ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ನೇಮಕವನ್ನು ರದ್ದುಗೊಳಿಸುವವರೆಗೂ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ – ಮಾಜಿ ಶಾಸಕ ಜಿ ಕರುಣಾಕರ ರೆಡ್ಡಿ
1 min read
ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ನೇಮಕವನ್ನು ರದ್ದುಗೊಳಿಸುವವರೆಗೂ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ – ಮಾಜಿ ಶಾಸಕ ಜಿ ಕರುಣಾಕರ ರೆಡ್ಡಿ
ಹರಪನಹಳ್ಳಿ : ಮಾ -9 ,ಬಿಜೆಪಿ ತಾಲೂಕು ಅಧ್ಯಕ್ಷ ಮತ್ತು ಇತರ ಪದಾಧಿಕಾರಿಗಳ ಹರಪನಹಳ್ಳಿ ತಾಲೂಕಿಗೆ ಮಾಡಿರುವ ನೇಮಕವನ್ನು ರದ್ದುಗೊಳಿಸುವವರೆಗೂ ನಾವು ಪಕ್ಷದ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಕರುಣಾಕ ರೆಡ್ಡಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ನಮ್ಮ ಮನೆಯ ಆವರಣದಲ್ಲಿ ಕಾರ್ಯಕರ್ತರು ಎಲ್ಲರೂ ಸೇರಿ ಸಭೆಯನ್ನು ನಡೆಸಿದೆವು ಈ ಸಭೆಯಲ್ಲಿ ಎಲ್ಲಾ ಕಾರ್ಯಕರ್ತರು ಅವರವರ ಅಭಿಪ್ರಾಯಗಳನ್ನು ತಿಳಿಸಿದರು ಅವರೆಲ್ಲರ ಅಭಿಪ್ರಾಯವೊಂದೇ ತಾಲೂಕಿನಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ನೇಮಕವನ್ನು ತಾಲೂಕಿನಲ್ಲಿರುವ ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಿರುವುದಿಲ್ಲ ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಪಕ್ಷವಿರೋಧಿ ಚಟುವಟಿಕೆಯನ್ನು ನಡೆಸಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದವರನ್ನು ತಾಲೂಕಿನ ಪಕ್ಷದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿರುವುದು ಬೇಸರ ತಂದಿದೆ ಹಾಗಾಗಿ ಎಲ್ಲಾ ಕಾರ್ಯಕರ್ತರ ಸಮೇತ ಹೈ ಕಮಾಂಡ್ ಗೆ ನಿಯೋಗವನ್ನು ಒಯ್ಯಲಾಗುವುದು ಎಂದು ತಿಳಿಸಿದರು .
ಇದಕ್ಕೆ ಸುದ್ದಿಗಾರರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಕಾರಣಕರ್ತರಾಗಿದ್ದಾರೆ ಎಂದು ಹೇಳುತ್ತಿದ್ದೀರಿ ಇದಕ್ಕೆ ಯಾವುದಾದರೂ ಗುರುತರವಾದ ಸಾಕ್ಷಾಧಾರಗಳು ಇವೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹೈಕಮಂಡ್ ನಿಂದ ತಾಲೂಕಿನಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಸಮೀಕ್ಷೆಯನ್ನು ನಡೆಸಲಿ ಎಲ್ಲಾ ಗ್ರಾಮಗಳಲ್ಲಿಯೂ ಅವರ ಬಗ್ಗೆ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿರುವುದರ ಬಗ್ಗೆ ಜನರೇ ಉತ್ತರಿಸುತ್ತಾರೆ ಹಾಗಾಗಿ ಇಂತಹ ಅನೇಕ ಸಾಕ್ಷಿಯಾದಾರಗಳು ನಮ್ಮ ಕಾರ್ಯಕರ್ತರ ಬಳಿ ಇವೆ ಅವುಗಳನ್ನು ಹೈಕಮಾಂಡ್ ಗಮನಕ್ಕೆ ಕಾರ್ಯಕರ್ತರು ತರುತ್ತಾರೆ ಎಂದು ತಿಳಿಸಿದರು .
ಈ ಕ್ಷಣದಿಂದಲೇ ತಾಲೂಕಿನಲ್ಲಿ ಪಕ್ಷದ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ ಹಾಗೂ ಯಾವುದೇ ಚಟುವಟಿಕೆಗಳಲ್ಲಿ ನಾವು ಭಾಗವಹಿಸುವುದಿಲ್ಲ ಕಾರ್ಯಕರ್ತರ ಅಭಿಪ್ರಾಯಕ್ಕೆ ನಾನು ಸದಾ ಬದ್ದನಾಗಿರುತ್ತೇನೆ ಎಂದು ಹೇಳಿದ ಅವರು, ಈಗಾಗಲೇ ನೇಮಕಗೊಂಡಿರುವ ಅವರ ನೇಮಕವನ್ನು ರದ್ದು ಮಾಡಿ ತಾಲೂಕಿನಲ್ಲಿರುವ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡುವವರೆಗೂ ನಾವು ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಆರ್ ಲೋಕೇಶ್, ಕಲ್ಲೇರ ಬಸವರಾಜ ,
ಹೆಚ್.ಟಿ ಗಿರೀಶಪ್ಪ , ಲಕ್ಷ್ಮೀಪುರ ಶಿವಾಜಿ ನಾಯ್ಕ್ ,ಸಿಂಗ್ರಿಹಳ್ಳಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್,
, ಪುರಸಭೆ ಸದಸ್ಯರಾದ ಕಿರಣ್ ಶಾನುಭೋಗರ, ಎಂ ಕೆ ಜಾವಿದ್ ,ಗೌಳಿ ವಿನಯ್ ಕುಮಾರ್, ಮುಖಂಡರಾದ , ತರಕಾರಿ ಹನುಮಂತಪ್ಪ, ವಾಗೀಶ,
ಮೂಲಿಮನಿ ಹನುಮಂತಪ್ಪ , ಕೆ ಪ್ರಕಾಶ್,
ಹೆಚ್.ಟಿ. ಅರುಣ್ ಕುಮಾರ್ ನಿಟ್ಟೂರು, ಕೆ.ಡಿ.ಪ್ರಶಾಂತ , ಚಲುವಾದಿ ಸೋಮು, ಮತ್ತಿಹಳ್ಳಿ ಪ್ರಕಾಶ್, ಮ್ಯಾಕಿ ದುರ್ಗಪ್ಪ, ಮಾಚಿಹಳ್ಳಿ ಮಲ್ಲೇಶ್, ನೀಲಗುಂದ ಕೊಟ್ರೇಶ್,ತಿಮ್ಮಣ್ಣ,ಮಾಳ್ಗಿ ಕೆಂಚಪ್ಪ, ಬಾರಿಕರ ಜೋತೆಪ್ಪ, ಬೆಂಡಿಗೇರಿ ಚಂದ್ರಪ್ಪ, ಶಿವಾನಂದ ಜೆ , , ಯಲ್ಲಾಪುರದ ಅಂಜಿನಪ್ಪ, ರಾಗಿಮಸಲವಾಡ ಕರೇಗೌಡ , , ಹಲುವಾಗಲು ದ್ಯಾಮಣ್ಣ, ತೆಲಿಗಿ ಚೆನ್ನಗಿರಿ ರಾಜು , ನಂದಿ ಬೇವೂರು ರಾಜಪ್ಪ , ಚಿಗಟೇರಿ ಮುನಿಯಪ್ಪ , ಮೈದೂರು ಮಾರುತಿ, ಎನ್ ಶಿರಿನ್ ಹಳ್ಳಿ ಪ್ರಕಾಶ್ , ಮತ್ತಿಹಳ್ಳಿ ಕೊಟ್ರೇಶ್, ಶಾಸ್ವಿಹಳ್ಳಿ ಬಸವರಾಜ್, ಸೇರಿದಂತೆ ಮುಂತಾದವರು ಹಾಜರಿದ್ದರು.