Vijayanagara Express

Kannada News Portal

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭ ಪರ ವಿರೋಧ ಚರ್ಚೆ 

1 min read

 

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭ ಪರ ವಿರೋಧ ಚರ್ಚೆ
ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ   ಎಂ.ವಿ ಅಂಜಿನಪ್ಪ ನೇಮಕಗೊಂಡಿರುತ್ತಾರೆ ಅವರ ಪದಗ್ರಹಣ ಕಾರ್ಯಕ್ರಮವು ಬಹಳಷ್ಟು ಅದ್ಧೂರಿಯಿಂದ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಜರುಗಲು ತಯಾರಾಗಿದೆ ಇದರ ಬಗ್ಗೆ ಸಾರ್ವಜನಿಕರು ಚರ್ಚೆ ಆರಂಭಿಸಿದ್ದಾರೆ .
ಕಳೆದ 23 ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡು ಸಾಮಾನ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಎಂವಿ ಅಂಜಿನಪ್ಪ   ಈಗ ಪಕ್ಷವು ಗುರುತಿಸಿ ಅವರನ್ನು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಅವರ ಪಕ್ಷ ನಿಷ್ಠೆಗೆ ಸಿಕ್ಕ ಪ್ರತಿಫಲ ಎಂದು ಅವರ ಕೆಲವು ಹಿಂಬಾಲಕರು ಹೇಳುತ್ತಿದ್ದರೆ ಮತ್ತೆ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರು ಪಕ್ಷವು ಆತನಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ತಪ್ಪೇನಲ್ಲ ಅದರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದೂ ತಪ್ಪೇನಲ್ಲ ಆದರೆ ಈ ಹಿಂದೆ ಯಾರೂ ಇಂತಹ ಅಬ್ಬರದ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಈ ತರಹದ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ   ಎಂದು  ಅಭಿಪ್ರಾಯಪಡುತ್ತಾರೆ.
ಅದೇನೇ ಇರಲಿ ಈಗ ನಡೆಯುತ್ತಿರುವ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭ  ತಾಲೂಕಿನಲ್ಲಿ ಭಾರೀ ಚರ್ಚೆಯಾಗುತ್ತಿದೆ ದೇಶಕ್ಕೆ  ಸ್ವತಂತ್ರ ಬಂದು  ಸಾರ್ವತ್ರಿಕ ಚುನಾವಣೆಗಳು ಆರಂಭವಾಗಿ ಇಲ್ಲಿ ಹಲವಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇವೆ ಸಲ್ಲಿಸಿದ್ದಾರೆ ಅವರ ಪೈಕಿ ಮಾನಪ್ಪ ವಕೀಲರು,   ವಿಶೇಷವಾಗಿ ವಿರೂಪಾಕ್ಷಯ್ಯ ವಕೀಲರು ಧೀರ್ಘಕಾಲ ಅಂದರೆ 25 ವರ್ಷಗಳ ಕಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು  , ಚಿದಾನಂದಪ್ಪ ವಕೀಲರು,ಹೆಚ್ ಕೆ ಹಾಲೇಶ್ ವಕೀಲರು,  ಬೇಲೂರು ಅಂಜಿನಪ್ಪ ಹೀಗೆ ಹಲವಾರು ಕಾರ್ಯಕತ್ರರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು ಇವರಲ್ಲಿ ಕೆಲವರು   ಸ್ವತಂತ್ರ ಪೂರ್ವದಿಂದಲೂ ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದರು , ಅವರು ಎಂದೂ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡದೆ  ಪಕ್ಷ ಗುರುತಿಸಿ ಟಿಕೆಟ್ ನೀಡಿದ , ಪಕ್ಷದಿಂದ ಸ್ಪರ್ಧಿಸಿದ ಯಾರೇ ವ್ಯಕ್ತಿಯಿರಲಿ ಅವರ ಗೆಲುವಿಗಾಗಿ ಶ್ರಮಿಸಿ ಚುನಾವಣೆಯನ್ನು ಮಾಡಿ ಪಕ್ಷದ ಹಿತಕ್ಕಾಗಿ ದುಡಿದು  ಪಕ್ಷದ  ಹಿರಿಮೆಯನ್ನು ಎತ್ತಿಡದಂತವರಾಗಿದ್ದರು   .
ಆದರೆ ಇದಕ್ಕೆ  ಅಪವಾದ ಎಂಬಂತೆ ಎಂ.ವಿ ಅಂಜಿನಪ್ಪ ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ  ಸ್ಪರ್ಧಿಸಿದ್ದ ಅರಸೀಕೆರೆಯ ಎನ್ ಕೊಟ್ರೇಶ್ ರವರ ವಿರೋಧವಾಗಿ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ ಅವರ ಪರವಾಗಿ ಚುನಾವಣೆಯನ್ನು ಬಹಿರಂಗವಾಗಿಯೇ ಮಾಡಿದ್ದರು ಅಂದರೆ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಸಾಕಷ್ಟು ಹೋರಾಟವನ್ನು ಮಾಡಿ ಪಕ್ಷದ ಹಿನ್ನಡೆಗೆ ಕಾರಣರಾಗಿದ್ದರು. ಹೀಗಾಗಿ ಪಕ್ಷದ ವಿರೋಧ ಮಾಡಿ ಚುನಾವಣೆಯನ್ನು ಮಾಡಿದ ವ್ಯಕ್ತಿಗೆ ತಾಲೂಕಿನ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಪಕ್ಷದ  ಹೈಕಮಾಂಡ್ ನ  ನಿರ್ಣಯ ಸರಿಯಾದ ಕ್ರಮ ಅಲ್ಲ ಎಂದು ಹೆಸರು ಹೇಳಲಿಚ್ಚಿಸದ ಕೆಲ ಹಿರಿಯ ಕಾಂಗ್ರೆಸ್  ಮುಖಂಡರು ಹಾಗೂ ಕಾರ್ಯಕರ್ತರು   ಅಭಿಪ್ರಾಯ ಪಡುತ್ತಾರೆ .
ಹೀಗೆ   ತಾಲೂಕಿನ  ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರು  ಪಕ್ಷೇತರ ಅಭ್ಯರ್ಥಿಯ ಪರವಾಗಿ ಚುನಾವಣೆಯನ್ನು ಮಾಡಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಶ್ರಮಿಸಿದವರನ್ನು ಇಷ್ಟು ಬೇಗ ಪಕ್ಷದಲ್ಲಿ ಹುದ್ದೆಯನ್ನು ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ  ಎಂದು ತಾಲೂಕಿನಾದ್ಯಂತ ಬಾರೀ ಚರ್ಚೆಯಾಗುತ್ತಿದೆ .
ಅದೇನೇ ಇರಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನು ಎಂವಿ ಅಂಜಿನಪ್ಪ ಅವರಿಗೆ ನೀಡಿರುವ ಬಗ್ಗೆ ಪರ ವಿರೋಧಗಳು  ತಾಲೂಕಿನಲ್ಲಿ ಏನೇ ಚರ್ಚೆಗಳು ಆದರೂ ಸಹ  ಪಕ್ಷಕ್ಕಾಗಿ 20 ವರ್ಷಕ್ಕೂ ಹೆಚ್ಚು ಕಾಲ ಸೇವೆಯನ್ನು ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ ಅವರಿಗೆ  ಈ  ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದಾರೆ ಅವರು ಸಹ ಹಿಂದುಳಿದ  ಶೋಷಿತ ದಲಿತ ಸಮುದಾಯದ ನಾಯಕರಾಗಿದ್ದಾರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಪಕ್ಷದ ಸಂಘಟನೆಯನ್ನು ಮಾಡಿಕೊಂಡು ಹೋಗುವ  ಮೂಲಕ   ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡರೆ  ಅವರನ್ನು ಪಕ್ಷ ಗುರುತಿಸಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನು ನೀಡಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು ಎಂದೇ ಹೇಳಬಹುದು.
ಜನವರಿ 12ನೇ ತಾರೀಖಿನಂದು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಸಭೆಯನ್ನು ಕರೆದಿದ್ದರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು  ನೇಮಕ ಮಾಡಲಾಗುವುದು ಎಂದು ಹೇಳಿದ್ದರಲ್ಲದೇ ಗೊಂದಲವಿದ್ದ ಕಡೆ ನಾನೇ ಖುದ್ದಾಗಿ ಬಂದು ಕಾರ್ಯಕರ್ತರ ಸಭೆಯನ್ನು ನಡೆಸಿ ಅಭಿಪ್ರಾಯ ಪಡೆದು ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದರು .
ಆದರೆ ಇದೀಗ ದಿಢೀರನೆ ಪಕ್ಷೇತರ ಅಭ್ಯರ್ಥಿಯಾಗಿ  ಸ್ಪರ್ಧಿಸಿ ಗೆದ್ದಿದ್ದ ಶಾಸಕರ ಮಾತಿನ ಮೇರೆಗೆ ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ  ಹೊರಡಿಸಿದ್ದಾರೆ ಇದಕ್ಕೆ ನಮ್ಮ ಯಾವುದೇ ಅಭಿಪ್ರಾಯವನ್ನು ಪಡೆದಿಲ್ಲ ಅಲ್ಲದೆ ಪಕ್ಷದ ಮುಖಂಡರ ಅಭಿಪ್ರಾಯವನ್ನು ಸಹ ಪಡೆದಿಲ್ಲ  ಹಾಗೂ  ಈ ಕುರಿತು ವಿಜಯನಗರ ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಜಮೀರ್ ಅಹ್ಮದ್ ಖಾನ್ ರವರ ಗಮನಕ್ಕೆ ತಂದಿದ್ದೇವೆ ಅವರು ಸಹ ನಮ್ಮೊಂದಿಗೆ ಸ್ಪಂದಿಸುತ್ತಿಲ್ಲ  ತಾಲೂಕಿನಲ್ಲಿ  ಪಕ್ಷದ ಕಾರ್ಯಕ್ರಮಗಳು ಏನೇ ನಡೆದರೂ ಪಕ್ಷೇತರ ಶಾಸಕರ ಮಾತನ್ನೇ ಅವರ ಪಾಲಿಸುತ್ತಿದ್ದಾರೆ  ಇದು ಸರಿಯಾದ ಕ್ರಮವಲ್ಲ .
ಅರಸೀಕೆರೆ ಎನ್ ಕೊಟ್ರೇಶ್ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ .
ಚುನಾವಣೆಗಳು ಬಂದಾಗ ಪಕ್ಷಕ್ಕೆ ಸೇರ್ಪಡೆಕೊಳ್ಳುವುದು ಹಾಗೂ ವಲಸೆ ಹೋಗುವುದು ಸಹಜ  , ಇಲ್ಲಿ  ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಆಧರಿಸಿ ಹೈಕಮಾಂಡ್ ಬ್ಲಾಕ್ ಕಾಂಗ್ರೆಸ್ ಹುದ್ದೆಗೆ ನೇಮಕ ಮಾಡಿರುತ್ತದೆ ಅದನ್ನು ಎಲ್ಲರೂ ಪಾಲಿಸಲೇಬೇಕು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರಲ್ಲಿ ಗುಂಪುಗಳು ಬಣಗಳು ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿ ಸಿಕೊಂಡು ಪಕ್ಷ ಸಂಘಟನೆ  ಮಾಡಿಕೊಂಡು ಹೋಗುತ್ತೇವೆ .
ಸಿರಾಜ್ ಶೇಖ್
ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷರು ವಿಜಯನಗರ ಜಿಲ್ಲೆ

Leave a Reply

Your email address will not be published. Required fields are marked *