ನಿಟ್ಟೂರು ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿ ಸುಧಾ ಬಾರ್ಕಿ ಆಯ್ಕೆ
1 min readನಿಟ್ಟೂರು ಗ್ರಾಮಪಂಚಾಯಿತಿಯ ಅಧ್ಯಕ್ಷರಾಗಿ ಸುಧಾ ಬಾರ್ಕಿ ಆಯ್ಕೆ
ಹರಪನಹಳ್ಳಿ: ಅ -5 , ತಾಲೂಕಿನ ನಿಟ್ಟೂರು ಗ್ರಾಮಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಸುಧಾ ಬಾರ್ಕಿ ಉಪಾಧ್ಯಕ್ಷರಾಗಿ ಕೆ ಮಾರುತಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ಪ್ರಕಾಶ್ ನಾಯ್ಕ್ ಘೋಷಣೆ ಮಾಡಿದರು.
ಒಟ್ಟು 16 ಸದಸ್ಯ ಬಲಾಬಲ ಹೊಂದಿರುವ ಪಂಚಾಯಿತಿ ಇದಾಗಿದ್ದು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸುಧಾ ಬಾರ್ಕಿ ಮತ್ತು ಶಿವಕುಮಾರ್ ಇಬ್ಬರು ನಾಮಪತ್ರ ಸಲ್ಲಿಸಿದ್ದರು ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸಿ ನಾಗಮ್ಮ ಮತ್ತು ಕೆ ಮಾರುತಿ ನಾಮಪತ್ರವನ್ನು ಸಲ್ಲಿಸಿದ್ದರು ಅದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಶಿವಕುಮಾರ್ ರವರು 7 ಮತಗಳನ್ನು ಪಡೆದು ಪರಾಭವ ಗೊಂಡರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಸುಧಾ ಬಾರ್ಕಿ ಯವರು 8 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ರಾಗಿ ಆಯ್ಕೆಯಾದರು ಒಂದು ಮತ ಅಪಮೌಲ್ಯ ವಾಗಿದೆ , ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿ ನಾಗಮ್ಮ ಮತ್ತು ಕೆ ಮಾರುತಿ ರವರಿಗೆ ಸಮಾನವಾಗಿ 8 ಮತಗಳು ಬಿದ್ದಿದ್ದರಿಂದ ಸರ್ವಸದಸ್ಯರ ಒಪ್ಪಿಗೆ ಪಡೆದು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು ಆಗ ಲಾಟರಿಯಲ್ಲಿ ಕೆ ಮಾರುತಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಪ್ರಕಾಶ್ ನಾಯ್ಕ್ ಸುದ್ದಿಗಾರರಿಗೆ ತಿಳಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ಸುಧಾ ಬಾರ್ಕಿ ಯವರು ನನ್ನ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾದ ರೀತಿಯಲ್ಲಿ ಕೆಲಸನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮತ್ತೂರು ಸಂಕಪ್ಪ,ಕೊಟ್ರೇಶ್ ಕೆ ಹೆಚ್, ಕರೂರು ಶಿವಪ್ಪ , ಬಿಮಜ್ಜರ ನಾಗಪ್ಪ , ನೆಸ್ವಿ ನಾಗಪ್ಪ, ಹೆಚ್ .ಟಿ ಅರುಣ್ ಕುಮಾರ್, ಜೆ ಅಶೋಕ್, ಪರಶುರಾಮ ಎನ್ ,ಕೆ . ಡಿ.ಪ್ರಶಾಂತ್, ಮೂಲಿಮನಿ ಹನುಮಂತಪ್ಪ , ಎನ್ ಹನುಮಂತಪ್ಪ, ಭೀಮೇಶ್ ,ಕೆ.ಎಸ್ .ಸೋಮಲಿಂಗಪ್ಪ , ಗೋದೇಶ ಬಿ, ಐರಣಿ ಜನಾರ್ದನ, ಮತ್ತೂರು ಕೋಟೆಪ್ಪ,ಆರ್ ಮಂಜಪ್ಪ,ಸಣ್ಣಸೋಮಪ್ಪ,ಕೃಷ್ಣಪ್ಪ ಸಿ,ಸೋಮಪ್ಪ ಸಿ, ನಾಗರಾಜ್ .ಸಿ , ಹೆಚ್.ಹನುಮಂತಪ್ಪ , ಮಾರುತಿ ಪಿ, ಆರ್ ವಿಶ್ವನಾಥ್, ಎನ್ ಕೊಟ್ರೇಶ್ ,ನವಿನ ಜೆಸಿ , ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ನವಿನ ಸಿಂಗ್ರಿಹಳ್ಳಿ ,ಹೆಚ್ ಎಂ ಸಿದ್ದಲಿಂಗ ಸ್ವಾಮಿ, ಎ ಮಲ್ಲಪ್ಪ, ನಿರಂಜನ ಬಣಕಾರ್, ಬಡಿಗೇರ ಲಕ್ಷ್ಮಣ, ವಸಂತ್ ಬಿ, ಪಿ.ಪರಶುರಾಮ್ ,ತಾವರಗುಂದಿಯ ಯಲ್ಲಪ್ಪ, ಎಸ್ ದೇವೇಂದ್ರಪ್ಪ ಬಸವರಾಜಪ್ಪ, ಈರಣ್ಣ, ಶಿವಯೋಗಪ್ಪ, ವಾಗೀಶ, ನಿಟ್ಟೂರು ಗ್ರಾಮಪಂಚಾಯಿತಿಯ ಹಾಲಿ ಮಾಜಿ ಸದಸ್ಯರು, ನಿಟ್ಟೂರು ಬಸಾಪುರ, ತಾವರಗುಂದಿ, ನಿಟ್ಟೂರು ಮತ್ತೂರು ಗ್ರಾಮದಗಳ ಬಿಜೆಪಿ ಮುಖಂಡರು , ಗ್ರಾಮ ಪಂಚಾಯಿತಿ ಪಿಡಿಒ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.