Vijayanagara Express

Kannada News Portal

ಟಿಕೆಟ್ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು, ಗೊಂದಲದಲ್ಲಿ ಕಾರ್ಯಕರ್ತರು

1 min read

ಟಿಕೆಟ್ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು, ಗೊಂದಲದಲ್ಲಿ ಕಾರ್ಯಕರ್ತರು

 

ಹರಪನಹಳ್ಳಿ : ಏ – 11 , ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಮತದಾರರು ಯಾವ ಪಕ್ಷದಲ್ಲಿಯೂ ಗುರುತಿಸಿಕೊಳ್ಳದೆ ತಮ್ಮ ಮುಖಂಡರ ಟಿಕೆಟ್ ಸಿಗುವ ಹೇಳಿಕೆ ಹಿನ್ನೆಲೆ ಮೇಲೆ ಕಾರ್ಯಕರ್ತರು ಯಾವ ಗುಂಪುಗಳಿಗೂ ಸೇರದೆ ತಟಸ್ಥವಾಗಿರುವುದು ಕಂಡುಬರುತ್ತದೆ .

2023ರ ವಿಧಾನಸಭಾ ಚುನಾವಣೆ ಕಾವು ರಾಜ್ಯಾದ್ಯಂತ ಜೋರಾಗಿದ್ದು ಆದರೆ ಹರಪನಹಳ್ಳಿ ತಾಲೂಕಿನಲ್ಲಿ ಚುನಾವಣೆ ರಂಗು ಕಳೆ ಗುಂದಿದೆ ಕರ್ನಾಟಕದ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಿರೀಕ್ಷಿತ ಆಯ್ಕೆ ಸುಗಮವಾಗಿದೆ ಹಾಗಾಗಿ ಅಲ್ಲಿ ಚುನಾವಣೆ ಅಖಾಡವನ್ನು ಅಭ್ಯರ್ಥಿಗಳು ಸಜ್ಜುಗೊಳಿಸುತ್ತಿದ್ದಾರೆ ಎಲ್ಲಾ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸದೆ ಗುಪ್ತವಾಗಿಟ್ಟಿರುವುದು ಕಾರ್ಯಕರ್ತರು ಸಹ ಮುಖಂಡರ ಹಿಂದೆ ಗುರುತಿಸಿಕೊಳ್ಳುವುದನ್ನು ಬಿಟ್ಟು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಬಹುತೇಕ ಎರಡು ಪಕ್ಷದ ಕಾರ್ಯಕರ್ತರು ಅವರವರ ಅಭ್ಯರ್ಥಿಗಳನ್ನು ಅನುಸರಿಸುವ ರೀತಿಯಲ್ಲಿ ಓಡಾಡುತ್ತಿದ್ದರು ಅಲ್ಲದೆ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನ ತಮ್ಮ ನಾಯಕರುಗಳ ಪೋಸ್ಟರ್ಗಳನ್ನು ಹಾಕುವುದರ ಮೂಲಕ ಅವರನ್ನು ಅನುಸರಿಸುವುದರೊಂದಿಗೆ ನಮ್ಮ ಅಭ್ಯರ್ಥಿಗೆ ಟಿಕೆಟ್ ಪಕ್ಕ ನಿಮ್ಮ ಅಭ್ಯರ್ಥಿಗೆ ಟಿಕೆಟ್ ಪಕ್ಕ ಟಿಕೆಟ್ ತರಲು ಯಾವುದೇ ಕಾರಣಕ್ಕೂಅಡೆತಡೆಗಳು ಇಲ್ಲ ಟಿಕೇಟು ಖಚಿತವಾಗುವುದೊಂದೇ ಬಾಕಿ ಎಂದು ಕಾರ್ಯಕರ್ತರು ಕ್ಷೇತ್ರ ತುಂಬೆಲ್ಲ ಓಡಾಡುತ್ತಿದ್ದರು.

ಆದರೆ ಈ ಬಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆ ರೀತಿ ಭಿನ್ನವಾಗಿದೆ ಇದು ಕಳೆದ ಬಾರಿಯ ರೀತಿಯಾಗಿದ್ದು ಒಂದು ಕಡೆಯಾದರೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹಾಲಿ 15 ಶಾಸಕರಿಗೆ ಟಿಕೆಟ್ ನೀಡದೆ ಕೋಕ್ ನೀಡುವ ಸಾಧ್ಯತೆ ಇದೆ ಅದರಲ್ಲಿ ಹರಪನಹಳ್ಳಿಯೂ ಸಹ ಇರುತ್ತದೆ ಎಂಬ ಕೆಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ ಅಲ್ಲದೇ ಹೊಸ ಮುಖಗಳಿಗೆ ಮಣೆ ಹಾಕಿದರೆ ಬಿಜೆಪಿಯನ್ನು ಉತ್ಸಾಹದಿಂದ ಗೆಲ್ಲಿಸುವ ನಿರೀಕ್ಷೆಯಲ್ಲಿಯೂ ಸಹ ಇದ್ದಾರೆ ಹಾಗಾಗಿ ಹಾಲಿ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ತಮಗೆ ಟಿಕೆಟ್ ಸಿಗುವುದು ಪಕ್ಕ ಆಗಿದ್ದರೆ ಇಷ್ಟೊತ್ತಿಗಾಗಲೇ ಕ್ಷೇತ್ರದ ತುಂಬೆಲ್ಲ ಸಂಚರಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿರುತ್ತಿದ್ದರು ಮತ್ತು ವಿಧಾನ ಗತಿಯಲ್ಲಿ ಪ್ರಚಾರವನ್ನು ಆರಂಭಿಸಿರುತ್ತಿದ್ದರು ಇವುಗಳೆಲ್ಲವನ್ನು ಬದಿಗೊತ್ತಿ ದೆಹಲಿ, ರಾಜಧಾನಿ ಬೆಂಗಳೂರು ಹಾಗೂ ತಮ್ಮ ಕ್ಷೇತ್ರದಲ್ಲಿರುವ ನಿವಾಸದಲ್ಲೇ ಕಾಲ ಕಳೆಯುತ್ತಿದ್ದಾರೆ.

 

ಕಾರ್ಯಕರ್ತರು ಮತ್ತು ಶಾಸಕ ಕರುಣಾಕರ ರೆಡ್ಡಿಯವರು ಹೈಕಂಡ್ ಆದೇಶವನ್ನು ಕಾಯುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ ಪಕ್ಷ ಹರಪನಹಳ್ಳಿಯಲ್ಲಿ ಬಿಜೆಪಿ ಟಿಕೇಟ್ ಯಾರಿಗೆ ನೀಡುತ್ತಾರೆ ಎಂದು ಕಾರ್ಯಕರ್ತರು ಕಾಯುತ್ತಿದ್ದಾರೆ ಏಕೆಂದರೆ ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಅನೇಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಮುನಿಸಿಕೊಂಡಿದ್ದು ನಿನ್ನೆ ನಡೆದ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಬಿಜೆಪಿ ಕಾರ್ಯಕರ್ತರನ್ನ ಹೊರತು ಪಡಿಸಿದರೆ ಮತ್ತಿನ್ನಾವ ಮುಖಂಡರುಗಳು ಪಾಲ್ಗೊಂಡಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ 17 ಕ್ಕೇರಿದೆ ಹೆಸರಿಗೆ ಇಷ್ಟೊಂದು ಜನ ಆಕಾಂಕ್ಷಿಗಳಿದ್ದರೂ ಕ್ಷೇತ್ರದಲ್ಲಿ ಸದ್ಯ ಈಗ ಯಾರು ಸಕ್ರಿವಾಗಿಲ್ಲ ಏಕೆಂದರೆ ಪಕ್ಷವು ಟಿಕೆಟ್ ಅನ್ನು ಯಾರಿಗೆ ನೀಡುತ್ತದೆಯೋ ನಂತರ ಕಾದು ನೋಡಿ ತಂತ್ರಗಾರಿಕೆಯನ್ನು ಬಳಸೋಣ ಎಂಬ ಟಿಕೆಟ್ ನಿರೀಕ್ಷೆಯಲ್ಲಿ ಆಕಾಂಕ್ಷಿಗಳಿದ್ದಾರೆ, ಇನ್ನ ಕಾರ್ಯಕರ್ತರು ಪಕ್ಷದ ಮುಖಂಡರುಗಳು ಯಾರ ಹಿಂದೆಯೂ ಗುರುತಿಸಿಕೊಳ್ಳುವುದು ಸದ್ಯಕ್ಕೆ ಬೇಡ ಯಾರಿಗೆ ಪಕ್ಷ ಟಿಕೆಟ್ ನೀಡುವುದು ಯಾರಿಗೆ ಬಿಡುವುದು ಗೊತ್ತಿಲ್ಲ ಹಾಗಾಗಿ ಟಿಕೆಟ್ ಅಂತಿಮ ಆಗುವವರೆಗೂ ತಟಸ್ಥವಾಗಿದ್ದರೆ ಉತ್ತಮ ಇಲ್ಲವಾದಲ್ಲಿ ಬೇರೆ ಬಣಕ್ಕೆ ಟಿಕೆಟ್ ಆದರೆ ನಾವು ಗುರುತಿಸಿಕೊಂಡಿರುವ ಬಣಕ್ಕೆ ಹಿನ್ನಡೆಯಾದರೆ ನಮ್ಮ ರಾಜಕೀಯ ಬದುಕಿಗೆ ಹೊಡೆತ ಬೀಳುತ್ತದೆ ಎಂಬುದು ಕೆಲವರ ಅಭಿಪ್ರಾಯ ಹಾಗಾಗಿ ತಟಸ್ಥವಾದ ನೀತಿಯನ್ನು ಕಾರ್ಯಕರ್ತರು ಮುಖಂಡರುಗಳು ಅನುಸರಿಸುತ್ತಿದ್ದಾರೆ ಹೀಗಾಗಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದ್ದರೂ ಸಹ ನೀರಸ ವಾದ ವಾತಾವರಣ ಸದ್ಯದಲ್ಲಿ ಕಾಣುತ್ತದೆ.

ಇತ್ತ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಮಾಜಿ ಸಚಿವ ನಬೀಸ್ ಪುತ್ರರಾದ ನೂರ್ ಅಹಮದ್ ರವರು ಈಗಾಗಲೇ ನನಗೆ ಪಕ್ಷ ಟಿಕೆಟ್ ಪಕ್ಕ ಗೊಳಿಸಿದೆ ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ನಡೆದಂತ ಅಭಿವೃದ್ಧಿ ಕಾರ್ಯಗಳು ಮತ್ತು ಪಂಚರತ್ನ ಯೋಜನೆ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಜೆಡಿಎಸ್ ರೈತರ ಪಕ್ಷವೆಂದು ಜನರು ನಾವು ಹೋದ ಕಡೆಯಲ್ಲೆಲ್ಲ ಸ್ವಾಗತಿಸುತ್ತಿದ್ದಾರೆ ಹಾಗಾಗಿ ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ಏಕೈಕ ಮುಖ್ಯಮಂತ್ರಿ ಮತ್ತು ಪಕ್ಷವೆಂದರೆ ಅದು ಕುಮಾರಸ್ವಾಮಿ, ಜಾತ್ಯತೀತ ಜನತಾದಳವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ .

ಇನ್ನು ಕೆಲ ಅಭ್ಯರ್ಥಿಗಳು ಪಕ್ಷೇತರದಿಂದ ಕಣಕ್ಕಿಳಿಯಲು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಅವರ ಪೈಕಿ ಸುಮಂತ್ ರಾಯಸಂ ರವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ , ಅಲ್ಲದೆ ಮತ್ತೊಬ್ಬ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾದ ಯಶವಂತ್ ಗೌಡ ರವರು ಸಹ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ ಹಾಗೂ ಬಳ್ಳಾರಿ ವಿಜಯನಗರ ಅವಳಿ ಜಿಲ್ಲೆಗಳ ಸಂಸದರಾದ ವೈ ದೇವಿಂದ್ರಪ್ಪ ಅವರ ಪುತ್ರ ವೈಡಿ ಅಣ್ಣಪ್ಪನವರು ಸಹ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಅವರ ತಂದೆಯವರು ಬಿಜೆಪಿ ಪಕ್ಷದಿಂದ ವಿಜಯನಗರ ಬಳ್ಳಾರಿ ಅವಳಿ ಜಿಲ್ಲೆಗಳ ಸಂಸದರಾಗಿರುತ್ತಾರೆ ಹಾಗಾಗಿ ಇವರ ನಡೆ ಕ್ಷೇತ್ರದಲ್ಲಿ ಕುತೂಹಲ ಸೃಷ್ಟಿಸಿದೆ ಈ ಎಲ್ಲವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕ್ಷೇತ್ರದ ಮತದಾರ ಪ್ರಭು ಯಾರ ಕೊರಳಿಗೆ ವಿಜಯದ ಮಾಲೆಯನ್ನು ಹಾಕುವರು ಎಂಬುದನ್ನು ಕಾದು ನೋಡಬೇಕಾಗಿದೆ .

ಒಟ್ಟಾರೆಯಾಗಿ ಹೇಳುವುದಾದರೆ ಹರಪನಹಳ್ಳಿ ತಾಲೂಕಿನ ಪ್ರಸ್ತುತ ರಾಜಕೀಯ ವಿದ್ಯಮಾನಕ್ಕೆ ಟಿಕೆಟ್ ನಿರೀಕ್ಷೆಯಲ್ಲಿ ಆಕಾಂಕ್ಷಿಗಳಿದ್ದಾರೆ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದು ಹೇಳಿದರೆ ಪ್ರಾಯಶಃ ತಪ್ಪಾಗಲಾರದು .

Leave a Reply

Your email address will not be published. Required fields are marked *