ರಾಜ್ಯದ 15ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ -ಗಾಲಿ ಕರುಣಾಕರರೆಡ್ಡಿ ವಿಶ್ವಾಸ.
1 min readರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ -ಗಾಲಿ ಕರುಣಾಕರರೆಡ್ಡಿ ವಿಶ್ವಾಸ.
ಹರಪನಹಳ್ಳಿ :ತಾಲ್ಲೂಕಿನ ಎಲ್ಲಾ ಕಡೆಯಲ್ಲಿಯೂ ಬಿಜೆಪಿಗೆ ಉತ್ತಮ ಬೆಂಬಲ ದೊರೆಯಲಿದೆ. ನಾನು ಪ್ರತಿಯೊಂದು ಪಂಚಾಯತಿ ಗೆ ಪ್ರವಾಸ ಮಾಡಿದ್ದೇನೆ, ಅಲ್ಲದೇ ಜಿಲ್ಲೆಯ ಬೇರೆ ತಾಲೂಕಿನ ಮಾಹಿತಿ ಕೊಡ ಪಡೆದುಕೊಂಡಿದ್ದು, ಹೆಚ್ಚಿನ ರೀತಿಯಲ್ಲಿ ಬಿಜೆಪಿಗೆ ಬೆಂಬಲ ಕೊಡುವ ಸೂಚನೆ ಸಿಗುತ್ತಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಹರಪನಹಳ್ಳಿ ಪಟ್ಟಣದ ಪುರಸಭೆ ಮತದಾನ ಕೇಂದ್ರದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿದ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಮತ್ತು ತಮ್ಮ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸಕರು ನೀವೇ 14 ನೇ ತಾರೀಖು ನೋಡುತ್ತಿರಲ್ಲ ಎಂದು ಪ್ರಯಿಕ್ರಿಯೆ ನೀಡಿದರು.
ಯಾವ ಭರವಸೆ ಇಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಗಳು ಗೆಲ್ಲುತ್ತಾರೆ ಎಂದು ಹೇಳುತ್ತೀರಿ ಎನ್ನುವ ಸುದ್ಧಿಗಾರರ ಪ್ರಶ್ನೆಗೆ,ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ,ಲಕ್ಷಾಂತರ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ವಿವಿ ಸಂಘಕ್ಕೆ ಸ್ಥಳ ದಾನ ಮಾಡಿದ್ದಾರೆ. ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿರುವುದರಿಂದ ಅವರನ್ನು ಜನರು ಪ್ರೀತಿಸುತ್ತಿದ್ದು, ಅವರನ್ನು ಗೆಲ್ಲಿಸಬೇಕು ಎಂದು ತೀರ್ಮಾನಿಸಿದ್ದಾರೆ. ಹೀಗಾಗಿ ಸತೀಶ ಗೆಲುವು ಖಚಿತ ಎಂದರು.
ರಾಜ್ಯದಲ್ಲಿ 15 ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಪಡೆಯಲಿದೆ ಎಂದು ಕರುಣಾಕರರೆಡ್ಡಿ ಈ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಇಜಂತಕರ್ ಮಂಜುನಾಥ್,ರಾಘವೇಂದ್ರ ಶೆಟ್ಟಿ,ಮಲ್ಲೇಶ್.ಮಾಚಿಹಳ್ಳಿ, ಕೊಟ್ರಯ್ಯ, ಮಹೇಶ್, ಮುಂತಾದವರು ಹಾಜರಿದ್ದರು .