Vijayanagara Express

Kannada News Portal

ಶತಮಾನ ಪೂರೈಸಿದ ಸರ್ಕಾರಿ ಶಾಲೆಯಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ

1 min read

ಶತಮಾನ ಪೂರೈಸಿದ ಸರ್ಕಾರಿ ಶಾಲೆಯಲ್ಲಿ ಅದ್ದೂರಿ ಸ್ವಾತಂತ್ರ್ಯೋತ್ಸವ ಆಚರಣೆ

 

ಹರಪನಹಳ್ಳಿ: ಅ-15 , ಪಟ್ಟಣದ ಮೇಗಳಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ 77 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ವಿಶೇಷವೆಂದರೆ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಈ ಶಾಲೆಯು ಶತಮಾನೋತ್ಸವ ಪೂರೈಸಿದ್ದಕ್ಕಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗಿತ್ತು ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ಅನೇಕ ಹಿರಿಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಇದ್ದಾರೆ ಅವರೆಲ್ಲರೂ ಶಾಲೆಯ ಬಗ್ಗೆ ಅಪಾರ ಪ್ರೀತಿ ಕಾಳಜಿ ಹಾಗೂ ಶಾಲೆಯ ಬೆಳವಣಿಗೆಗೆ ಉತ್ಸುಕರಾಗಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮದಲ್ಲಿ ಅನೇಕ ಹಿರಿಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯನ್ನು ವಿಶೇಷವಾದ ತಳಿರು ತೋರಣಗಳಿಂದ ಅಲಂಕರಿಸಿ ಸಿದ್ದತೆ ಮಾಡಿದ್ದರು ತಾಲೂಕಿನಲ್ಲೇ ಈ ಶಾಲೆಯು ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇಲ್ಲಿ ಸುಮಾರು 652 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿರುವ ಈ ಕಾಲದಲ್ಲಿಯೂ ಅದರಲ್ಲೂ ವಿಶೇಷವಾಗಿ ಪಟ್ಟಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯು ಇಷ್ಟೊಂದು ವಿದ್ಯಾರ್ಥಿಗಳನ್ನು ಪ್ರವೇಶ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಇದಕ್ಕೆ ಪ್ರಮುಖ ಕಾರಣವೆಂದರೆ ಇಲ್ಲಿರುವ ಬೋಧಕ ಸಿಬ್ಬಂದಿಗಳ ಪ್ರಾಮಾಣಿಕ ಮತ್ತುಅರ್ಪಣಾ ಮನೋಭಾವನೆಯ ಕಠಿಣ ಪರಿಶ್ರಮವೇ ಕಾರಣ ಎಂದು ಜನರು ಹೇಳುತ್ತಿದ್ದಾರೆ.

ಶಾಲೆಯ ಧ್ವಜಾರೋಹಣವನ್ನು ಶಾಲೆ ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಎಂ ರೇಖಾ ರವರು ನೆರವೇರಿಸಿದರು,ಈ ವೇಳೆ ರಾಷ್ಟ್ರಗೀತೆ, ಅನೇಕ ದೇಶಭಕ್ತಿ ಗೀತೆಗಳನ್ನು ಹಾಡಿದರು.
ಅನೇಕ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಬಗ್ಗೆ ಮಾತನಾಡಿದರು .
ಶಿಕ್ಷಕಿ ಶೈಲಾ ಹೆಚ್ ರವರು ಮಾತನಾಡಿ ಸ್ವಾತಂತ್ರಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಅದನ್ನು ಉಳಿಸಿಕೊಂಡು ಒಳ್ಳೆಯ ಕಡೆ ನಡೆದು ಭವಿಷ್ಯದ ಭಾರತವನ್ನು ಮುನ್ನಡೆಸಲು ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತರಾದ ಪಟ್ನಾಮದ ವೆಂಕಟೇಶ್ ಮಾತನಾಡಿ ಸ್ವಾತಂತ್ರ್ಯ ಎಂಬ ಕಲ್ಪನೆಯು ಒಂದು ಎರಡು ದಿನಗಳ ಹೋರಾಟವಲ್ಲ ಅದು ಸಹಸ್ರಾರು ಹೋರಾಟಗಾರರು ಸೇರಿ ಸುಮಾರು 150 ವರ್ಷಗಳಿಂದ ಮಾಡಿದ ಹೋರಾಟ, ತ್ಯಾಗ ಬಲಿದಾನದ ಪ್ರತೀಕವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಭವಿಷ್ಯತ್ತಿನ ಭವ್ಯ ಭಾರತದ ಸತ್ಪ್ರಜೆಗಳಾಗುವ ಮುದ್ದು ಮಕ್ಕಳೇ ಮುಂದೆ ಒಳ್ಳೆಯ ಭವಿಷ್ಯ ಬದುಕು ನಿಮಗೆ ದೊರಕುವಂತಾಗಲಿ ಶ್ರೇಷ್ಠ ಮಟ್ಟದ ದೇಶಭಕ್ತಿಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕ ಪಿ ಅಂಜಿನಪ್ಪ, ಶಿಕ್ಷಕ ಸಲೀಂ ಹೆಚ್ , ಬಿ ನಾಗರತ್ನ , ಎನ್ ಜಿ ಚಿದಾನಂದಪ್ಪ ,ಮಾತನಾಡಿದರು.
ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಿಂದ
ಪೆನ್ನು ನೋಟ್ ಪುಸ್ತಕಗಳನ್ನು ವಾಲ್ಮೀಕಿ ನಗರದ ದಾಣಿ ದುರುಗಪ್ಪ ರವರು ಮಕ್ಕಳಿಗೆ ವಿತರಿಸಿದರು ಅಲ್ಲದೆ 2004-2005 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಒಂದು ಕಬ್ಬಿಣದ ಬೀರೋ ವನ್ನು ದೇಣಿಗೆ ನೀಡಿದರು ಅಲ್ಲದೆ ಸಂಕಪ್ಪನವರ ಪ್ರಕಾಶ್ ರವರು ಸಹ ಶಾಲೆಗೆ ಒಂದು ಕಬ್ಬಿಣದ ಬೀರೊವನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಎ ಎಸ್ ಗುಡಗುಡು ,ಎಸ್ ಶಿವಯೋಗಿ, ಎಂ ರತ್ನಮ್ಮ , ಜಿ ಚಂದ್ರಮ್ಮ, ಎಂ ಬಿ ಮಂಜುಳಾ, ಎಸ್ ಕೊಟ್ರಮ್ಮ,ಹೆಚ್ ಎಂ ವಿಜಯಕುಮಾರಿ,ಆರ್ ಸವಿತ, ಹೆಚ್ ಎಂ ಪುಣ್ಯವತಿ , ಮಂಗಳಗೌರಮ್ಮ ಡಿ, ವಿದ್ಯಾರ್ಥಿಗಳು ಶಾಲೆ ಮೇಲುಸ್ತುವಾರಿ ಸಮಿತಿಯ ಸದಸ್ಯರು ಪೋಷಕರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *