Vijayanagara Express

Kannada News Portal

ನಾನು ರಾಜಕೀಯಕ್ಕೆ ಬಂದಿರುವುದು ಹಣ ಮಾಡಲು ಅಲ್ಲ – ಜನಸೇವೆ ಮಾಡಲು – ಅರಸೀಕೆರೆ ಎನ್ ಕೊಟ್ರೇಶ್

1 min read

ನಾನು ರಾಜಕೀಯಕ್ಕೆ ಬಂದಿರುವುದು ಹಣ ಮಾಡಲು ಅಲ್ಲ –
ಜನಸೇವೆ ಮಾಡಲು – ಅರಸೀಕೆರೆ ಎನ್ ಕೊಟ್ರೇಶ್

 

ಹರಪನಹಳ್ಳಿ: ಮೇ – 5 ,ನಾನು ರಾಜಕೀಯಕ್ಕೆ ಬಂದಿರುವುದು ಹಣ ಮಾಡಲು ಅಲ್ಲ ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರಸೀಕೆರೆಯ ಎನ್ ಕೊಟ್ರೇಶ್ ಹೇಳಿದರು.

ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಅಲ್ಪಸಂಖ್ಯಾತರ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾನು ಸದಾ ಜನಸೇವೆಗೆ ಬದ್ಧವಾಗಿರುತ್ತೇನೆ ಅಲ್ಪಸಂಖ್ಯಾತರ ಪರವಾಗಿ ಇರುತ್ತೇನೆ ನನಗೆ ಯಾವುದೇ ಜಾತಿ ಭೇದ ಎಂಬುದೇ ಗೊತ್ತಿಲ್ಲ ನಾನೊಬ್ಬ ಸಾಮಾನ್ಯ ರೈತನ ಮಗ ಈ ಕ್ಷೇತ್ರದಲ್ಲಿ ಎರಡು ಬಾರಿ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದೇನೆ ಈಗ ಕಾಂಗ್ರೆಸ್ ಪಕ್ಷವು ನನಗೆ ಟಿಕೆಟ್ ಅನ್ನು ಕರುಣಿಸಿದೆ ಹಾಗಾಗಿ ದಯವಿಟ್ಟು ತಾವೆಲ್ಲರೂ ತಮ್ಮ ಅಮೂಲ್ಯವಾದ ಮತವನ್ನು ಹಸ್ತದ ಗುರುತಿಗೆ ನೀಡುವುದರ ಮೂಲಕ ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಕೋರಿಕೊಂಡರು.

ಇಲ್ಲಿ ಸೇರಿರುವುದು ನಿಜವಾದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ ನಮ್ಮ ತಾಲೂಕಿನಲ್ಲಿ ಅನೇಕ ಜನ ಮುಸ್ಲಿಮರು ಸ್ನೇಹಿತರಿದ್ದಾರೆ ನಾನು ಯಾರೋಂದಿಗೂ ಎಂದು ಜಗಳ ದ್ವೇಷವನ್ನು ಕಟ್ಟಿಕೊಂಡವನಲ್ಲ ಸರ್ವ ಜನಾಂಗದ ಏಳಿಗೆಗಾಗಿ ದುಡಿಯುವ ಮನಸ್ಸನ್ನು ಹೊಂದಿದ್ದೇನೆ ಲೂಟಿ ಮಾಡಿ ನಾನು ಅದರಲ್ಲಿ ಜೀವಿಸುವ ಅಗತ್ಯತೆ ನನಗೆ ಇಲ್ಲ ನಮ್ಮ ತಾಲೂಕಿನಲ್ಲಿರುವ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವುದಕ್ಕಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಹೇಳಿದರು .

ದೆಹಲಿಯಿಂದ ಆಗಮಿಸಿದ್ದ ಕಾಂಗ್ರೆಸ್ ವಕ್ತಾರೆ ರುಕ್ಸನಾ ಖುರೇಷಿ ಮಾತನಾಡಿ ಹರಪನಹಳ್ಳಿಯ ಮತ ಕ್ಷೇತ್ರದಲ್ಲಿರುವ ಮುಸ್ಲಿಂ ಬಾಂಧವರೇ ಹಾಗೂ ಅಲ್ಪಸಂಖ್ಯಾತರ ಈ ಚುನಾವಣೆ ಕರ್ನಾಟಕದಿಂದ ದೆಹಲಿಯವರೆಗೆ ಹಾಗೂ ಜಗತ್ತಿನಲ್ಲಿಯೇ ಇದು ಮಾದರಿ ಚುನಾವಣೆಯಾಗಬೇಕು ಆಗಗಬೇಕೆಂದರೆ ನೀವು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಕೊಟ್ರೇಶ್ ಅವರನ್ನು ಬೆಂಬಲಿಸಬೇಕು ಇದು ಕರ್ನಾಟಕದಿಂದ ದೆಹಲಿಯವರೆಗೆ ಜಗತ್ತಿನಲ್ಲಿಯೇ ಮಾದರಿಯಾಗಿ ನಿಲ್ಲಬೇಕು ಎಂದು ಹೇಳಿದರು.

ರೈತರ ಮಗನಾದ ಕೊಟ್ರೇಶ್ ರವರು ಯಾವುದೇ ಮೋಸ ವಂಚನೆಯ ಇಲ್ಲದ ವ್ಯಕ್ತಿಯನ್ನು ಕಾಂಗ್ರೆಸ್ ಗುರುತಿಸಿದೆ ಹಾಗಾಗಿ ನಿಮ್ಮ ಮತಗಳನ್ನು ಬೇರೆ ಬೇರೆ ಪಕ್ಷಗಳ ಆಸೆ ಆಮಿಷಗಳಿಗೆ ಒಳಗಾಗಿ ಹಾಳು ಮಾಡಿಕೊಳ್ಳದೇ ಮುಸ್ಲಿಮರ ಹಿತ ಕಾಯುವ ಸದಾ ಮುಸ್ಲಿಮರ ಏಳಿಗೆಗಾಗಿ ಹೋರಾಟ ಮಾಡುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಆ ಮುಖಾಂತರ ಅಲ್ಪಸಂಖ್ಯಾತರ ಬದುಕನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದರಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೊರತುಪಡಿಸಿ ಇತರೆ ಪಕ್ಷದ ಅಭ್ಯರ್ಥಿಗಳಿಗೆ ಮತವನ್ನು ಚಲಾಯಿಸಿದರೆ ಅದು ಕತ್ತೆಗೆ ಮತವನ್ನು ಚಲಾಯಿಸಿದಂತೆ ಎಂದು ಹೇಳಿದರು .

ಆಂಧ್ರಪ್ರದೇಶದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹಾಗೂ ರಾಣೆಬೆನ್ನೂರು ಚುನಾವಣಾ ಉಸ್ತುವಾರಿಯಾಗಿರುವ ದಾದಾ ಕಲಾಂ ಅವರು ಮಾತನಾಡಿ ಕರ್ನಾಟಕದ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಪ್ರಮುಖ ಪಾತ್ರ ವಹಿಸುತ್ತವೆ ಕಳೆದ 8 ವರ್ಷಗಳಿಂದ ಕೋಮುವಾದ ಬಿಜೆಪಿ ಸರ್ಕಾರದಿಂದ ಅಲ್ಪಸಂಖ್ಯಾತರು ತತ್ತರಿಸಿ ಹೋಗಿದ್ದಾರೆ ಆಗಾಗಿ ಬಿಜೆಪಿ ಮುಸಲ್ಮಾನರ ವಿರೋಧ ಸರ್ಕಾರವಾಗಿದೆ ಮುಸ್ಲಿಂ ಪರ ಇರುವ ಏಕೈಕ ಪಕ್ಷ ಸರ್ಕಾರವೆಂದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವಾಗಿದೆ ಹಾಗಾಗಿ ಎಲ್ಲ ಮುಸ್ಲಿಂ ಬಾಂಧವರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ ಎನ್ ಕೊಟ್ರೇಶ್ ರವರ ಗೆಲುವಿಗೆ ಶ್ರಮಿಸಿರಿ ಎಂದು ಮನವಿ ಮಾಡಿದರು.

ನಿವೃತ್ತ ಶಿಕ್ಷಕ ಸರ್ಕಾವಾಸ್ ಮಾತನಾಡಿ 1947 ರಿಂದ ಇಲ್ಲಿಯವರೆಗೆ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಿದ ಏಕೈಕ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ ಇತ್ತೀಚಿಗೆ ಬಿಜೆಪಿ ಸರ್ಕಾರವು ಮುಸ್ಲಿಮರಿಗೆ ನೀಡಿದ್ದ ಶೇಕಡ 4 ರಷ್ಟು ಮೀಸಲಾತಿಯನ್ನು ಕಿತ್ತುಕೊಂಡಿದೆ ಯಾವುದಾದರೂ ಆಯೋಗ ಹೇಳಿತ್ತೇ ಅದನ್ನು ತೆಗೆಯಲು ಎಂದು ಪ್ರಶ್ನಿಸಿದ ಅವರು ಅದನ್ನು ಕಿತ್ತುಕೊಂಡು ಏಕೆ ಬೇರೆ ವರ್ಗದವರಿಗೆ ಕೊಟ್ಟರು ಇದು ಎತ್ತಿ ಕಟ್ಟುವ ತಂತ್ರ ಅಲ್ಲವೇ ಎಂದು ಹೇಳಿದರು ಬಿಜೆಪಿ ಸಚಿವರಲ್ಲಿ ಒಬ್ಬರಾದ ಬಸವನಗೌಡ ಪಾಟೀಲ್ ಯತ್ನಾಳ್ ರವರು ಮುಸಲ್ಮಾನರ ಮತಗಳೆ ನಮಗೆ ಬೇಕಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.ಬಿಜೆಪಿಯವರಿಗೆ ಕೇವಲ ಅಲ್ಪಸಂಖ್ಯಾತರ ಮತಗಳು ಅಷ್ಟೇ ಅಲ್ಲ ಹಿಂದುಳಿದ ದಲಿತ ಅಲ್ಪಸಂಖ್ಯಾತರ ಮತಗಳ ಜೊತೆಗೆ ಅವರ ಅಭಿವೃದ್ಧಿ ಕೂಡ ಬಿಜೆಪಿಯವರಿಗೆ ಇಷ್ಟ ಇಲ್ಲ ಎಂದು ಹೇಳಿದರು .

ದಾವಣಗೆರೆಯ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್, ಬಿ ನಜೀರ್ ಸಾಬ್, ಹುಲಿಕಟ್ಟಿ ಭಾಷು ,ನಾಲ್ಬಂದಿ ಮಜೀದ್ ಸಾಬ್ ಜೀಶನ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಭಟ್, ಹೆಚ್ ಕೆ ಹಾಲೇಶ್, ಸಿನಿಮಾ ರಾಜಶೇಖರ್, ಬೇಲೂರು ಅಂಜಿನಪ್ಪ,ಮೂಸಾಸಾಬ್, ಬೇಲ್ದಾರ್ ಬಾಷಾ, ಸೋಗಿ ಇಬ್ರಾಹಿಂ, ಕಡಕೋಳ ನೂರುದ್ದೀನ್, ಎಂ ಜಾಫರ್ ಸಾಬ್, ಪುರಸಭೆ ಸದಸ್ಯ ಜಾಕೀರ್ ಸರ್ಕವಾಸ್, ಕೆ ನಜೀರ್, ಎಂ ಟಿ ಸುಭಾಷ್ಚಂದ್ರ,ಮತ್ತಿಹಳ್ಳಿ ಅಜ್ಜಣ್ಣ,

Leave a Reply

Your email address will not be published. Required fields are marked *