Vijayanagara Express

Kannada News Portal

ಮೋದಿ ಅಲೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ – ಪ್ರಭಾ ಮಲ್ಲಿಕಾರ್ಜುನ

1 min read

ಮೋದಿ ಅಲೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ – ಪ್ರಭಾ ಮಲ್ಲಿಕಾರ್ಜುನ

 

ಹರಪನಹಳ್ಳಿ: ಏ – 14 ,ಮೋದಿ ಅಲೆ , ಬಿಜೆಪಿ ಅಲೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ ಅಷ್ಟೆ ದೇಶದಲ್ಲಿ ಅಂತಹ ಯಾವುದೇ ಅಲೆಗಳು ಇಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ತೆಲಿಗಿ ,ನೀಲಗುಂದ, ಕೆ ಕಲ್ಲಹಳ್ಳಿ , ಕುಂಚೂರು , ಚಿರಸ್ಥಹಳ್ಳಿ , ಗುಂಡಗತ್ತಿ, ನಿಟ್ಟೂರು, ಕಡತಿ , ಹಲುವಾಗಲು , ಎಡಿಹಳ್ಳಿ, ಸೇರಿದಂತೆ ಒಟ್ಟು 11 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು ಈ ವೇಳೆ ಸುದ್ದಿಗಾರರು ದೇಶದಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಅಲೆ ಇದೆ ಈಗ ತಮ್ಮ ಗೆಲುವು ಹೇಗೆ ಸಾಧ್ಯ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯಲ್ಲಿ ಮೋದಿಯವರ ಅಲೆ ಎಂಬುದು ಕೇವಲ ಮಾಧ್ಯಮಗಳು ಸೃಷ್ಟಿಸಿರುವ ಸೃಷ್ಟಿ ಅಷ್ಟೇ, ಇದರಲ್ಲಿ ಯಾವುದೇ ಸತ್ಯ ಇಲ್ಲ 10 ವರ್ಷಗಳ ಅವರ ಆಡಳಿತದ ಅವಧಿಯಲ್ಲಿ ಭಾರತ ದೇಶವು ಅಭಿವೃದ್ಧಿಯನ್ನು ಕಾಣದೆ ಜನರು ಹುಸಿಯ ಹಸಿಹಸಿ ಭರವಸೆಗಳನ್ನು ಮಾತ್ರ ಕಾಣುತ್ತಿದ್ದಾರೆ ಎಂದು ಹೇಳಿದರು.


ತಾಲೂಕಿನಲ್ಲಿ ಜನರಿಂದ ಯಾವ ರೀತಿ ಪ್ರತಿಕ್ರಿಯೆ ತಮಗೆ ಸಿಕ್ಕಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕಾಂಗ್ರೆಸ್ ಮತದಾರರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅದುದರಿಂದ ನಮಗೆ ಉತ್ತಮವಾದಂತಹ ಪ್ರತಿಕ್ರಿಯೆ ಸಿಕ್ಕಿದೆ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಕುಮಾರ್ ರವರು ಟಿಕೆಟ್ ವಂಚತ ರಾಗಿರುವುದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷದ ಮತಗಳು ವಿಭಾಗವಾಗಿ ತಮಗೆ ನಷ್ಟ ಆಗುವುದಿಲ್ಲವೇ ಎಂದು ಕೇಳಿದೆ ಪ್ರಶ್ನೆಗೆ ಉತ್ತರಿಸಿದ ಅವರು ತಾಲೂಕಿನಲ್ಲಿ ಕಾಂಗ್ರೆಸ್ ಮತದಾರರು ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಲಿದ್ದಾರೆ ಇದರಿಂದ ನಮಗೆ ಯಾವುದೇ ಮತಗಳ ನಷ್ಟ ಆಗುವುದಿಲ್ಲ ಎಂದು ತಿಳಿಸಿದರು .

ಅಹಿಂದ ರಾಜಕಾರಣದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗಷ್ಟೇ ಚಿತ್ರದುರ್ಗದಲ್ಲಿ ಸಮಾವೇಶವನ್ನು ನಡೆಸಿದ್ದರು ಈಗ ಅಹಿಂದ ನಾಯಕರೊಬ್ಬರು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು ಆದರ ಟಿಕೆಟ್ ವಂಚತರಾಗಿದ್ದಾರೆ ತಮ್ಮ ಮನೆಯಲ್ಲಿ ತಮ್ಮ ಮಾವನವರು ಶಾಸಕರು ಹಾಗೂ ತಮ್ಮ ಪತಿ ಕೂಡ ಶಾಸಕರೂ ಸಚಿವರು ಆಗಿದ್ದಾರೆ ಈಗ ತಾವು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೀರಿ ಸಾಮಾಜಿಕ ನ್ಯಾಯ ,ಅಹಿಂದದ ಪರವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುಟುಂಬ ರಾಜಕಾರಣಕ್ಕೆ ಸೈ ಎಂದರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಮನೆಯಲ್ಲಿ ನಮ್ಮ ಮಾವ ಮತ್ತು ನನ್ನಪತಿಯವರು ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ ನಾನು ಎಸ್ ಎಸ್ ಕೆ ಟ್ರಸ್ಟ್ ಅನ್ನು ನೋಡಿಕೊಳ್ಳುತ್ತಿದ್ದೆ ಮತ್ತು ಹಾಸ್ಪಿಟಲ್ ಸಹ ನೋಡಿಕೊಳ್ಳುತ್ತಿದ್ದೆ ಹೀಗಿದ್ದಾಗ ಜನ ಸಂಪರ್ಕ ಬೆಳೆದು ಉತ್ತಮವಾದಂತಹ ಸೇವೆಯನ್ನು ನಾವು ಸ್ಥಳೀಯರಿಗೆ ನೀಡಿದ್ದೇವೆ ಇದರಿಂದಾಗಿ ಜನರ ಅಭಿಪ್ರಾಯ ಮತ್ತು ಎಐಸಿಸಿ ಕೆಪಿಸಿಸಿಯ ಸಮೀಕ್ಷೆಯ ಮೇರೆಗೆ ನನಗೆ ಟಿಕೆಟ್ ಅನ್ನು ನೀಡಿದ್ದಾರೆ ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುತ್ತವೆ ವಿನಯ್ ಕುಮಾರ್ ಅವರ ಸಮುದಾಯದವರಿಗೆ ಕಳೆದ ಬಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ನೀಡಲಾಗಿತ್ತು ಹೀಗಾಗಿ ಹಿರಿಯರ ಮೇಲೆ ಗೌರವ ಮತ್ತು ತಾಳ್ಮೆ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಹೇಳಿದರು .

ಇದೆ ವೇಳೆ ಮಾತನಾಡಿದ ಚಿರಸ್ಥಹಳ್ಳಿ ಸ್ಥಳೀಯ ಮುಖಂಡ ಮಲ್ಲಿಕಾರ್ಜುನಯ್ಯ ಕಲ್ಮಠ ರವರು ಪಕ್ಷ ಗುರುತಿಸಿ ಟಿಕೆಟ್ ಅನ್ನು ನೀಡಿದವರಿಗೆ ಚುನಾವಣೆಯನ್ನು ಮಾಡಬೇಕು ಅದನ್ನು ಬಿಟ್ಟು ಪಕ್ಷ ಟಿಕೆಟ್ ನೀಡಿರುವ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು ವಿನಯ್ ಕುಮಾರ್ ಗೆ ಹೇಳಿದರು .

ಈ ಸಂದರ್ಭದಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕಂಚಿಕೇರಿ ಜಯಲಕ್ಷ್ಮೀ, ಸುಷ್ಮಾ ಪಾಟೀಲ್ ವಕೀಲರು, ಮುಖಂಡ ಶಿವಕುಮಾರ್ ಒಡೆಯರ್, ಹೆಚ್.ಟಿ. ವನಜಾಕ್ಷಿ ಶಿವಯೋಗಿ, ಹಲುವಾಗಲು ಶಿವಯೋಗಿ, ಹಾಲೇಶ್ ಗೌಡ,ವೆಂಕಟೇಶ್ ವಕೀಲರು, ಎಂ ವಿ ಅಂಜಿನಪ್ಪ, ಹೆಚ್ ಟಿ ಹನುಮಂತ, ಹುಲಿ ರಮೇಶ್, ಕಲ್ಲಹಳ್ಳಿ ಗೋಣಪ್ಪ, ವಾಗೀಶ ವಕೀಲರು ನೀಲಗುಂದ, ಮಾಬುಸಾಬ್ ಕುಂಚೂರು, ಕೂಸುಂಬಿ ಮಂಜುನಾಥ್, ಪುಟ್ಟಪ್ಪ, ಮತ್ತೂರು ನಿಂಗಪ್ಪ, ಸಿದ್ದಪ್ಪ ನಿಟ್ಟೂರು, ಚಲುವಾದಿ ಸೋಮು, ಅಡ್ಡೆಪ್ಪರ ಸೋಮಲಿಂಗಪ್ಪ, ರಾಜಪ್ಪ , ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *