Vijayanagara Express

Kannada News Portal

ರಾಹುಲ್ ಗಾಂಧಿ ಒಬ್ಬ ದೂರದೃಷ್ಟಿ ನಾಯಕ -ಮತ್ತೂರು ಬಸವರಾಜ್.

1 min read

ರಾಹುಲ್ ಗಾಂಧಿ ಒಬ್ಬ ದೂರದೃಷ್ಟಿಯ ನಾಯಕ, ಮತ್ತೂರು ಬಸವರಾಜ್.

ಹರಪನಹಳ್ಳಿ: ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಯವರಿಗೆ ಈ ದೇಶದ ಜನರ ಬಗ್ಗೆ,ರೈತರ,ಬಡವರ ಬಗ್ಗೆ ಕಾಳಜಿ ಇದೆ, ಕೋವಿಡ್ ಬೇರೆ,ಬೇರೆ ದೇಶಗಳಲ್ಲಿ ಇದ್ದಾಗಲೇ ಕೇಂದ್ರಕ್ಕೆ ಎಚ್ಚರಿಸಿದ್ದ ನಾಯಕ, ಸರ್ಕಾರದ ಎಡವಟ್ಟಿನಿಂದ ಭಾರತ ನಮ್ಮ ಸಂಬಂಧಿಗಳನ್ನು,ಸ್ನೇಹಿತರನ್ನ ಕಳೆದುಕೊಂಡು ದುಬಾರಿ ಬೆಲೆ ತೆರೆಯುವಂತಾಯಿತು.

ಕೃಷಿ ಕಾಯ್ದೆ ರೈತರಿಗೆ ಮಾರಕ ಆ ಕಾಯ್ದೆಯನ್ನು ವಾಪಾಸು ಪಡೆಯಲು ಒತ್ತಾಯಿಸಿದ್ದು ಮೊದಲು ರಾಹುಲ್ ಗಾಂಧಿ..

ನೋಟು ಅಮಾನ್ಯೀಕರಣದ ದುರಂತದ ಬಗೆಗೂ ಮಾತನಾಡಿದ್ದು ರಾಹುಲ್, ರಾಹುಲ್ ಒಬ್ಬ ದೂರದೃಷ್ಟಿಯ ನಾಯಕ ಎಂದು ಹರಪನಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ ಅಭಿಪ್ರಾಯಪಟ್ಟರು.

ಅವರು ಇಂದಿರಾಗಾಂಧಿ ಜನ್ಮ ದಿನಾಚರಣೆ ದಿನದಂದು ಮಾತನಾಡುತ್ತಾ ರೈತ ವಿರೋಧಿ ಕಾಯ್ದೆ ಯನ್ನು ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಂದು ವಾಪಾಸು ಪಡೆದಿರುವುದು ಕೂಡಾ ಭಾರತದ ರೈತರ ಗೆಲುವಾಗಿದೆ,ಇಷ್ಟು ದಿನ ರೈತರು ನಿರಂತರವಾಗಿ ಹೋರಾಟ ಮಾಡಬೇಕಾಗಿದ್ದು ಈ ದೇಶದ ದುರಂತ ಎಂದರು.

Leave a Reply

Your email address will not be published. Required fields are marked *