Vijayanagara Express

Kannada News Portal

ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಒಂದು ನೂರು ಗಿಡನೆಟ್ಟ ಬಿಜೆಪಿ ತಾಲೂಕು ಮುಖಂಡರು

1 min read

ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಒಂದು ನೂರು ಗಿಡನೆಟ್ಟ ಬಿಜೆಪಿ ತಾಲೂಕು ಮುಖಂಡರು

 

ಹರಪನಹಳ್ಳಿ: ಜೂನ್ 5 ಪರಿಸರ ದಿನದ ಅಂಗವಾಗಿ ಪಟ್ಟಣದ ಕಾಶಿ ಸಂಗಮೇಶ್ವರ ಬಡವಾಣೆಯಲ್ಲಿ ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಸುಮಾರು ಒಂದು ನೂರಕ್ಕೂ ಹೆಚ್ಚು ಸಸಿಗಳನ್ನು ನಡೆಲಾಯಿತು .


ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಮ ನಿರ್ದೇಶಿತ ಸದಸ್ಯ ಆರುಂಡಿ ನಾಗರಾಜ್ ಪರಿಸರ ಚೆನ್ನಾಗಿದ್ದರೆ ಪ್ರಕೃತಿಯಲ್ಲಿ ಯಾವುದೇ ವಿಕೋಪ ಕಂಡುಬರುವುದಿಲ್ಲ ಅದ್ದರಿಂದ ಮನುಷ್ಯನ ಉಳಿವಿಗಾಗಿ ಪರಿಸರದ ರಕ್ಷಣೆ ಅತ್ಯಗತ್ಯ ಹಾಗಾಗಿ ನಾವು ಹಿಂದಿನಿಂದಲೇ ನಾವೆಲ್ಲರೂ ಅರಣ್ಯ ಉಳಿಸಲು ಕಾರ್ಯ ಪ್ರವೃತ್ತ ರಾಗೋಣ ಪ್ರತಿ ಮನೆಯ ಸುತ್ತ ಮುತ್ತ ಗಿಡಮರಗಳನ್ನು ಬೆಳೆಸಿ ಪರಿಸರ ಕಾಪಾಡಿಕೊಳ್ಳೋಣ ಎಂದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್ ,ಸಹಕಾರಿ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ನಂಜನಗೌಡ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷ ರಾದ ಆರುಂಡಿ ಸುವರ್ಣ ನಾಗರಾಜ್,ಎಂ ಪಿ ನಾಯ್ಕ್ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಎಂ ಪ್ರಭಾವತಿ ಅಶೋಕ್, ಪುರಸಭೆ ಸದ್ಯಸ್ಯ ಹಾರಳ ಅಶೋಕ್, ಕಲ್ಲೆರ್ ಬಸವರಾಜ್, ಮುಖಂಡರಾದ ಉದಯ್ ಕುಮಾರ್, ಜಿ. ಓಂಕಾರಗೌಡ್ರು, ರಮೇಶ್ ಕುಮಾರ್ , ಮಂಜ್ಯಾನಾಯ್ಕ್ ,ವೆಂಕಟೇಶ್ ನಾಯ್ಕ್,ಚನ್ನನಗೌಡ ,ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಕ್ಷಯ್ ಕುಮಾರ್ ಪಿ ವಿ ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *