Vijayanagara Express

Kannada News Portal

ಗಾಂಧಿ ಜಯಂತಿ ಪ್ರಯುಕ್ತ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಆನಂದ್ ಡೊಳ್ಳಿನ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗಿ

1 min read

ಗಾಂಧಿಜಯಂತಿ ಪ್ರಯುಕ್ತ ಸ್ವಚ್ಛತೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಕಾಧಿಕಾರಿ ಆನಂದ್ ಡೊಳ್ಳಿನ.
ಹರಪನಹಳ್ಳಿ :ಆ 2 ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರ ಜನ್ಮದಿನದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಬಾಲಕಿಯರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಸ್ವಚ್ಛತೆ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಸಮಾಜ ಕಲ್ಯಾಣಇಲಾಖೆ ಅಧಿಕಾರಿ ಆನಂದ್ ಡೊಳ್ಳಿನ
ರಾಷ್ಟ್ರಪಿತ ಮಹಾತ್ಮಗಾಂಧಿ ಯವರು ಅಹಿಂಸೆ ಮತ್ತು ಶಾಂತಿಗೆ ಮಹತ್ವ ಕೊಟ್ಟಂತೆ ಸ್ವಚ್ಛತೆಗೂ ಸಹ ಮಹತ್ವವನ್ನು ನೀಡಿದ್ದರು ಇದಕ್ಕೆ ಸಾಕ್ಷಿ ಎಂಬಂತೆ ಸ್ವತಃ ಗಾಂಧೀಜಿಯವರೇ ಹರಿಜನರ ಕೇರಿಗಳಲ್ಲಿ ಕಸವನ್ನು ಗುಡಿಸುವುದರ ಮೂಲಕ ಸ್ವಚ್ಛತೆ ಯ ಮಹತ್ವವನ್ನು ಜನರಿಗೆ ಸಾರಿ ಹೇಳಿದ್ದರು ಅವರು ಆ ಕಾಲದಲ್ಲೇ ದೇಶದ ಉದ್ದಗಾಲಕ್ಕೂ ಸಂಚರಿಸಿ ದೇಶಕ್ಕೆ ಸ್ವತಂತ್ರದ ಮಹತ್ವವನ್ನು ಜನತೆಗೆ ಸಾರುವುದರ ಜತೆಗೆ ಇಂತಹ ವಿಷಯಗಳಿಗೂ ಮಾನ್ಯತೆಯನ್ನು ನೀಡಿದ್ದರು ಎಂದರು.
ಈ ಸಂದರ್ಭದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯ ಪಾಲಕರಾದ ಯಲ್ಲಮ್ಮ ಅಡುಗೆಸಿಬ್ಬಂದಿಗಳು ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *