Vijayanagara Express

Kannada News Portal

ಲೋಕಲ್ ನೀವಲ್ಲ ನಾನು , ಪುರಸಭೆ ಮಾಜಿ ಅಧ್ಯಕ್ಷ ಮತ್ತು ಶಾಸಕರ ನಡುವೆ ಮಾತಿನ ಚಕಿಮಕಿ

1 min read

ಲೋಕಲ್ ನೀವಲ್ಲ ನಾನು , ಪುರಸಭೆ ಮಾಜಿ ಅಧ್ಯಕ್ಷ ಮತ್ತು ಶಾಸಕರ ನಡುವೆ ಮಾತಿನ ಚಕಿಮಕಿ

ಹರಪನಹಳ್ಳಿ: ಮಾ -11 ,ಲೋಕಲ್ ನೀವಲ್ಲ ನಾನು ಎಂದು
ಪುರಸಭೆ ಮಾಜಿ ಅಧ್ಯಕ್ಷ ಮತ್ತು ಹರಪನಹಳ್ಳಿ ಶಾಸಕರ ನಡುವೆ ಮಾತಿನ ಚಕಿಮಕಿ ನಡೆದ ಘಟನೆ ಪುರಸಭೆಯಲ್ಲಿ ನೆಡೆಯಿತು .
ಪಟ್ಟಣದ ಪುರಸಭೆ ಕಚೇರಿಯ ಸಬಾ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಪುರಸಭೆಯ ವಾರ್ಷಿಕ ಬಜೆಟ್ ಮಂಡನೆಯ ವೇಳೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹರಾಳ್ ಎಚ್ ಎಮ್ ಅಶೋಕ್ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಪರಸ್ಪರ ಲೋಕಲ್ ನಾನು ನೀವಲ್ಲ ಎಂದು ಮಾತನಾಡಿಕೊಂಡ ಘಟನೆ ನಡೆಯಿತು .

ಪುರಸಭೆಯ ವಾರ್ಷಿಕ ಬಜೆಟ್ಟನ್ನು ಪುರಸಭೆ ಆಡಳಿತಾಧಿಕಾರಿ ಚಿದಾನಂದ ಗುರುಸ್ವಾಮಿಯವರು ಓದಿದ ನಂತರ ಬಜೆಟ್ ಮೇಲೆ ಶಾಸಕಿ ಲತಾ ಮಲ್ಲಿಕಾರ್ಜುನ್ ರವರು ಮಾತನ್ನು ಆರಂಭಿಸಿದರು ಆಗ ಪುರಸಭೆ ಮಾಜಿ ಅಧ್ಯಕ್ಷ ಹರಾಳ್ ಹೆಚ್ ಎಂ ಅಶೋಕ್ ರವರು ಮಧ್ಯಪ್ರವೇಶಿಸಿ ಪಟ್ಟಣದಲ್ಲಿ ಪ್ರತಿವರ್ಷ ಬಜೆಟ್ ನಲ್ಲಿ ಶೌಚಾಲಯಗಳ ಅಭಿವೃದ್ಧಿಗೆ ಹಣವನ್ನು ಮೀಸಲಿಡಲಾಗುತ್ತದೆ ಒಂದು ಜಾರಿಗೆ ಬರುವುದಿಲ್ಲ ಅಲ್ಲದೇ ಹರಿಹರ ಹೂವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಹೀಗೆ ಅಕ್ಕಪಕ್ಕದ ತಾಲೂಕುಗಳಲ್ಲಿ ಉದ್ಯಾನವನಗಳನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ ಆ ರೀತಿಯಾದಂತಹ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಇಲ್ಲಿ ಸಾಧ್ಯವಾಗಿಲ್ಲ ಅಲ್ಲದೆ ದಿನವಹಿಸಂತೆ ಮತ್ತು ವಾರದ ಸಂತೆ ನಡೆಯುವ ಸಂತೆ ಬಯಲಿನ ಕಾಮಗಾರಿ ಕಟ್ಟಡವು ನೆನೆಗುದಿಗೆ ಬಿದ್ದಿದೆ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮವನ್ನು ವಹಿಸಿಲ್ಲ ಇದರ ಬಗ್ಗೆ ಶಾಸಕರು ಗಮನವಹರಿಸಬೇಕು ಆದಷ್ಟು ಬೇಗ ಇವುಗಳ ಅಭಿವೃದ್ಧಿಗೆ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು .

ಇದಕ್ಕೆ ಪ್ರತಿಕ್ರಿಸಿದ ಶಾಸಕರು ನಮಗೂ ಸಹ ಪಟ್ಟಣ ಮತ್ತು ತಾಲೂಕಿನ ಬಗ್ಗೆ ನಿಮಗಿಂತಲೂ ಕಾಳಜಿ ಇದೆ ನೀವು ಈ ತಾಲೂಕಿನವರಲ್ಲ ,ಹಾರಾಳ್ ಕೊಟ್ಟೂರು ತಾಲೂಕಿನಲ್ಲಿದೆ ಎಂದೊಡನೆ ಸಿಟ್ಟಿಗೆದ್ದ ಮಾಜಿ ಅಧ್ಯಕ್ಷ ಅಶೋಕ್ ರವರು ನಿಮ್ಮದು ಕೂಡಾ ಹರಪನಹಳ್ಳಿ ತಾಲೂಕು ಅಲ್ಲ ಹೂವಿನಹಡಗಲಿ ತಾಲೂಕು ಎಂದು ಏರು ಧ್ವನಿಯಲ್ಲಿ ಉತ್ತರವನ್ನು ನೀಡಿದರು ಇದಕ್ಕೆ ಪ್ರತಿಕ್ರಿಸಿದ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು ನಾನು ಹರಪನಹಳ್ಳಿಯಲ್ಲಿ ವೋಟರ್ ಕಾರ್ಡ್ ಮಾಡಿಸಿದ್ದೇನೆ ತೋರಿಸಲಾ ಎಂದು ಪ್ರಶ್ನಿಸಿದರು , ಅದಕ್ಕೆ ಅಶೋಕ್ ನೀವು ಈಗ ವೋಟರ್ ಕಾರ್ಡ್ ಮಾಡಿಸಿದ್ದೀರಿ ನಾನು ವೋಟರ್ ಕಾರ್ಡ್ ನ್ನು 15 ವರ್ಷಗಳ ಹಿಂದೆಯೇ ಮಾಡಿಸಿದ್ದೇನೆ ಅಷ್ಟಕ್ಕೂ ನಮ್ಮದು ಹರಪನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮ ಹಾಗಾಗಿ ನಾವು ಇದೆ ತಾಲೂಕಿನವರು ಎಂದು ಪ್ರತಿವಾದಿಸಿದರು.

ಈ ವೇಳೆ ಪುರಸಭೆ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾದ ರಹಿಮಾನ್ ವಕೀಲರು ಮಧ್ಯಪ್ರವೇಶಿಸಿ ಘನತ್ಯಾಜ್ಯ ವನ್ನು ಮನೆಗಳಲ್ಲಿ ಹಸಿ ಕಸ ಒಣ ಕಸವನ್ನು ಬೇರ್ಪಡಿಸಿ ಪುರಸಭೆಯ ವಾಹನಕ್ಕೆ ಹಾಕಲು ಬಕೆಟ್ ಗಳನ್ನು ಕೊಡಬೇಕು ಎಂಬುದರ ಬಗ್ಗೆ ಸ್ವಲ್ಪ ಚರ್ಚಿಸಿ ಕ್ರಮ ಕೈಗೊಳ್ಳಿ ಎಂದು ಶಾಸಕರಿಗೆ ಹೇಳಿದರು ಆಗ ಈ ವಿಷಯ ತಿಳಿಯಾಗಿ ಅದನ್ನು ಅಲ್ಲಿಗೆ ಬಿಟ್ಟರು .

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎರೆಗುಡಿ ಶಿವಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಇದಂತ್ಕರ್ ಮಂಜುನಾಥ್ , ಸದಸ್ಯರಾದ ವೆಂಕಟೇಶ್ ವಕೀಲರು, ಉದ್ದಾರ ಗಣೇಶ್, ಹೆಚ್ ಕೊಟ್ರೇಶ್, ಟಿ ಲಕ್ಕಮ್ಮ, ಸಿ ಹನುಮಕ್ಕ , ಎಲ್ಲಮ್ಮ , ಪುರಸಭೆ ಸಿಬ್ಬಂದಿ  ಸೇರಿದಂತೆ ಮುಂತಾದವರು ಹಾಜರಿದ್ದರು.

 

 

 

 

Leave a Reply

Your email address will not be published. Required fields are marked *