ಕರ್ನಾಟಕ ರೈತ ಮಿತ್ರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಸೇವಾ ಸಂಘದ ಪದಾಧಿಕಾರಿಗಳು ಬಿಜೆಪಿಗೆ ಬೆಂಬಲ
1 min readಕರ್ನಾಟಕ ರೈತ ಮಿತ್ರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಸೇವಾ ಸಂಘದ ಪದಾಧಿಕಾರಿಗಳು ಬಿಜೆಪಿಗೆ ಬೆಂಬಲ
ಹರಪನಹಳ್ಳಿ :ಮೇ – 2 ,ಕರ್ನಾಟಕ ರೈತ ಮಿತ್ರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಸೇವಾ ಸಂಘದ ಪದಾಧಿಕಾರಿಗಳು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿಯವರ ನೇತೃತ್ವದಲ್ಲಿ ಬಿಜೆಪಿಗೆ ಬೆಂಬಲವನ್ನು ಸೂಚಿಸಿದರು .
ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಶಾಸಕರ ರೆಡ್ಡಿ ಅವರ ನಿವಾಸ ಹಾಗೂ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಕರ್ನಾಟಕ ರೈತ ಮಿತ್ರ ಸಂಘದ ರಾಜ್ಯಾಧ್ಯಕ್ಷರಾದ ಎಚ್ ವೆಂಕಟೇಶ್ ಹಾಗೂ ಅವರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಮಿಕ ಸಂಘದ ಪದಾಧಿಕಾರಿಗಳು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದರು.
ಈ ವೇಳೆ ಮಾತನಾಡಿದ ರೈತ ಮಿತ್ರ ಸಂಘದ ರಾಜ್ಯ ಅಧ್ಯಕ್ಷ ಎಚ್ ವೆಂಕಟೇಶ್ ಅವರು ಕಟ್ಟಡ ಕಾರ್ಮಿಕರ ಸಂಘಗಳನ್ನು ಒಳಗೊಂಡು ಮಹಿಳಾ ಸಹಕಾರ ಸಂಘಗಳು 30 ಕ್ಕೂ ಹೆಚ್ಚು ಗ್ರಾಮ ಸಮಿತಿಗಳನ್ನು ಹೊಂದಿದ್ದು ಈ ಎಲ್ಲಾ ಸಂಘಗಳಿಂದ ಬೆಂಬಲವನ್ನು ಬಿಜೆಪಿಗೆ ಸೂಚಿಸುತಿದ್ದೇವೆ ಎಂದು ಹೇಳಿದರು .
ಹರಪನಹಳ್ಳಿ ತಾಲೂಕಿನಾದ್ಯಂತ ಶಾಸಕ ಕರುಣಾಕರ ರೆಡ್ಡಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಬಗರ್ ಹುಕುಂ ಸಾಗುವಳಿ, ಗರ್ಭಗುಡಿಯ ಬ್ರಿಡ್ಜ್ ಕಮ್ ಬ್ಯಾರೇಜ್ ,57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ,ನಿರಂತರ ಜ್ಯೋತಿ, ಜಲಜೀವನ್ ಮಿಷನ್ , ರೈತರ ಖಾತೆಗೆ 10 ಸಾವಿರ ರೂಪಾಯಿಗಳು ಹಾಕುವುದು ಸೇರಿದಂತೆ ಮುಂತಾದ ಅನೇಕ ಅಭಿವೃದ್ಧಿ ಕೆಲಸಗಳನ್ನು ತಾಲೂಕಿನಲ್ಲಿ ಮಾಡಿದ್ದಾರೆ ಹಾಗಾಗಿ ನಾವು ಬಿಜೆಪಿಗೆ ಈ ಬಾರಿ ಬೆಂಬಲವನ್ನು ಸೂಚಿಸಲು ಎಲ್ಲಾ ಸಂಘದ ಪ್ರಾಧಿಕಾರಗಳು ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕರುಣಾಕರ ರೆಡ್ಡಿಯವರು 2013 ರಿಂದಲೂ ಕಾರ್ಮಿಕರ ವಿವಿಧ ಸಂಘಟನೆಗಳು ನಮಗೆ ಬೆಂಬಲವನ್ನು ನೀಡುತ್ತಾ ಬಂದಿವೆ ಮುಂದಿನ ದಿನಗಳಲ್ಲಿ ನಾನು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಿ ಬಂದರೆ ಅವರ ಸಂಘದ ಕ್ಷೇಮಾಭಿವೃದ್ಧಿಗೆ ನಾನು ಬದ್ಧನಾಗಿರುತ್ತೇನೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅವರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೋವಿ ಲಕ್ಷ್ಮಣ್, ಕೋಡಿಹಳ್ಳಿ ಶೇಖರಪ್ಪ ಪಕೀರಪ್ಪ ಲೋಕೇಶ್ ಜೋಶಿಲಿಂಗಪುರ ಬಿಜೆಪಿ ಕಾರ್ಯಕರ್ತರಾದ ಕೆಂಗಳ್ಳಿ ಪ್ರಕಾಶ್ ಆರ್ ಲೋಕೇಶ್ ಬಾಗಳಿಕೊಟ್ರೆಶಪ್ಪ ಮಹೇಶ್ ಪ್ರಾಣೇಶ್ ವಕೀಲ ಮುತ್ತಿಗಿ ರೇವಣಸಿದ್ದಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.