Vijayanagara Express

Kannada News Portal

ಅರಸೀಕೆರೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ದರ್ಜೆಗೇರಿಸುತ್ತೇನೆ -ಎಸ್. ವಿ.ರಾಮಚಂದ್ರಪ್ಪ

1 min read

 

ಅರಸೀಕೆರೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ದರ್ಜೆಗೇರಿಸುತ್ತೇನೆ -ಎಸ್. ವಿ.ರಾಮಚಂದ್ರಪ್ಪ

 

 

 

 

ಹರಪನಹಳ್ಳಿ: ಮೇ -2 ,ಅರಸೀಕೆರೆ ಗ್ರಾಮ ಪಂಚಾಯಿತಿಯನ್ನುಪಟ್ಟಣ ಪಂಚಾಯಿತಿ ದರ್ಜೆಗೇರಿಸುತ್ತೇನೆ ಎಂದು ಜಗಳೂರು ಶಾಸಕ ಎಸ್. ವಿ.ರಾಮಚಂದ್ರಪ್ಪ ಹೇಳಿದರು.

ಅರಸೀಕೆರೆ ಹೋಬಳೀಯ ವಿವಿಧ ಗ್ರಾಮದಲ್ಲಿ ರೋಡ್ ಶೋ ನೆಡೆಸಿ ಅರಸೀಕೆರೆ ಗ್ರಾಮದಲ್ಲಿ ಮಾತನಾಡಿದ ಅವರುಬರದ ನಾಡಿನಲ್ಲಿ ತುಂಗಭದ್ರಾ ನದಿಯ ನೀರನ್ನು ಕ್ಷೇತದಲ್ಲಿ ಹರಿಸಿ ಹಸಿರು ನಾಡಿನ್ನಾಗಿಸುತ್ತೇನೆ. ಅರಸೀಕೆರೆ ಗ್ರಾಮದಲ್ಲಿ ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಪಂಚಾಯಿತಿಯನ್ನು ಉನ್ನತೀಕರಿಸಿ ಪಟ್ಟಣ ಪಂಚಾಯಿತಿಯನ್ನಾಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಸಂಸದ ವೈ.ದೇವೇಂದ್ರಪ್ಪ ಅವರ ಪುತ್ರ ವೈ.ಡಿ ಅಣ್ಣಪ್ಪ ಮಾತನಾಡಿ, ‘ ಕಳೆದ ಅನೇಕ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಮಾಡುವಲ್ಲಿ ಶಾಸಕ ಎಸ್.ವಿ ರಾಮಚಂದ್ರಪ್ಪ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಚಿಂತನೆಯುಳ್ಳ ಅಂತಹ ವ್ಯಕ್ತಿಯನ್ನು ಮರು ಆಯ್ಕೆ ಮಾಡುವಂತೆ ಮನವಿ ಮಾಡಿದರು.

 

ಮುಖಂಡ ಪ್ರಶಾಂತ್ ಪಾಟೀಲ ಮಾತನಾಡಿ, ‘ 57 ಕೆರೆ ನೀರು ತುಂಬಿಸುವ ಯೋಜನೆ, ಸಿಸಿರಸ್ತೆ, ರಸ್ತೆ, ಶಾಲಾ ಕೊಠಡಿ, ಆಸ್ಪತ್ರೆ ಅಭಿವೃದ್ಧಿ, ಬಸ್ ನಿಲ್ದಾಣ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸಿದ್ದಾರೆ.
ಅವರನ್ನು ಗೆಲ್ಲಿಸಿ ಮುಂದಿನ ದಿನಗಳಲ್ಲಿ ಮಂತ್ರಿಯನ್ನಾಗಿ ಮಾಡುವ ಸಂಕಲ್ಪ ಮಾಡೋಣ’ ಎಂದರಲ್ಲದೆ ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ಕಂಡುಕೊಂಡು ಯಾರ ಮೇಲೆಯೂ ದ್ವೇಷದ ರಾಜಕಾರಣ ಮಾಡದೆ, ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸದೆ ಎಲ್ಲರೂ ಶಾಂತಿಯುತವಾಗಿ ಸಹಬಾಳ್ವೆಯಿಂದ ಬದುಕುವಂತ ವಾತಾವರಣವನ್ನು ನಿರ್ಮಾಣ ಮಾಡಿರುವ ಶ್ರೀರಾಮಚಂದ್ರಪ್ಪನವರನ್ನು ಮತ್ತೊಮ್ಮೆ ನಾವು ಗೆಲ್ಲಿಸಲೇಬೇಕು , 2018 ರಿಂದ ಇಲ್ಲಿಯವರೆಗೆ ಕ್ಷೇತ್ರಕ್ಕೆ ಸುಮಾರು 3500 ಕೋಟಿ ರೂಪಾಯಿಗಳ ಅನುದಾನವನ್ನು ತಂದು ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಲ್ಲದೆ ರಾಜ್ಯದಲ್ಲಿಯೇ ಒಂದು ಮಾದರಿ ತಾಲೂಕನ್ನಾಗಿ ನಿರ್ಮಿಸಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು .

ಇದಕ್ಕೂ ಮೊದಲು ಬ್ಲಾಕ್ ನ ಕುರೆಮಾಗನಹಳ್ಳಿ, ಉಚ್ಚಂಗಿದುರ್ಗ, ಅರಸೀಕೆರೆ ಗ್ರಾಮಗಳಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಮತಯಾಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬರದ ನಾಡದ ಜಗಳೂರು ತಾಲೂಕನ್ನು ಹಸಿರು ನೆಲವನ್ನಾಗಿ ಮಾಡುವ ಗುರಿ ನನ್ನದಾಗಿದೆ ತುಂಗಾಭದ್ರಾ ನೀರು ನನ್ನ ನೆಲದಲ್ಲಿ ಹರಿದು ಹಸಿರಾಗಬೇಕು ಎಂದರು , ಸುದ್ದಿಗಾರರು ಸ್ಥಳೀಯವಾಗಿ ಯಾವೆಲ್ಲ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಮತವನ್ನು ಯಾಚನೆ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನನ್ನು ಇನ್ನೊಂದು ಬಾರಿ ಗೆಲ್ಲಿಸಿದ್ದೆ ಆದಲ್ಲಿ ಉತ್ತಮವಾದ ರಸ್ತೆಗಳು ನೀರಾವರಿ ವ್ಯವಸ್ಥೆ ಇಂಜಿನಿಯರಿಂಗ್ ಕಾಲೇಜು, ಉಚ್ಚಂಗಿದುರ್ಗದಲ್ಲಿ ಮತ್ತು ತಾಲೂಕಿನ ಇನ್ನೂ ಅನೇಕ ಕಡೆಗಳಲ್ಲಿ ಕಾಮಗಾರಿಗಳು ಅರ್ಧ ಆಗಿವೆ ಅವುಗಳೆಲ್ಲವನ್ನು ಪೂರ್ಣಗೊಳಿಸಲು ಮತ್ತು ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಮತ್ತೊಮ್ಮೆ ನನ್ನನ್ನು ಗೆಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು. ಕ್ಷೇತ್ರದ ತುಂಬೆಲ್ಲ ಹೋದ ಕಡೆಯಲ್ಲೆಲ್ಲ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ ನಾವು ಸಾಕಷ್ಟು ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಹಾಗೂ ಭಾರತ ಜನತಾ ಪಾರ್ಟಿ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಗಳೂರು ತಾಲೂಕಿನ ಚುನಾವಣಾ ಉಸ್ತುವಾರಿ ಅರುಂಡಿ ನಾಗರಾಜ್, ವಿಶ್ವನಾಥಯ್ಯ, ಚಟ್ನಿಹಳ್ಳಿ ರಾಜಪ್ಪ, ಪರಶುರಾಮ, ಕೆ.ಆನಂದಪ್ಪ, ಪಾಟೀಲ್ ಕೆಂಚನಗೌಡ, ಫಣಿಯಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚಪ್ಪ, ಹನುಮಂತಪ್ಪ, ಹಾಲೇಶ್, ಸಿದ್ದಪ್ಪ, ಅಣ್ಣಪ್ಪ, ಭರಮಪ್ಪ, ಶಿವಯೋಗಿ, ತೌಡೂರು , ಮಂಜುನಾಥಯ್ಯ, ರೇಖಾ ಕೊಟ್ರೇಶ್ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *