Vijayanagara Express

Kannada News Portal

ಅದ್ದೂರಿಯಾಗಿ ಜರುಗಿದ ಗ್ರಾಮದೇವತೆ ಊರಮ್ಮನ ಕಾರ್ತಿಕೋತ್ಸವ

1 min read

ಅದ್ದೂರಿಯಾಗಿ ಜರುಗಿದ ಗ್ರಾಮದೇವತೆ ಊರಮ್ಮನ ಕಾರ್ತಿಕೋತ್ಸವ
ಹರಪನಹಳ್ಳಿ: ಜ – 5 , ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ಗ್ರಾಮದೇವತೆಯಾದ ಊರಮ್ಮ ದೇವಿಯ  ಕಾರ್ತಿಕೋತ್ಸವ
ಅದ್ದೂರಿಯಾಗಿ ಜರುಗಿತು ,ಕಾರ್ತಿಕ ಮಾಸದಲ್ಲಿ ಬರುವ ಕೊನೆಯ ಶುಕ್ರವಾರದಂದು ದೇವಿಯ ದೀಪೋತ್ಸವ   ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು .
ದೇವಿಯ ಮೂರ್ತಿಯನ್ನು ಬೆಳಗಿನಿಂದಲೇ ವಿಶೇಷ ಅಲಂಕಾರ ಪೂಜೆಗಳೊಂದಿಗೆ ಅಲಂಕರಿಸಲಾಗಿತ್ತು ಭಕ್ತರು ಬೆಳಗಿನಿಂದಲೇ ದೇವಸ್ಥಾನಕ್ಕೆ ಬಂದು ದರ್ಶನ ಪಡೆಯಲಾರಂಭಿಸಿದರು ಸಂಜೆ 6 ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಅದ್ದೂರಿ ದೀಪೋತ್ಸವ ಕಾರ್ಯಕ್ರಮ  ನೆರವೇರಿತು .

ಈ ಸಂದರ್ಭದಲ್ಲಿ  ದೇವಸ್ಥಾನದ ಸಮಿತಿಯವರಾದ ಸುರೇಶ್ ಮಂಡಕ್ಕಿ ,ಮಾಜಿ ಸೈನಿಕ ರಾಜು ಪೂಜಾರ್ ,ಚಿಕ್ಕೇರಿ ದುರ್ಗಪ್ಪ ,ಜಿ ಪೆನ್ನಪ್ಪ ,ಕೊಂಡಜ್ಜಿ ಗುರು ,ಎಲ್ಲಜ್ಜಿ  ಅಂಜಿನಪ್ಪ ,ಚಿಕ್ಕೇರಿ ಕೆಂಚಪ್ಪ, ಪುರಸಭೆ ಮಾಜಿ ಸದಸ್ಯ ಜಿ ಕೃಷ್ಣ ,ಮ್ಯಾಕಿ ದುರುಗಪ್ಪ , ಪೂಜಾರ ಚಂದ್ರಪ್ಪ ,ಬಸವರಾಜ್ ಪೂಜಾರ್, ಪಟ್ನಾಮದ ವೆಂಕಟೇಶ, ಗಿಡ್ಡಳ್ಳಿ  ಬಸವರಾಜ್, ಬಿ ವಿರೂಪಾಕ್ಷಿ  ಸೇರಿದಂತೆ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *