Vijayanagara Express

Kannada News Portal

ಈ ಬಾರಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳುಪ್ರಮುಖಪಾತ್ರ ವಹಿಸಬೇಕು – ಜಬ್ಬಾರ್ ಸಾಬ್ 

1 min read

ಈ ಬಾರಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳುಪ್ರಮುಖಪಾತ್ರ ವಹಿಸಬೇಕು – ಜಬ್ಬಾರ್ ಸಾಬ್

ಹರಪನಹಳ್ಳಿ: ಮೇ -4 ,ಈ ಬಾರಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಜಬ್ಬರ ಸಾಬ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್ ಕೊಟ್ರೇಶ್ ರವರ ಜನ ಸಂಪರ್ಕ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಬರಬೇಕು ಜನರು ಬೆಲೆ ಏರಿಕೆ ಯಿಂದಾಗಿ ತತ್ತರಿಸಿ ಹೋಗಿದ್ದಾರೆ ಬಿಜೆಪಿ ಸರ್ಕಾರದ ಅಚ್ಚೆ ದಿನ್ ಎನ್ನುವುದು ಯಾವಾಗ ಬರುತ್ತಿದೆ ಎಂದು ಜನರು ಕಾಯುತ್ತಿದ್ದಾರೆ ಇದು ಕೇವಲ ಮಾತಿನಲ್ಲಷ್ಟೇ ಎಂದು ಹೇಳಿದರು .

ಕಾಂಗ್ರೆಸ್ ಸರ್ಕಾರ 70 ವರ್ಷಗಳಿಂದ ಏನನ್ನೂ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಸರ್ಕಾರವು ದೇಶದಲ್ಲಿರುವ ಅಣೆಕಟ್ಟುಗಳನ್ನು ಏರ್ಪೋರ್ಟ್ ಗಳನ್ನು ರಸ್ತೆಗಳನ್ನು ಹಾಗಾದರೆ ಯಾರು ಆರಂಭದಲ್ಲಿ ಮಾಡಿದ್ದು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಮಾಡಿದ ಸಾಧನೆಗಳು ಏನೆಂದರೆ, ನೋಟ್ ಬಂದ್ ಮಾಡಿದ್ದು ಕಡಿಮೆ ದರದಲ್ಲಿ ಸಿಗುತ್ತಿದ್ದ ಅಡಿಗೆ ಅನಿಲ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಸಿದ್ದು ತಿಂಡಿ ತಿನಿಸುಗಳ ಮೇಲೆ ಜಿಎಸ್‌ಟಿಯನ್ನು ಏರಿದ್ದು ಇವುಗಳೆಲ್ಲವೂ ಈ ಸರ್ಕಾರ ಮಾಡಿದ ದೊಡ್ಡ ಸಾಧನೆಗಳಾಗಿವೆ ಎಂದರು.
ಪಂಜಾಬಿನಲ್ಲಿ ದೆಹಲಿಯಲ್ಲಿ ನಡೆದ ರೈತರ ಚಳುವಳಿಯಲ್ಲಿ 700 ರಿಂದ 800 ರೈತರು ಸತ್ತರು ಸರ್ಕಾರ ಇದರ ಬಗ್ಗೆ ಕಿಂಚಿತ್ತು ತಿರಿಗಿಯೂ ನೋಡಲಿಲ್ಲ ಉತ್ತರಪ್ರದೇಶದಲ್ಲಿ ಕರೋನಾದ ಸಂದರ್ಭದಲ್ಲಿ ಹೆಣಗಳು ಸಂಸ್ಕಾರ ಮಾಡದೆ ಗಂಗಾ ನದಿಯಲ್ಲಿ ತಲುತ್ತಿದ್ದವು ಆಗ ಬಿಜೆಪಿ ಸರ್ಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

ಕರೋನದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಏಳು ಕೆ.ಜಿ ಅಕ್ಕಿಯು ಇಲ್ಲದಿದ್ದರೆ ಜನರ ಬದುಕು ಕಷ್ಟವಾಗುತ್ತಿತ್ತು ಸಿದ್ದರಾಮಯ್ಯನವರು ಐದು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾದ ಆಡಳಿತವನ್ನು ಜನತೆಗೆ ನೀಡಿದ್ದಾರೆ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಶಾದಿ ಮಹಲ್ ಗಳನ್ನು ಕಟ್ಟಿಸಿರುವುದು ಎಲ್ಲರಿಗೂ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಲಾಗಿದೆ , 1947 ರಿಂದ ಇಲ್ಲಿಯವರೆಗೆ ನೂರಾರು ಕೈಗಾರಿಕೆಗಳನ್ನು ಕಾಂಗ್ರೆಸ್ ಸರ್ಕಾರ ತೆರೆದು ಸರ್ಕಾ ಉದ್ಯೋಗಗಳನ್ನು ನೀಡಿತ್ತು .

ಸರ್ಕಾರಿ ಸ್ವಾಮ್ಯದ ಎಲ್ಲಾ ಉದ್ಯಮಗಳನ್ನು ಬಿಜೆಪಿ ಸರ್ಕಾರ ಖಾಸಗೀಕರಣ ಗೊಳಿಸಿದೆ ಬಿಜೆಪಿ ಸರ್ಕಾರವು ದೇಶದಲ್ಲಿ ಹಿಂದುಗಳು ಮುಸ್ಲಿಮರು ಕ್ರೈಸ್ತರು ಬೌದ್ಧರು ಜೈನರು ಎಂದು ಒಬ್ಬರಿಗೊಬ್ಬರಿಗೆ ಜಗಳವನ್ನು ಬಿಟ್ಟಿದೆ ಅಲ್ಲದೆ ಹಲಾಲ್ ಕಟ್ ,ಇಜಾಬ್, ನಿಕಾಲ್ ಮುಂತಾದ ವಿವಾದಗಳನ್ನು ಸೃಷ್ಟಿ ಮಾಡಿದೆ ಇವುಗಳೆಲ್ಲವೂ ಬಿಜೆಪಿ ಸರ್ಕಾರದ ಕೊಡುಗೆಗಳಾಗಿವೆ ಹಾಗಾಗಿ ಈ ಬಾರಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡಬೇಕು ಎಂದು ಹೇಳಿದರು.

ಈ ವೇಳೆ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಎಚ್ ಕೆ ಹಾಲೇಶ್, ನಜೀರ್ ಸಾಬ್, ಮೂಸಸಾಬ್ ,ಕಡಕೋಳ ನೂರುದ್ದೀನ್, ಎನ್ ಮಜೀದ್ ,ಶಶಿಧರ್ ಪೂಜಾರ್, ಸೋಗಿ ಇಬ್ರಾಹಿಂ, ನಜೀರ್ ಸಾಬ್ ,ಇಬ್ರಾಹಿಂ, ಜಾಕಿರ್ ಸರ್ಕವಾಸ್, ಜಿಷನ್, ಎಮ್ ಕೆ ಸಿದ್ದೀಕ್, ದಾವಣಗೆರೆ ಸಿರಾಜ್, ಮಜಿದ್ ಸಾಬ್, ಶಮಿಉಲ್ಲಾ, ಹುಲಿಕಟ್ಟಿ ಭಾಷಾ ,ಕುಲುಮಿ ಅಬ್ದುಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *