Vijayanagara Express

Kannada News Portal

ಅರ್ಜಿಗಳನ್ನು ಹಾಕಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿನಿಲಯ ನೀಡಬೇಕು ಎಂದು ಅಗ್ರಹಿಸಿ ತಹಸೀಲ್ದಾರ್ ರರಿಗೆ ಮನವಿ

1 min read

ಅರ್ಜಿ ಹಾಕಿದ ಎಲ್ಲಾ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ನೀಡುವಂತೆ ಆಗ್ರಹಿಸಿ ,ತಹಸೀಲ್ದಾರ್ ರಿಗೆ ಮನವಿ.

ಹರಪನಹಳ್ಳಿ : ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯವನ್ನು ಬಯಸಿ ಅರ್ಜಿಗಳನ್ನು ಹಾಕಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ಹಾಸ್ಟೆಲ್ ಸಿಗುವಂತಾಗಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ರರಿಗೆ ಮನವಿಯನ್ನು ನೀಡಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಲಕ್ಷ್ಮಣ್ ಹರಪನಹಳ್ಳಿ ತಾಲೂಕು ನಂಜುಂಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ತಾಲ್ಲೂಕುಗಳಲ್ಲಿ ಇದು ಒಂದಾಗಿದ್ದು, ಇಲ್ಲಿ ನಿತ್ಯ ಸಾವಿರಾರು ವಿಧ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.ಇದರಲ್ಲಿ ಬಹುತೇಕರು ಬಡವರು,ಹಿಂದುಳಿದವರು,ರೈತರು,ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿದ್ದಾರೆ,ಇಂತಹ ಮಕ್ಕಳಿಗೆ ಸರಕಾರ ಹಾಸ್ಟೇಲ್‌ಗಳನ್ನು ಸ್ಥಾಪಿಸಿದ್ದರೂ ಸರಕಾರಿ ಹಾಸ್ಟೇಲ್‌ಗಳ ಪರಿಸ್ಥಿತಿ ಶೋಚನೀಯವಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷ ಣದ ಗುಣಮಟ್ಟ ಹಾಗೂ ಪ್ರೋತ್ಸಾಹದ ಬಗ್ಗೆ ನಂಬಿಕೆ ಇಲ್ಲವಾಗಿದೆ.
ನಗರದ ಕೆಲವು ಸರಕಾರಿ ಹಾಸ್ಟೆಲ್‌ಗಳು ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿವೆ.ಕೆಲವು ವಿದ್ಯಾರ್ಥಿನಿಲಯಗಳು ಹಂದಿಗಳು ವಾಸಿಸುವ ಗೂಡಾಗಿವೆ. ಗುಣಮಟ್ಟದ ಆಹಾರ ದೊರೆಯದೆ ಸ್ವಚ್ಛತೆ ಮಾಯವಾಗಿದೆ. ಇದಲ್ಲದೇ ಉತ್ತಮ ಸೌಲಭ್ಯಗಳು ಇಲ್ಲಿ ಮರೀಚಿಕೆಯಾಗಿವೆ .
ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ (SFI) ತಾಲೂಕು ಸಮಿತಿ ಹರಪಹಳ್ಳಿ ಹಾಸ್ಟೆಲ್ ಅರ್ಜಿ ಹಾಕಿದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಡ್ಡಾಯ ವಾಗಿ ಹಾಸ್ಟೆಲ್ ಕೊಡಬೇಕು. ಎಸ್ ಎಸ್ ಎಚ್ ಜೈನ್ ಕಾಲೇಜ್ ಬೋಧನಾ ಶುಲ್ಕವನ್ನು ಕಾಲೇಜ್ ಖಾತೆಗೆ ಹಾಕಿ ವಿದ್ಯಾರ್ಥಿಗಳಿಂದ ಹಣ ತೆಗೆದುಕೊಳ್ಳುವ ನೀತಿಯನ್ನು ನಿಲ್ಲಿಸಬೇಕು ಎಂದರು.

ಮತ್ತೊಬ್ಬ ವಿದ್ಯಾರ್ಥಿಮುಖಂಡ ವೆಂಕಟೇಶ್ ಮಾತನಾಡಿ ಸಾಮಾನ್ಯ ಜನರು ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ ಈ ಸಮಯದಲ್ಲಿ ತಮ್ಮ ಮಕ್ಕಳನ್ನು
ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಹಾಗಾಗಿ ಹಾಸ್ಟೆಲ್ ಅವಶ್ಯಕತೆ ತುಂಬಾ ಇರುತ್ತೆ. ಆ ಕಾರಣದಿಂದ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಾಸ್ಟೆಲ್ ಕೊಡಬೇಕು. ವಸತಿ ಗಾಗಿ ಹೊರಗಡೆ ರೂಮ್ ಮಾಡಿರುವಂತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ವಸತಿ ಕಲ್ಪಿಸಿ ಕೊಡಬೇಕು ಇಲ್ಲ ವಾದಲ್ಲಿ ರೂಮ್ ಭತ್ಯೆ ಓದಗಿಸಿ ಕೊಡಬೇಕು ಹಾಗೂ ಎಸ್ ಎಸ್ ಎಚ್ ಜೈನ್ ಕಾಲೇಜಿನಲ್ಲಿ ಭೋದನ ಶುಲ್ಕವೆಂದು ಅಂಕಪಟ್ಟಿ ಕೇಳುವ ಸಮಯದಲ್ಲಿ 1700ರೂ ರಿಂದ 2000ರೂ ದವರೆಗೆ ಭೋದನ ಶುಲ್ಕವೆಂದು ವಿದ್ಯಾರ್ಥಿಗಳ ಹತ್ತಿರ ಹಣ ಕೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ಕೂಡಲೇ ಯಾವ ಯಾವ ವಿದ್ಯಾರ್ಥಿ ಗಳ ಹತ್ತಿರ ಹಣ ತಗೆದುಕೊಂಡಿರುತ್ತಾರೆ
ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಹಾಗಾಗಿ ಹಾಸ್ಟೆಲ್ ಅವಶ್ಯಕತೆ ತುಂಬಾ ಇರುತ್ತೆ. ಆ ಕಾರಣದಿಂದ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಆ ಹಣ ವಾಪಾಸ್ ಕೊಡಬೇಕು ಹಾಗೂ ಇನ್ನು ಮುಂದೆ ಯಾವ ವಿದ್ಯಾರ್ಥಿಗಳ ಹತ್ತಿರ ಹಣ ತೆಗೆದು ಕೊಳ್ಳಬಾರದು ತೆಗೆದುಕೊಂಡಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಎಸ್ ಎಸ್ ಎಚ್ ಜೈನ್ ಕಾಲೇಜ್ ವಿರುದ್ದು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ಅಗ್ರಹಿಸಿತು.
ಬಹುತೇಕ ಹಾಸ್ಟೆಲ್‌ಗಳಲ್ಲಿ ಕಾಯಂ ನಿಲಯಪಾಲಕರಿಲ್ಲ. ಒಬ್ಬೊಬ್ಬರು ಎರಡ್ಮೂರು ಹಾಸ್ಟೆಲ್‌ಗಳ ವಾರ್ಡನ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಒತ್ತಡದಲ್ಲಿ ಹಾಸ್ಟೆಲ್‌ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ಆಗುತ್ತಿಲ್ಲ. ಒತ್ತಡದಲ್ಲೂ ನಿಲಯ ಪಾಲಕರು ಗಮನ ಹರಿಸಲಿಕ್ಕಾಗದೇ; ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿಲ್ಲ .
ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳ ಕುರಿತು ಚಿಂತನೆ ನಡೆಸಬೇಕಾದ ರಾಜ್ಯ ಸರಕಾರ ರಾಜಕೀಯದಲ್ಲಿ ಮುಳುಗಿ ಶಿಕ್ಷ ಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ರಾಜ್ಯದ ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಹಾಸ್ಟೇಲ್‌ಗಳ ಪರಿಸ್ಥಿತಿ ಶೋಚನಿಯವಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.. ಆದ್ದರಿಂದ ಸರಕಾರ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು .

ಈ ಸಂದರ್ಭದಲ್ಲಿ SFI ತಾಲೂಕು ಅಧ್ಯಕ್ಷರು ಲಕ್ಷ್ಮಣ್ ರಾಮಾವತ್ SFI ತಾಲೂಕು ಕಾರ್ಯದರ್ಶಿ ವೆಂಕಟೇಶ್ SFI ತಾಲೂಕು ಮುಖಂಡರು ಪ್ರಸನ್ನ. ಕುಮಾರ್ ಲ್. ಲಕ್ಯ ನಾಯ್ಕ್.ಕರಿಬಸವರಾಜ.ಸಚಿನ್ ನಾಯ್ಕ್ ಶೆಂಕರ್ ನಾಯ್ಕ್. ರವಿ ಕುಮಾರ್. ಮಂಜು ರಂಗಾಪುರ ಸಂತೋಷ್ ಕುಮಾರ್. ದರ್ಶನ್ ರಮೇಶ್ ಎಂ. ವಿ. ಕುಮಾರ. ರಮೇಶ ಜಿ. ಶಶಾಂಕ್. ಲೋಕೇಶ್ ಎಂ. ಚಂದ್ರಕಾಂತ್ ಎಂ. ಡಿ. ಚೇತನ್ ಅಶೋಕ ಇನ್ನು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *