ಹರಪನಹಳ್ಳಿ ತಾಲೂಕಿನ ಕರವೇ ತಾಲೂಕು ಅಧ್ಯಕ್ಷರಾಗಿ ಗಿರಜ್ಜಿ ನಾಗರಾಜ್ ಆಯ್ಕೆ
1 min readಹರಪನಹಳ್ಳಿ ತಾಲೂಕಿನ ಕರವೇ ತಾಲೂಕು ಅಧ್ಯಕ್ಷರಾಗಿ ಗಿರಜ್ಜಿ ನಾಗರಾಜ್ ಆಯ್ಕೆ
ಹೊಸಪೇಟೆ : ಜೂ – 25 ,ಯ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಜಯನಗರ ಜಿಲ್ಲೆಯ ಕರವೇ ಘಟಕದ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ತಾರಿಹಳ್ಳಿ ಅವರ ನೇತೃತ್ವದಲ್ಲಿ ಹರಪನಹಳ್ಳಿ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಅಧ್ಯಕ್ಷರಾಗಿ ನಾಗರಾಜ್ ಗಿರಜ್ಜಿ ಅವರನ್ನು ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ತಾಲೂಕು ಘಟಕದ ಅಧ್ಯಕ್ಷರು ಮತ್ತು ಹರಪನಹಳ್ಳಿ ತಾಲೂಕು ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡುವ ಮೂಲಕ ಆದೇಶ ಪತ್ರವನ್ನು ಇಂದಿನಿಂದಲೇ ಕಾರ್ಯಪ್ರವೃತ್ತರಾಗಲು ಸೂಚನೆ ನೀಡುತ್ತಾ ಶುಭ ಹಾರೈಸಿದರು.
ಈ ಸ್ಥಾನಕ್ಕೆ ನಿಕಟ ಪೂರ್ವ ಅಧ್ಯಕ್ಷರಾದ ಬಸವರಾಜ ಹುಲಿಯಪ್ಪನವರ ವೈಯಕ್ತಿಕ ಕಾರಣ ಹಾಗೂ ಉನ್ನತ ವ್ಯಾಸಂಗದ ನಿಮಿತ್ತ ಸಕ್ರಿಯವಾಗಿ ಕರವೇ ಸಂಘಟನೆಯಲ್ಲಿ ಭಾಗವಹಿಸಲು ಆಗದೆ ಇರುವ ಕಾರಣಕ್ಕೆ ಅವರ ರಾಜೀನಾಮೆಯನ್ನು ಅಂಗೀಕರಿಸಿವ ಮೂಲಕ ನಾಗರಾಜ್ ಅವರನ್ನೂ ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಘಟಕದ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಶ್ರೀ ಜಾಫರ್ ಸಾಬ್, ಜಿಲ್ಲಾ ಸಂಚಾರಕರಾದ ನಂದೀಶ್ ಆಚಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಮ್ಮ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಸುವರ್ಣಮ್ಮ ಜೊತೆಗೆ ವಿವಿಧ ತಾಲೂಕುಗಳ ಅಧ್ಯಕ್ಷ ಮತ್ತು ಗ್ರಾಮ ಘಟಕದ ಅಧ್ಯಕ್ಷರು ಹರಪನಹಳ್ಳಿ ತಾಲೂಕು ಘಟಕದ ಗೌರವ ಅಧ್ಯಕ್ಷರಾದ ರಾಜು ಹೆಚ್ ಎಂ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಅಭಿವ್ಯಕ್ತಿ, ನಗರ ಘಟಕದ ಅಧ್ಯಕ್ಷರಾದ ವೆಂಕಟೇಶ್, ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಶಿವಕುಮಾರ್ ಬಾಗಳಿ, ಚರಕ ಘಟಕದ ಅಧ್ಯಕ್ಷರಾದ ಶ್ರೀ ಗೋಪಿ, ಸಹ ಕಾರ್ಯದರ್ಶಿಯಾದ ಶಶಿಧರ್, ದಾದಾಪುರ ಗ್ರಾಮ ಘಟಕದ ಅಧ್ಯಕ್ಷರಾದ ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.