, ತಾವರಗುಂದಿ ಶಿವಣ್ಣ, ನಾಗಪ್ಪ, ಕರಿಯಪ್ಪ, ಹೆಚ್.ಟಿ  ,ಹಲವಾಗಲು ಪ್ರಕಾಶ್ ,ಬಸಾಪುರ ಸೋಮಣ್ಣ ಹನುಮಂತಪ್ಪ, ದಾದಾಪುರದ ಸುಪುತ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .
Hide quoted text

Leave a Reply

Your email address will not be published. Required fields are marked *