November 6, 2024

Vijayanagara Express

Kannada News Portal

ದೇಶದಲ್ಲಿ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ ಎಂ. ಪಿ. ಲತಾ ಮಲ್ಲಿಕಾರ್ಜುನ

1 min read

ದೇಶದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್ ಪಕ್ಷ: ಎಂ.ಪಿ.ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ: ದೇಶದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ನೀವೆಲ್ಲಾ ಜನಪ್ರತಿನಿಧಿಗಳಾಗಿರುವುದು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಹರಪನಹಳ್ಳಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಗುರುವಾರ ಕೆಪಿಸಿಸಿ ಪರಿಕಲ್ಪನೆಯ ‘ನಾ ನಾಯಕಿ’ ಮಹಿಳಾ ಜನಪ್ರತಿನಿಧಿಗಳ ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ, ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ, ಸಹಕಾರ ಸಂಘಗಳÀ ನಿರ್ದೇಶಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಸ್ತಿನ ಸಂಘ ಎಂದು ಬೋಗಳೆ ಬಿಡುವ ಆರ್‌ಎಸ್‌ಎಸ್ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎನ್ನುವ ಮನೋಭಾವನೆ ಹೊಂದಿರುವ ಸಂಘಟನೆಯಾಗಿದೆ. ಅದರ ಮುಖವಾಣಿಯೇ ಬಿಜೆಪಿ ಪಕ್ಷವಾಗಿದ್ದು, ಬಿಜೆಪಿ ಮಹಿಳಾ ವಿರೋಧಿ ಪಕ್ಷವಾಗಿದೆ. ಕಾಂಗ್ರೆಸ್ ಮಾತ್ರ ದೇಶಕ್ಕೆ ಮಹಿಳಾ ರಾಷ್ಟ್ರಪತಿ, ಮಹಿಳಾ ಸಭಾಪತಿ, ಮಹಿಳಾ ಪ್ರಧಾನಿ ಮಂತ್ರಿ ನೀಡಿದ ಏಕೈಕ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.
ಇಂದು ಮಹಿಳೆಯರಲ್ಲಿ ಪ್ರಭುದ್ದತೆಯಿದೆ. ಪುರಷರಿಗಿಂತ ವಿಭಿನ್ನವಾಗಿ, ಸೃಜಶೀಲವಾಗಿ ಚಿಂತನೆ ಮಾಡುತ್ತಾರೆ. ತೊಟ್ಟಿಲು ತೂಗುವ ಕೈ ದೇಶವನ್ನೆ ಅಳಬಲ್ಲದು ಎಂಬುವುದನ್ನು ಶ್ರೀಮತಿ ಇಂದಿರಾಗಾಂಧಿ ಅವರು ತೋರಿಸಿ ಕೊಟ್ಟಿದ್ದಾರೆ. ಮಹಿಳೆಯರಲ್ಲಿ ಮಾನವೀಯ ಹೃದಯವಿದೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.50ರಷ್ಟು ಇರುವ ನಾವು ಹಿಂಜರಿಕೆ ಬಿಟ್ಟು ಸ್ವತಂತ್ರವಾಗಿ ಕಾರ್ಯ ನಿರ್ವಸುವ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸೋಣ ಎಂದರು. ಭೆಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ದಿವಾಕರ್, ಕಾರ್ಯಾಧ್ಯಕ್ಷೆ ಜಯಲಕ್ಷ್ಮಿ , ಕಂಚೀಕೆರಿ ಗ್ರಾ.ಪಂ ಅಧ್ಯಕ್ಷೆ ಹನುಮಂತಮ್ಮ, ಕಡಬಗೆರೆ ಗ್ರಾ.ಪಂ ಅಧ್ಯಕ್ಷೆ ಅನುಷಾ ಮಂಜುನಾಥ, ನಂದೀಬೇವೂರು ಗ್ರಾ.ಪಂ ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷೆ ಲಕ್ಷಿö್ಮ ಚಂದ್ರಶೇಖರ್, ಮತ್ತಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್, ಉಪಾಧ್ಯಕ್ಷೆ ತಿಮ್ಮಕ್ಕ, ಸಾಸ್ವಿಹಳ್ಳಿ ಗ್ರಾ.ಪಂ ಸದಸ್ಯೆ ಹಾಲಮ್ಮ ಶಂಕರಗೌಡ, ಎಪಿಸಿಎಂಸಿ ನಿರ್ದೇಶಕರಾದ ನಳಿನಾ ರಾಮನಗೌಡ, ಹಳ್ಳಿಕೇರಿ ಗ್ರಾ.ಪಂ ಸದಸ್ಯೆ ವಿದ್ಯಾಶ್ರೀ ಮಾತನಾಡಿದರು.
ಸಭೆಯಲ್ಲಿ ಜನ ನಾಯಕಿಯರಾದ ಕವಿತಾ ಸುರೇಶ್, ನೇತ್ರಾವತಿ, ಹಾಲಮ್ಮ, ವನಜಾಕ್ಷಿ, ರತ್ನಮ್ಮ, ರೇಣುಕಮ್ಮ, ಅಧಿಕಾರ ಸುಮಕ್ಕ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *