Vijayanagara Express

Kannada News Portal

ಕರುಣಾಕರ ರೆಡ್ಡಿ ಹಠಾವೋ ಹರಪನಹಳ್ಳಿ ಬಚಾವೋ -ಇದ್ಲಿ ರಾಮಪ್ಪ ಪ್ರಗತಿಪರ ಮುಖಂಡರು..

1 min read

  • ·’ ಕರುಣಾಕರರೆಡ್ಡಿ ಹಠವೋ ಹರಪನಹಳ್ಳಿ ಬಚಾವೋ ಆಂದೋಲ ಪ್ರಾರಂಭ

ಶಾಸಕ ರೆಡ್ಡಿ ಕಮಿಷನ್ ಆಸೆಗೆ, ಜನಪ್ರಿಯ ಯೋಜನೆಗಳು ನೆನೆಗುದಿಗೆ.
ಹರಪನಹಳ್ಳಿ: ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿ ಅವರ ಆಡಳಿತದಲ್ಲಿ ತಾಲೂಕಿನ ಪ್ರಮುಖ ಯೋಜನೆಗಳು ಪರಿಪೂರ್ಣವಾಗದೇ ನೆನೆಗುದಿಗೆ ಬಿದ್ದಿವೆ. ಶಾಸಕರು ಕಮಿಷನ್ ತೆಗೆದುಕೊಂಡು ಕೆಲಸಗಳನ್ನು ಮಾಡುತ್ತಿರುವುದರಿಂದ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ ಎಂದು ಸಿಪಿಐ(ಎಂಎಲ್) ಲಿಬರೇಷನ್ ಪಕ್ಷದ ಕಾರ್ಯದರ್ಶಿ, ಪ್ರಗತಿಪರ ಸಂಘಟನೆಗಳ ಮುಖಂಡ ಇದ್ಲಿ ರಾಮಪ್ಪ ಆರೋಪಿಸಿದ್ದಾರೆ.
ಹರಪನಹಳ್ಳಿ ಪಟ್ಟಣದ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಕರುಣಾಕರರೆಡ್ಡಿ ತೊಲಗಿಸಿ, ಹರಪನಹಳ್ಳಿ ಉಳಿಸಿ’ (ಕರುಣಾಕರ ರೆಡ್ಡಿ ಹಠವೋ ಹರಪನಹಳ್ಳಿ ಬಚಾವೋ )ಅಭಿಯಾನ ಪ್ರಾರಂಭಿಸಿದ್ದು, ತಾಲೂಕಿನಲ್ಲಿ ಭ್ರಷ್ಟಚಾರ ತುಂಬಿ ತುಳುತ್ತಿದ್ದು, ರೈತರ, ಕಾರ್ಮಿಕರ ಪರವಾದ ಯಾವುದೇ ಯೋಜನೆಗಳು ಅನುಷ್ಟಾನಗೊಳ್ಳುತ್ತಿಲ್ಲ. ಶಾಸಕರು ಹರಪನಹಳ್ಳಿಯಲ್ಲಿ ಆಡಳಿತ ನಡೆಸಲು ನಾಲಾಯಕ್ ಎಂದು ಅವರು ವಾಗ್ದಾಳಿ ನಡೆಸಿದರು.
‘ಶಾಸಕ ಕರುಣಾಕರರೆಡ್ಡಿ ತೊಲಗಿಸಿ, ಹರಪನಹಳ್ಳಿ ಉಳಿಸಿ’ ಅಭಿಯಾನ ಆರಂಭಿಸಿದ್ದು, ಹಂತ ಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು. ಗರ್ಭಗುಡಿ ಗ್ರಾಮದವರೆಗೆ ಬೈಕ್ ರ್‍ಯಾಲಿ, ಶಾಸಕರ ನಿವಾಸದ ಮೂಂದೆ ಪ್ರತಿಭಟನೆ ನಡೆಸಲು ತೀರ್ಮನಿಸಿದ್ದೇವೆ. ಇವತ್ತಿಗೆ 8 ದಿನದಂದು ಗೋಸಾಯಿ ಗುಡ್ಡದಲ್ಲಿ ಪ್ರಗತಿಪರ ಸಂಘಟನೆಗಳ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ನಡೆಯಿತು. ತಾಲೂಕಿನಲ್ಲಿ ನೆನಗುದಿಗೆ ಬಿದ್ದಿರುವ 60 ಕೆರೆಗಳಿಗೆ ನೀರು ತುಂಬಿಸುವ, ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಯೋಜನೆಯ ಬಗ್ಗೆ ಜನಾಂದೋಲನ ರೂಪಿಸುವ ಬಗ್ಗೆ ಚರ್ಚಿಸಲಾಯಿತು.
ತಾಲೂಕಿನ ಸರ್ಕಾರಿ ಕಚೇರಿಯಲ್ಲಿ ಲಂಚ ಹಾವಳಿ ಮೀತಿಮೀರಿದ್ದು, ರೈತರ ಕೆಲಸ ಮಾಡಿಕೊಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಹಾಗೂ ವಿಜಯನಗರ ಜಿಲ್ಲೆ ಎಸ್ಪಿ ಅವರು ಅಕ್ರಮ ಮದ್ಯ ಮಾರಾಟ ಹಾಗೂ ಇಸ್ಪೇಟ್ ದಂಧೆ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೂ ಸಹ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಪೊಲೀಸರ ವಿರುದ್ದ ಬಹಿರಂಗ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಸಿದರು.
ಕಾರ್ಮಿಕ ಇಲಾಖೆಯ ಸವಲತ್ತುಗಳು ನಿಜವಾದ ಕಾರ್ಮಿಕರಿಗೆ ಸಿಗದಿರುವ ಬಗ್ಗೆ, ಬಗರ್ ಹುಕ್ಕುಂ ಪಟ್ಟಾ ಅರ್ಹ ಫಲಾನುಭವಿಗಳಿಗೆ ವಿತರಿಸಲು ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಇವುಗಳ ಬಗ್ಗೆ ಹೋರಾಟ ರೂಪಿಸಲು ಚರ್ಚಿಸಲಾಯಿತು.
ಸಭೆಗೆ ಇನ್ನೂ ಕೆಲವು ಸಂಘಟನೆಗಳ ನಾಯಕರು ಭಾಗವಹಿಸದಿರುವ ಹಿನ್ನಲೆಯಲ್ಲಿ ಮುಂದಿನ ವಾರದಲ್ಲಿ ಇನ್ನೊಂದು ಸಭೆ ಕರೆದು ಹೋರಾಟದ ದಿನಾಂಕ ನಿಗದಿಪಡಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಇದ್ಲಿ ರಾಮಪ್ಪ, ಹುಲಿಕಟ್ಟಿ ರಾಜಪ್ಪ, ಮೈಲಪ್ಪ, ಸಂದೇರ ಪರುಶುರಾಮ, ಬಾಲಗಾಂಗಧರಪ್ಪ, ರೇವಣಸಿದ್ದಪ್ಪ, ಜೋಗಿನ ನಾಗರಾಜ್, ಶಿಕಾರಿ ಶ್ರೇಯಸ್, ಗುಳೇದಹಟ್ಟಿ ಸಂತೋಷ್, ಮಂಜುನಾಥ ಪೂಜಾರ್, ಭರಮಪ್ಪ ಮುಂತಾದವರು ಭಾಗವಹಿಸಿದ್ದರು.•∼

Leave a Reply

Your email address will not be published. Required fields are marked *