November 6, 2024

Vijayanagara Express

Kannada News Portal

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಚಗೊಳಿಸಿದ ಪ್ರಭಾರ ಮುಖ್ಯ ಶಿಕ್ಷಕರು: ಜನಪ್ರತಿನಿಧಿಗಳು , ಅಧಿಕಾರಿಗಳಿಗೆ ಸಾರ್ವಜನಿಕರು ಧಿಕ್ಕಾರ

1 min read

 

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಚಗೊಳಿಸಿದ ಪ್ರಭಾರ ಮುಖ್ಯ ಶಿಕ್ಷಕರು: ಜನಪ್ರತಿನಿಧಿಗಳು , ಅಧಿಕಾರಿಗಳಿಗೆ ಸಾರ್ವಜನಿಕರು ಧಿಕ್ಕಾರ

 

ವಿಶೇಷ ವರದಿ ಪಟ್ನಾಮದ ವೆಂಕಟೇಶ್

ಹರಪನಹಳ್ಳಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರತಿಮ್ಮಲಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಸ್ವಚ್ಚಗೊಳಿಸಿದ ಘಟನೆ ಇತ್ತೀಚೆಗೆ ನಡೆದಿದೆ .

ಹೌದು ದೇವರ ತಿಮ್ಮಲಾಪುರದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಹಲವು ಬಾರಿ ಗ್ರಾಮಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ವಾದ್ದರಿಂದ ಪ್ರಭಾರ ಮುಖ್ಯ ಶಿಕ್ಷಕರರಾದ ಅಂಜಿನಪ್ಪ ಕೆ ಅವರೇ ಸ್ವತಃ ಶೌಚಾಲಯ ಸ್ವಚ್ಚಗೊಳಿಸಿದ ದಾರುಣ ಘಟನೆ ನಡೆದಿದೆ .
ಶಾಲೆಯಲ್ಲಿ ಒಟ್ಟು 10 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಅದರಲ್ಲಿ 8 ಜನ ಮಹಿಳಾ ಸಿಬ್ಬಂದಿ ಉಳಿದಂತೆ ಇಬ್ಬರು ಶಿಕ್ಷಕರು ಪುರುಷ ಸಿಬ್ಬಂದಿಯಾಗಿರುತ್ತಾರೆ ಇಲ್ಲಿ ಓದುತ್ತಿರುವ ಒಟ್ಟು 255 ವಿದ್ಯಾರ್ಥಿಗಳ ಪೈಕಿ 121 ಜನ ವಿದ್ಯಾರ್ಥಿಗಳು ಮತ್ತು 134 ವಿದ್ಯಾರ್ಥಿನಿಯರಿರುತ್ತಾರೆ ಇಲ್ಲಿ ಒಟ್ಟು ಎರಡು ಶೌಚಾಲಯ ಗಳು ಹೆಸರಿಗಷ್ಟೇ ಇವೆ ಅದರಲ್ಲಿ ಒಂದು ಶೌಚಾಲಯ ಬಾಲಕರ ಶೌಚಾಲಯ ಇನ್ನೊಂದು ಶೌಚಾಲಯ ಕಳೆದ ಎರಡು ವರ್ಷಗಳಿಂದ ಬ್ಲಾಕ್ ಆಗಿಹೋಗಿ ಬಳಕೆಗೆ ನಿರುಪಯುಕ್ತವಾಗಿದೆ ಇದನ್ನು ದುರಸ್ಥಿ ಪಡಿಸಿಕೊಡುವಂತೆ ಗ್ರಾಮಪಂಚಾಯಿತಿ ಅದ್ಯಕ್ಷರು , ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಕಳೆದ ಆರು ತಿಂಗಳಿಂದ ಬೇಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತದೆ ಆದುದರಿಂದ ತಾತ್ಕಾಲಿಕವಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಅಂಜಿನಪ್ಪ ವಿ ಯವರು ಸ್ವತಹ ಅವರೇ ಕೈಯಿಂದ ಶೌಚಾಲಯ ಸ್ವಚ್ಚಗೊಳಿಸುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಹರಿದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಈ ಭಾಗದ ಜನಪ್ರತಿನಿಧಿಗಳು ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ನಾಚಿಕೆಆಗಬೇಕು ಏಕೆಂದರೆ ವಿದ್ಯಾ ದೇಗುಲದಲ್ಲಿ ಪಾಠ ಹೇಳಿ ಕೊಡಬೇಕಾದ ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಉಪಯೋಗಕ್ಕಾಗಿ ಶೌಚಾಲಯ ಸ್ವಚ್ಚಗೊಳಿಸುವ ಕಾರ್ಯಕ್ಕೆ ಇಳಿಯುವಂತ ಪರಿಸ್ಥಿತಿಯನ್ನು ಮಾಡಿದ್ದಾಕ್ಕಾಗಿ ಇದನ್ನು ಯಾವ ಶಬ್ಧಗಳಿಂದ ಬೈದರೂ ಸಾಲದು ಎಂದು ಸಾರ್ವಜನಿಕರು ಹಿಡಿ ಶಾಪಹಾಕುತ್ತಿದ್ದಾರೆ ಸಂಬಂಧ ಪಟ್ಟ ಗ್ರಾಮಪಂಚಾಯಿತಿ ಅಧಿಕಾರಿಗಳು ಮಲಗಿಕೊಂಡು ನಿದ್ದೆ ಮಾಡುತ್ತಿದ್ದಾರೆ ಎಂದು ತೊರುತ್ತದೆ .


ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಯವರನ್ನು ಇದರ ಬಗ್ಗೆ ಮಾಹಿತಿ ಕೇಳಿದರೆ ಒಮ್ಮೆ ನಾನು ಹರಪನಹಳ್ಳಿ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶೌಚಾಲಯ ಸಮಸ್ಯೆ ಇದೆ ಎಂಬುದನ್ನು ಪಟ್ಟಿ ತರಿಸಿಕೊಂಡಿದ್ದೇನೆ ಹಾಗೂ ತಿಮ್ಮಾಪುರ ಶಾಲೆಯ ಮೂಲಭೂತ ಸೌಲಭ್ಯಗಳ ಕೊರತೆ ಯ ಬಗ್ಗೆ ಮಾಹಿತಿ ನನಗೆ ಇದೆ ಎಂದು ಹೇಳುತ್ತಾರೆ ಮತ್ತೊಮ್ಮೆ ಈಗಷ್ಟೇ ಸುದ್ದಿಗಾರರಿಂದ ನನಗೆ ಗೊತ್ತಾಗಿದೆ ಶೌಚಾಲಯ ಸ್ವಚ್ಚಗೊಳಿಸು ಎಂದು ನಾವೇನು ಹೇಳಿರುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ .
ಅದೇನೇ ಇರಲಿ ಶಿಕ್ಷಕರೊಬ್ಬರು ಶಾಲೆಯ ಆವರಣದಲ್ಲಿನ ಮಕ್ಕಳು ಉಪಯೋಗಿಸುವ ಶೌಚಾಲಯ ಸ್ವಚ್ಚಗೊಳಿಸುವ ದೃಶ್ಯವಂತೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದೇ ಹೇಳಬಹುದು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಯಿಂದಾಗಿ ಮುಚ್ಚುವ ಹಂತದಲ್ಲಿ ಇವೆ ಎಂದು ಸರ್ಕಾರ ಹೊಡೆದಾಡುತ್ತಿದೆ ಇಷ್ಟೂಂದು ವಿದ್ಯಾರ್ಥಿಗಳನ್ನು ಹೊಂದಿದ ಅದರಲ್ಲೂ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ ಒಂದೇ ಒಂದು ಕಿಲೋಮೀಟರ್ ಅಂತರದಲ್ಲಿರುವ ಈ ಶಾಲೆಯಲ್ಲಿ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೊರಿಸಿದರೆ ಮಕ್ಕಳು ಶಾಲೆಗೆ ಬರುತ್ತಾರೆಯೇ ಎಂದು ಆಲೋಚಿಸಬೇಕಿದೆ ಅಧಿಕಾರಿಗಳು ತಮ್ಮ ಮಕ್ಕಳನ್ನು ಪ್ರತಿಷ್ಠಿತ ವಸತಿಯುತ ಶಾಲೆಗಳಲ್ಲಿ ಒದುಸುತ್ತಾರೆ ಬಡವರ ಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆಯ ಮಕ್ಕಳಿಗೇಕೆ ಈ ತಾರತಮ್ಯ ಎಂಬುದೇ ತಿಳಿಯದಾಗಿದೆ ಶಿಕ್ಷಕರ ಕೈಯಲ್ಲಿ ಇಂತಹ ಕೆಲಸ ಮಾಡುವ ಸ್ಥಿತಿ ತಂದಿಟ್ಟ ಇಂತಹ ಲಜ್ಜೆಗೆಟ್ಟ ನಿರ್ಲಕ್ಷ್ಯ ಸೊಮಾರಿ ಅಧಿಕಾರಿಗಳಿಗೆ ನನ್ನದೊಂದು ಧಿಕ್ಕಾರವಿದೆ .


ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಾಣದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ಹಾಗೂ ಸೌಲಭ್ಯಗಳನ್ನು ನೀಡುತ್ತಿದ್ದು ಪಟ್ಟಣಕ್ಕೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದರೂ ಮೂಲಭೂತ ಸೌಲಭ್ಯಗಳಿಂದ ಈ ಶಾಲೆ ವಂಚಿತವಾಗಿದೆ ,ಈ ಶಾಲೆಯಲ್ಲಿ ಒಟ್ಟು 255 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆದರೆ ನಿರ್ಭಯವಾಗಿ ಮಕ್ಕಳು ಶಾಲೆಯಲ್ಲಿ ಕಲಿಯುವಂತ ಉತ್ತಮವಾದ ವಾತಾವರಣವಿರದೆ ಮಳೆ ಬಂದಾಗ ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಶಿಥಿಲಗೊಂಡ ಕಟ್ಟಡದಲ್ಲೇ ಪಾಠಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ .

ಹೌದು ಇಲ್ಲಿನ ಶಾಲೆಯ ಆವರಣದಲ್ಲಿ ಕಾಂಪೌಂಡ್ ಸಂಪೂರ್ಣ ಅವನತಿ ಹೊಂದಿದ್ದು , ಶಾಲೆಯ ಕೊಠಡಿಗಳ ಮೇಲ್ಛಾವಣಿಯು ಶಿಥಿಲಗೊಂಡು ಸಿಮೆಂಟ್ ಮಕ್ಕಳ ಮೇಲೆ ಉದುರುತ್ತದೆ ,ಮಳೆಯಾದರೆ ಸಾಕು ಚರಂಡಿಯ ನೀರು ಮತ್ತು ರಸ್ತೆಯ ಮೇಲಿನ ನೀರು ಶಾಲೆಯ ಆವರಣದಲ್ಲಿ ನುಗ್ಗಿ ತರಗತಿ ಕೊಠಡಿಗಳಿಗೆ ಸೇರಿಕೊಂಡು ಕೆರೆಯಂತಾಗುತ್ತದೆ ಇದರಿಂದ ಮಕ್ಕಳು ಶಾಲೆಯಲ್ಲಿ ಕಲಿಯಲು ಹಿನ್ನಡೆಯಾಗುತ್ತದೆ ಸುಮಾರು 20 ವರ್ಷ ಗಳ ಹಿಂದೆ ನಿರ್ಮಿಸಿದ ಕಟ್ಟಡವು ಕಳಪೆಯಾಗಿದೆ ಅಲ್ಲದೆ ಶಾಲೆಯ ಆವರಣದಲ್ಲಿರುವ ಕೊಠಡಿಗಳು ನೆಲಮಟ್ಟಕ್ಕೆ ಇವೆ ಇತ್ತೀಚಿನ ದಿನಗಳಲ್ಲಿ ರಸ್ತೆಯನ್ನು ಎತ್ತರವಾಗಿ ನಿರ್ಮಿಸಿರುತ್ತಾರೆ ಆದುದರಿಂದ ಮೂರು ಕಡೆಗಳಲ್ಲಿ ರಸ್ತೆ ಎತ್ತರವಿರುವುದರಿಂದ ಶಾಲೆಯ ಆವರಣ ತಗ್ಗುಪ್ರದೇಶದಂತೆ ನಿರ್ಮಾಣವಾಗಿದೆ.

 

ಶಾಲೆಗೆ ತುರ್ತಾಗಿ ಬೇಕಾಗಿರುವುದು

ಶಾಲೆಗೆ ಪ್ರತ್ಯೇಕ ಶುದ್ದಕುಡಿಯುವನೀರಿನ ವ್ಯವಸ್ಥೆಯಾಗಬೇಕು ,ಐಟೇಕ್ ಶೌಚಾಲಯ ನಿರ್ಮಾಣ, ಕ್ರೀಡಾ ಸಾಮಾಗ್ರಿಗಳು, ಕ್ರೀಡಾಂಗಣ ಸೇರಿದಂತೆ ಮೂಲಭೂತ ಸೌಲಭ್ಯಗಳು ಬೇಕಾಗಿವೆ.


255 ವಿದ್ಯಾರ್ಥಿಗಳಿಗೆ 10ಜನ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಈ ಹಿಂದೆ ಎಸ್ ಡಿಎಂಸಿ ಆಡಳಿತ ಮಂಡಳಿ ಯವರು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಶಾಲಾ ಕಟ್ಟಡ ನಿರ್ಮಾಣ ಕುರಿತಂತೆ ಮನವಿಮಾಡಿಕೊಂಡಿದ್ದೇವು ಅದರ ಪರಿಣಾಮವಾಗಿ ಕೇವಲ ಎರಡು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು ಉಳಿದಂತೆ ಇನ್ನೂ ನಾಲ್ಕು ಕೊಠಡಿಗಳ ಅವಶ್ಯಕತೆ ಇದೆ ಮತ್ತು ಶಾಲಾ ಕಾಂಪೌಂಡ್ ಹಾಗೂ ಶೌಚಾಲಯವನ್ನು ನಿರ್ಮಿಸಬೇಕು ಅವುಗಳನ್ನು ನಿರ್ಮಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು .

ಪ್ರಸನ್ನ ಪೂಜಾರ್ ಗ್ರಾಮ ಪಂಚಾಯಿತಿ ಸದಸ್ಯರು ಅಡಿವಿಹಳ್ಳಿ ಗ್ರಾಮ ಪಂಚಾಯಿತಿ ಹರಪನಹಳ್ಳಿ.

ಸರ್ಕಾರ ಅನುದಾನ ಬಿಡುಗಡೆ ಮಾಡಿ ಎತ್ತರವಾದ ಕಾಂಪೌಂಡ್ ನಿರ್ಮಿಸಿ ಶೌಚಾಲಯ ದುರಸ್ತಿಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
ರಮೇಶ್ ಜಿ ಗ್ರಾಮಪಂಚಾಯಿತಿ ಸದಸ್ಯರು ಅಡಿವಿಹಳ್ಳಿ

ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶೌಚಾಲಯ ಸಮಸ್ಯೆ ಇದೆ ಎಂಬುದನ್ನು ಪಟ್ಟಿ ತರಿಸಿಕೊಂಡಿದ್ದೇನೆ ಆದರೆ ದೇವರ ತಿಮ್ಮಾಪುರ ಗ್ರಾಮದ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವುದು ಈಗ ಸುದ್ದಿಮಾದ್ಯಮದವರಿಂದ ನಮ್ಮ ಗಮನಕ್ಕೆ ಬಂದಿದೆ ಶಾಲೆಯ ಶೌಚಾಲಯವನ್ನು ಶಿಕ್ಷಕರಿಗೆ ಸ್ವಚ್ಚಗೊಳಿಸಲು ನಾವೇನು ಹೇಳಿರುವುದಿಲ್ಲ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು .

ಯು.ಬಸವರಾಜಪ್ಪ
ಕ್ಷೇತ್ರ ಶಿಕ್ಷಣಾಧಿಕಾರಿ
ಹರಪನಹಳ್ಳಿ ವಿಜಯನಗರ ಜಿಲ್ಲೆ

Leave a Reply

Your email address will not be published. Required fields are marked *