September 8, 2024

Vijayanagara Express

Kannada News Portal

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಚಡ್ಡಿ ಉಡುಪು ರವಾನೆ

1 min read

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರಿಂದ ಚಡ್ಡಿ ಉಡುಪು ರವಾನೆ

ಹರಪನಹಳ್ಳಿ: ತಾಲೂಕು ಬಿಜೆಪಿ ಕಾರ್ಯಕರ್ತರು ಕರ್ನಾಟಕ ರಾಜ್ಯದ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ಆರ್ ಎಸ್ ಎಸ್ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ಬಿಜೆಪಿ ಮುಖಂಡರು ಸೇರಿ ಅವಹೇಳನ ಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಬಾಗಳಿ ಕೊಟ್ರಪ್ಪ ಆರ್ ಎಸ್ ಎಸ್ ನ ಉಡುಗೆಯಾದ ಚಡ್ಡಿಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಕ್ರೌರ್ಯತೆ ಮತ್ತು ದುರ್ವರ್ತನೆ ತೊರೆದಿದ್ದಾರೆ ಚಡ್ಡಿ ಉಡುಪು ಗೆ ಸುಧಿರ್ಘ ಇತಿಹಾಸ ಇದೆ ಕೆಲಸ ಕಾರ್ಯಗಳನ್ನು ಮಾಡುವಾಗ. ಪದೇ ಪದೇ ಉಡುಪು ಅಡ್ಡಿ ಬರಬಾರದೆಂದು ಈ ತರಹದ ಉಡುಪನ್ನು ಶಿಸ್ತಿನ ಪ್ರತೀಕವಾಗಿ ಬಳಸಲಾಗುತ್ತದೆ ಆದರೆ ಅದನ್ನು ಕೆಟ್ಟದಾಗಿ ಟೀಕಿಸಿರುವುದನ್ನು ಖಂಡಿಸುತ್ತೇನೆ ಎಂದರು .

ಬಾವಿಹಳ್ಳಿ ಉದಯಶಂಕರ್ ಮಾತಾನಾಡಿ ಕಾಂಗ್ರೆಸ್ ಪಕ್ಷ ಎಂಬುದು ಇದೊಂದು ಸರ್ಕಾರೇತರ ಸಂಸ್ಥೆಯಾಗಿತ್ತು ಇದನ್ನು ಎ ಓ ಹ್ಯೂಂ ಎಂಬ ಬ್ರಿಟಿಷ್ ಅಧಿಕಾರಿ ಸ್ಥಾಪಿಸಿದ್ದಾನೆ ಇದು ವಿದೇಶಿ ಸಂಸ್ಕೃತಿಯನ್ನು ಒಳಗೊಂಡಿದೆ ಆದರೆ ಆರ್ ಎಸ್ ಎಸ್ , ಸಂಘಪರಿವಾರ ದೀನ್ ದಯಾಳ್ ಉಪಾಧ್ಯಾಯ, ರಂತ ದೇಶಿಯ ಮಹಾನ್ ದೇಶಭಕ್ತ ರಿಂದ ಸ್ಥಾಪನೆಗೊಂಡು ರಾಷ್ಟ್ರೀಯತೆ ಗಾಗಿ ಹೋರಾಟ ಮಾಡಿ ಇಂದು ಅಧಿಕಾರ ಹಿಡಿದು ಜನಸೇವೆ ಮಾಡುತ್ತಿದೆ ಚಡ್ಡಿ ಉಡುಪುಗಳನ್ನು ಅವಮಾನ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಅಂಚೆ ಮೂಲಕ ಕರ್ನಾಟಕದ ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯಕರ್ತರು ಉಪಯೋಗಿಸಿದ ಹಳೆಯ ಚಡ್ಡಿಗಳನ್ನು ಸಿದ್ದರಾಮಯ್ಯ ನವರ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ ,ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್ ಮಂಜ್ಯನಾಯ್ಕ್, ಆರ್.ಲೋಕೆಶ್ , ಲಿಂಬ್ಯ ನಾಯ್ಕ್ ಎಸ್ಪಿ, ವೆಂಕಟೇಶ್ ನಾಯ್ಕ , ನೀಲಗುಂದ ಮನೋಜ್ ತಳವಾರ, ಜಟ್ಟ್ಯಪ್ಪ, ಮಾಚಿಹಳ್ಳಿ ಸಣ್ಣಹಟ್ಟಿ ಮಲ್ಲೇಶ್ ನಾಯ್ಕ್ , ಮತ್ತಿಹಳ್ಳಿ ಪ್ರಕಾಶ್ ,ಮಾರಪ್ಪ, ಸಣ್ಣಹಾಲಪ್ಪ , ಮುಂತಾದವರು ಹಾಜರಿದ್ದರು .

Leave a Reply

Your email address will not be published. Required fields are marked *