Vijayanagara Express

Kannada News Portal

ಮಹಾಭಾರತದಲ್ಲಿ ನನಗೆ ಶಕುನಿ ವ್ಯಕ್ತಿತ್ವವೆಂದರೆ ತುಂಬಾ ಇಷ್ಟ – ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್

1 min read

ಮಹಾಭಾರತದಲ್ಲಿ ನನಗೆ ಶಕುನಿ ವ್ಯಕ್ತಿತ್ವವೆಂದರೆ ತುಂಬಾ ಇಷ್ಟ – ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ: ಸೆ – 24 ,ಮಹಾಭಾರತದಲ್ಲಿ ಬರುವ ಶಕುನಿಯ ವ್ಯಕ್ತಿತ್ವವೆಂದರೆ ನನಗೆ ತುಂಬಾ ಇಷ್ಟ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ರವರು ಹೇಳಿದರು.

ಪಟ್ಟಣದ ನಟರಾಜ್ ಕಲಾಭವನದಲ್ಲಿ ಯಾದವ ಸಮಾಜದ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾಭಾರತದಲ್ಲಿ ಬರುವ ಶ್ರೀಕೃಷ್ಣನ ವ್ಯಕ್ತಿತ್ವ ಬಹಳ ಮಹತ್ವವಾದದು ಕೃಷ್ಣನ ಬಾಲಲೀಲೆಗಳು ಎಲ್ಲರಿಗೂ ಇಷ್ಟ , ಶ್ರೀ ಕೃಷ್ಣನು ಶಕುನಿಯು ರೂಪಿಸುವ ತಂತ್ರಗಳಿಗೆ ಪ್ರತಿ ತಂತ್ರಗಳನ್ನು ರೂಪಿಸಿ ಪಾಂಡವರಿಗೆ ಜಯವಾಗುವಂತೆ ಮಾಡಿದ್ದು ಲೋಕ ಮೆಚ್ಚುವಂತದ್ದು ತಂತ್ರಗಾರಿಕೆಯನ್ನು ರೂಪಿಸುವಲ್ಲಿ ಶಕುನಿ ಪಾತ್ರ ಬಹು ದೊಡ್ಡದು ಹಾಗಾಗಿ ಶಕುನಿಯ ವ್ಯಕ್ತಿತ್ವ ಎಂದರೆ ನನಗೆ ತುಂಬಾ ಇಷ್ಟವಾದ ವ್ಯಕ್ತಿತ್ವ ಎಂದು ಹೇಳಿದರು .

ದೇವನೊಬ್ಬ ನಾಮಹಲವು ಎಂಬಂತೆ ಒಂದೊಂದು ಭಾಗದಲ್ಲಿ ಒಂದೊಂದು ಧರ್ಮದಲ್ಲಿ ಭಿನ್ನವಾದ ಆಚರಣೆಗಳು ಇರುತ್ತವೆ ಎಂದು ಹೇಳಿದರು.

ತಾಲೂಕು ಯಾದವ ಸಮುದಾಯಕ್ಕೆ ಸಮುದಾಯ ಭವನ ಹಾಗೂ ವಸತಿ ರಹಿತರಿಗೆ ವಸತಿ ಕಟ್ಟಿಸಿಕೊಳ್ಳಲು ಎರಡು ಎಕರೆ ಜಮೀನನ್ನು ನೀಡುವಂತೆ ಹಾಗೂ ವಿದ್ಯಾರ್ಥಿ ನಿಲಯಗಳನ್ನು ಪ್ರತ್ಯೇಕವಾಗಿ ಸಮುದಾಯಕ್ಕೆ ನೀಡುವಂತೆ ಭಿನ್ನವತ್ತಳೆಯನ್ನು ಮಾಡಿಕೊಂಡರು ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲತಾ ಅವರು ಈ ಹಿಂದೆ ನನ್ನ ಸಹೋದರ ಎಂಪಿ ರವೀಂದ್ರರವರು ಶಾಸಕರಾಗಿದ್ದಾಗ ಸಮುದಾಯಕ್ಕೆ ಎರಡು ಎಕ್ಕರೆ ಭೂಮಿಯನ್ನು ಕಾಯ್ದಿರಿಸಿದ್ದರು ನಂತರ ಬಂದ ಶಾಸಕರ ಅವಧಿಯಲ್ಲಿ ಅದು ಏನಾಗಿದೆಯೋ ಗೊತ್ತಿಲ್ಲ ಅದರ ಬಗ್ಗೆ ನಾನು ಮಾಹಿತಿಯನ್ನು ಪಡೆಯುತ್ತೇನೆ ನಂತರ ಯಾದವ ಸಮಾಜಕ್ಕೆ ನೂರಕ್ಕೆ ಸಾವಿರ ಪಟ್ಟು ನಾನು ಕೆಲಸ ಮಾಡೇ ಮಾಡಿಕೊಡುತ್ತೇನೆ ಎಂದು ಭರವಸೆಯನ್ನು ನೀಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ ನಮ್ಮ ಸಮಾಜದ ಪ್ರತಿಯೊಬ್ಬರು ಒಳ್ಳೆಯ ಕೆಲಸಗಳನ್ನು ಮಾಡಬೇಕು ಆ ದಿಕ್ಕಿನಲ್ಲಿ ಸಮಾಜದ ಯುವಕರು ಮುನ್ನಡೆಯಬೇಕು ಆಗ ಮಾತ್ರ ಆರ್ಥಿಕವಾಗಿ ಸಾಮಾಜಿಕವಾಗಿ ನಾವು ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾಜದ ಮುಖಂಡ ಗಗನ್ ಯಾದವ್ ಮಾತನಾಡಿ ಸ್ಥಳೀಯ ಶಾಸಕರಾದ ಎಂಪಿ ಲತಾ ಮಲ್ಲಿಕಾರ್ಜುನ್ ರವರು ಸಮಾಜದ ಯುವಕರಿಗೆ ರಾಜಕಾರಣದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು ಮುಂಬರಲಿರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸಮುದಾಯದ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿಕೊಂಡರು ಹಾಗೂ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಿ ಎಲ್ಲಾ ಯುವಕರು ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕೆಂದು ತಿಳಿಸಿದರು.

ಈ ವೇಳೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು .

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್ ಬಾಬು,ಮುಖಂಡರಾದ ಜಿ ಮೂಡ್ಲಪ್ಪ, ಶ್ರೀಕಾಂತ್,ಕೆ ಬಸವರಾಜ್, ದೇವರತಿಮ್ಮಲಾಪುರದ ಸಣ್ಣಿಂಗಪ್ಪ, ನಿಲಯ ಪಾಲಕ ಎನ್ ಜಿ ಬಸವರಾಜ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *