Vijayanagara Express

Kannada News Portal

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರ ಕಾರ್ಯಾರಂಭ

1 min read

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರ ಕಾರ್ಯಾರಂಭ

 

 

ಹರಪನಹಳ್ಳಿ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಈಜಂತ್ಕರ್ ಮಂಜುನಾಥ್ ಅವರ ರಾಜಿನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷ ರಾಗಿ ಭಿಮವ್ವ ಸಣ್ಣಹಾಲಪ್ಪ ರವರು ಕಾರ್ಯಾರಂಭ ಮಾಡಿದರು.

 

ಕಳೆದ ಹತ್ತು ದಿನಗಳ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಈಜಂತ್ಕರ್ ಮಂಜುನಾಥ್ ಅವರ ತಮ್ಮ ವೈಯುಕ್ತಿಕ ಕಾರಣ ಗಳಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು ಅದು ಅವಧಿ ಪೂರ್ಣಗೊಂಡರೂ ಅವರು ರಾಜಿನಾಮೆ ವಾಪಾಸು ಪಡೆದಿರಲಿಲ್ಲ ಆದುದರಿಂದ ಅವರ ರಾಜಿನಾಮೆ ಸಿಂದುವಾಗಿತ್ತು ( ಅಂಗೀಕೃತವಾಗಿತ್ತು)ಖಾಲಿಯಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೂ ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆ 243 ರ ಪ್ರಕಾರ ಹಾಗೂ ಕರ್ನಾಟಕ ಪುರಸಭೆಗಳ ಅಧಿನಿಯಮ ಕಾಲಂ 44ರ ಪ್ರಕಾರ ಉಪಾಧ್ಯಕ್ಷರೆ ಪ್ರಭಾರ ಅಧ್ಯಕ್ಷ ರಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿರುತ್ತದೆ ಆ ಪ್ರಕಾರವಾಗಿ ಉಪಾಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಭಿಮವ್ವ ಸಣ್ಣಹಾಲಪ್ಪ ರವರು ಬುಧವಾರ ಪುರಸಭೆ ಕಾರ್ಯಾಲಯದಲ್ಲಿ ಪ್ರಭಾರ ಅಧ್ಯಕ್ಷರಾಗಿ ಕಾರ್ಯಾರಂಭ ಮಾಡಿದರು.

ಈ ವೇಳೆ ಪುರಸಭೆ ಸದಸ್ಯರುಗಳಾದ ಹಾರಳ್ ಅಶೋಕ್, ರೆಹಮಾನ್ ಡಿ, ವೆಂಕಟೇಶ್ ಟಿ, ಅಂಜಿನಪ್ಪ ವಿ ಎಂ, ಕಿರಣ್ ಶಾನುಭೋಗ, ನಿರ್ಗಮಿತ ಪುರಸಭೆ ಅಧ್ಯಕ್ಷ ಈಜಂತ್ಕರ್ ಮಂಜುನಾಥ್, ಮಾತನಾಡಿ ಪ್ರಭಾರ ಅಧ್ಯಕ್ಷ ರಾಗಿ ನೇಮಕಗೊಂಡ ಭಿಮವ್ವ ಸಣ್ಣಹಾಲಪ್ಪ ರವರನ್ನು ಅಭಿನಂದಿಸಿ ಶುಭಕೋರಿ ಹಾರೈಸಿ ಸನ್ಮಾನಿಸಿದರು .

ಬಿಜೆಪಿ ಮುಖಂಡ ಸಹಕಾರಿ ಸಂಘಗಳ ಪ್ರಕೊಷ್ಠ ರಾಜ್ಯ ಉಪಾಧ್ಯಕ್ಷ ಜಿ ನಂಜುಂಡ ಗೌಡ ಮಾತನಾಡಿ ಪ್ರಭಾರ ಅಧ್ಯಕ್ಷರಿಗೆ ಶುಭಕೋರಿದರು .


ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಭಿಮವ್ವ ಸಣ್ಣಹಾಲಪ್ಪ ರವರು ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನೂತನ ಅಧ್ಯಕ್ಷರು ಆಯ್ಕೆ ಆಗುವವರೆಗೂ ಉತ್ತಮವಾಗಿ ಕೆಲಸ ಮಾಡುತ್ತೇನೆ ಅದಕ್ಕೆ ತಮ್ಮೆಲ್ಲ ಪುರಸಭೆ ಸದಸ್ಯರ ಮತ್ತು ಹಿರಿಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾದ ಗೊಂಗಾಡಿ ನಾಗರಾಜ್ ,ಹೆಚ್ ಕೊಟ್ರೇಶ್,ಲಾಠಿ ದಾದಾಪೀರ್, ಉದ್ಧಾರ ಗಣೇಶ, ಎನ್ ಕೆ ಜಾವಿದ್,ಗೌಳಿ ನಾಗಭೂಷಣ, ರೇಖಾ ,ನಾಮನಿರ್ದೇಶಿತ ಸದಸ್ಯರು ಮುಖಂಡರಾದ ತಾರೆ ಹನುಮಂತಪ್ಪ ,ಚಿಕ್ಕೇರಿ ಬಸಪ್ಪ , ನಿಟ್ಟೂರು ಹಾಲಪ್ಪ , ಕೌಟಿ ವಾಗೀಶ , ನಿಟ್ಟೂರು ತಿಮ್ಮಣ್ಣ,ಬಾಣದ ಅಂಜಿನಪ್ಪ ,ಆಸ್ಲಾಂ ,ನಿಲಗುಂದ ಮಂಜುನಾಥ್ ,ಮಲ್ಲಪ್ಪ ,ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *