ಹರಪನಹಳ್ಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ , ಹೋರಾಟ ಆರಂಭ ಪೂರ್ವ ಭಾವಿ ಸಭೆ
1 min readಹರಪನಹಳ್ಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ನೆನೆಗುದಿಗೆ , ಹೋರಾಟ ಆರಂಭ ಪೂರ್ವ ಭಾವಿ ಸಭೆ
ಹರಪನಹಳ್ಳಿ: ತಾಲೂಕಿನಲ್ಲಿ 60ಕೆರೆಗಳ ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ , ಹರಪನಹಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಜನರು ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿರುವ ಬಗ್ಗೆ ಚರ್ಚಿಸಲು ಪೂರ್ವ ಭಾವಿ ಸಭೆ ಕರೆಯಲಾಗಿದೆ ಆದುದರಿಂದ ಸಾರ್ವಜನಿಕರು ಸಲಹೆ ಸೂಚನೆಗಳನ್ನು ನೀಡಲು ಸಭೆಯಲ್ಲಿ ಪಾಲ್ಗೋಳ್ಳಬೇಕೆಂದು ರೈತ ಸಂಘದ ಮುಖಂಡ ಕಲ್ಲಹಳ್ಳಿ ಗೋಣೆಪ್ಪ ಮನವಿ ಮಾಡಿದ್ದಾರೆ.
ಕೆರೆ ತುಂಬಿಸುವ ಯೋಜನೆ ಬಗ್ಗೆ ಹೋರಾಟ ಆರಂಭಿಸಿರುವ ರೈತ ಮುಖಂಡರಲ್ಲೋಬ್ಬರಾದ ಕಲ್ಲಹಳ್ಳಿ ಗೋಣೆಪ್ಪ ಪತ್ರಿಕೆ ಪ್ರಕಟಣೆ ಬಿಡುಗಡೆ ಮಾಡಿರುವ ಅವರು
ತಾಲೂಕಿನ ಮಹಾ ಜನತೆಯಲ್ಲಿ ವಿನಂತಿ ಮಾಡಿಕೊಂಡು ತಾಲೂಕಿನ 60 ಕೆರೆಗಳ ನೀರು ತುಂಬಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು ಇದು ಬಹಳ ಖಂಡನೀಯ ಈ ಯೋಜನೆ ತಾಲೂಕಿನ ರೈತರ ಬದುಕಿನ ಪ್ರಶ್ನೆ ಈ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟದ ರೂಪರೇಷೆಗಳನ್ನು ರೂಪಿಸಲು ತಾಲೂಕಿನ ಎಲ್ಲ ಮಠಾಧೀಶರು ಪ್ರಗತಿಪರ ಚಿಂತಕರು ಸರ್ವಪಕ್ಷ ಸದಸ್ಯರು ಬುದ್ಧಿಜೀವಿಗಳು ತಾಲೂಕಿನ ಎಲ್ಲಾ ಸಂಘಟನೆಯ ಸದಸ್ಯರು ಪತ್ರಿಕಾ ಮಾಧ್ಯಮದವರು ತಾಲೂಕಿನ ರೈತರ ಸಭೆಯನ್ನು ಜೂನ್ 5 ರ ಭಾನುವಾರ ದಂದು ಹರಪನಹಳ್ಳಿಯ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿದೆ ದಯಮಾಡಿ ಎಲ್ಲರೂ ಸಭೆಗೆ ಆಗಮಿಸಿ ಹೋರಾಟದ ರೂಪರೇಷೆಗಳ ಬಗ್ಗೆ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಬೇಕು ಹಾಗೂ ಚರ್ಚೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಾಲೂಕಿನ ಪ್ರಗತಿಪರ ಮುಖಂಡರ ವೇದಿಕೆ ಹರಪನಹಳ್ಳಿ ಯವರ ಪರವಾಗಿ ಮನವಿ ಮಾಡಿದ್ದಾರೆ.