ಬಳ್ಳಾರಿ ಜಿಲ್ಲಾ ಅಸ್ಪತ್ರೆಗೆ ನಾಮನಿರ್ದೇಶಿತ ಸದಸ್ಯರಾಗಿ ರಾಘವೇಂದ್ರಶೆಟ್ಟಿ ನೇಮಕ
ಬಳ್ಳಾರಿ\ವಿಜಯನಗರ: ಬಳ್ಳಾರಿ ಜಿಲ್ಲೆಯ ಜಿಲ್ಲಾ ಅಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ
ನಾಮನಿರ್ದೇಶಿತ ಅಧಿಕಾರೇತರ ಸದಸ್ಯರನ್ನಾಗಿ ಹರಪನಹಳ್ಳಿ ಪಟ್ಟಣದ ಬಿಜೆಪಿ ಮುಖಂಡರಾದ
ರಾಘವೇಂದ್ರಶೆಟ್ಟಿ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುತ್ತಾರೆ.
ಆಸ್ಪತ್ರೆಗೆ ಒಟ್ಟು ಆರು ಜನ ಸದಸ್ಯರನ್ನು ಸಮಿತಿಗೆ ನೇಮಕ ಮಾಡಿ ಆದೇಶಿಸಲಾಗಿದೆ.
ಬಿ.ಈ. ಬಿರಬ್ಬಿ ಬಸವರಾಜ-ಹಡಗಲಿ, ಎಸ್.ಬಾಲಸುಬ್ರಮಣ್ಯ-ಸಂಡೂರು, ಗೋಗಿನೇನಿ
ವೆಂಕಟಸುಬ್ಬರಾವ್-ಸಿರಗುಪ್ಪ, ಎಸ್.ವಿ.ಹನುಮಂತಪ್ಪ-ಕೊಟ್ಟೂರು, ಶ್ರೀಮತಿ
ಟಿ.ರುಬೀಯಾ-ಕಂಪ್ಲಿ, ಅವರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.