Vijayanagara Express

Kannada News Portal

ಮುಖ್ಯ ಶಿಕ್ಷಕರಾಗಿ ಬಡ್ತಿಹೊಂದಿ ವರ್ಗಾವಣೆ ಗೊಂಡ ಚಂದ್ರಪ್ಪ ಹೆಚ್ ರವರಿಗೆ ಶಾಲಾವತಿಯಿಂದ ಸನ್ಮಾನ .

1 min read

ಮುಖ್ಯ ಶಿಕ್ಷಕರಾಗಿ ಬಡ್ತಿಹೊಂದಿ ವರ್ಗಾವಣೆ ಗೊಂಡ ಚಂದ್ರಪ್ಪ ಹೆಚ್ ರವರಿಗೆ ಶಾಲಾವತಿಯಿಂದ ಸನ್ಮಾನ .

 

ಹರಪನಹಳ್ಳಿ: ತಾಲೂಕಿನ ದ್ಯಾಪನಾಯಕನಹಳ್ಳಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಚಂದ್ರಪ್ಪರವರು ಮುಖ್ಯ ಶಿಕ್ಷಕರಾಗಿ ಬಡ್ತಿಹೊಂದಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ದ್ಯಾಪನಾಯಕನಳ್ಳಿ ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಈ ವೇಳೆ ಸರ್ಕಾರಿ ನೌಕರ ಸಂಘದ ತಾಲೂಕುಉಪಾಧ್ಯಕ್ಷ
ಎಸ್ ರಾಮಣ್ಣ ಮಾತನಾಡಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಳೆದ ಒಂಬತ್ತು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಅವಧಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು ಮತ್ತು ಈ ಅವಧಿಯಲ್ಲಿ ಅನೇಕ ವಿದ್ಯಾರ್ಥಿಗಳು ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಗಳಿಗೆ ಆಯ್ಕೆ ಆಗಿರುವುದು ಶ್ಲಾಘನೀಯ ಎಂದೇ ಹೇಳಬಹುದು.
ಅವರು ಇದೇ ರೀತಿ ಮುಂದೆ ವರ್ಗಾವಣೆ ಗೊಂಡಿರುವ ಕುರುಬಗೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮವಾದ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿ ಎಂದು ಹರಸಿ ಹಾರೈಸಿದರು .
ಇದೇ ವೇಳೆ ಶಾಲೆಯಿಂದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆ ಯಾದ ವಿದ್ಯಾ ರ್ಥಿಗಳಿಗೆ ಅಭಿನಂದಿಸಲಾಯಿತು .

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಉಚ್ಚೇಂಗೆಪ್ಪ , ಮುಖ್ಯ ಶಿಕ್ಷಕ ಎಂ ಎಂ ಪ್ರಕಾಶ್ , ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಪ್ಪ , ಗ್ರಾಮಸ್ಥರಾದ ಡಿ.ಲಕ್ಷ್ಮಣ , ಬಸವರಾಜ್ ಘಾಟಿನ, ಸುಲೇಮಾನ್ , ದೊಡ್ಡ ಮನಿ ಹೇಮಲತಾ , ಮಂಜುನಾಥ್ , ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *