Vijayanagara Express

Kannada News Portal

ಸಿರಿಧಾನ್ಯಗಳ ಬಳಕೆಯಿಂದ ಅರೋಗ್ಯ ವೃದ್ಧಿ -ವಿಮಲ್ ಜೈನ್

1 min read

ಸಿರಿ ಧಾನ್ಯಗಳ ಬಳಕೆಯಿಂದ ಅರೋಗ್ಯ ವೃದ್ಧಿ -ವಿಮಲ್ ಜೈನ್

ಹರಪನಹಳ್ಳಿ : ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯವೃದ್ಧಿಯಾಗುತ್ತದೆ ಎಂದು ಜೀನಿ ಪೌಷ್ಟಿಕ ಆಹಾರದ ಪೌಡರ್ ಹರಪನಹಳ್ಳಿ ವಿತರಕ ವಿಮಾಲ್ ಜೈನ್ ಹೇಳಿದರು.
ಜೀನಿ ಪೌಷ್ಟಿಕ ಆಹಾರದ ಉಪಯೋಗದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಪಟ್ಟಣದ ಪ್ರವಾಸಿಮಂದಿರ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಹಿಂದೆ ನಮ್ಮ ಪೂರ್ವಜರು ಬಹಳ ಗಟ್ಟಿಮುಟ್ಟಾಗಿದ್ದರು, ಅವರು ದೀರ್ಘ ಕಾಲ ಬದುಕುತ್ತಿದ್ದರು ಇದಕ್ಕೆ ಕಾರಣ ಅವರು ತಿನ್ನುತ್ತಿದ್ದ ಆಹಾರದಲ್ಲಿ ದೇಹದ ಸಮತೋಲನ ಕಾಪಾಡುವಂತಹ ಪೋಷಕoಶಗಳು ಇರುತ್ತಿದ್ದವು ಅನಾದಿಕಾಲದಿಂದಲೂ ಅವರು ಬಳಸುತ್ತಿದ್ದ ಆಹಾರಗಳೆಂದರೆ ನವಣೆ, ಬಾರ್ಲಿ, ಸಜ್ಜೆ, ಗೋದಿ, ಇತರ ದ್ವಿದಳ ಧಾನ್ಯಗಳಾಗಿವೆ . ಇವುಗಳನ್ನೇ ನಮ್ಮ ಜೀನಿ ಉತ್ಪಾದಕರು ಈ ಎಲ್ಲಾ ಧಾನ್ಯಗಳನ್ನು ಸೇರಿಸಿ ಜೀನಿ ಎಂಬ ಪೌಡರ್ ಉತ್ಪಾದನೆ ಯನ್ನು ತಯಾರು ಮಾಡಿದ್ದಾರೆ ಆದುದರಿಂದ ಇವುಗಳ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಪುರಸಭೆ ಮಾಜಿ ಉಪಾಧ್ಯಕ್ಷ ಸತ್ಯನಾರಾಯಣ್, ಪುರಸಭೆ ಸದಸ್ಯರಾದ ಕಿರಣ್ ಶಾನಬೋಗ್,ವಿನಯ್,ಹನುಮಂತ,ದೇವರಾಜ್.ಹೆಚ್,ಜೀನಿ ಕುಟುಂಬದವರಾದ ಅನಿಲ್,ಸುರೇಶ್, ಸಹ ವಿತರಕರಾದ ಕೊಟ್ಟೂರು ವಿಭಾಗದ ಕೊಟ್ರೇಶ್,ಕೂಡ್ಲಿಗಿ ಯ ನವೀನ್,ಸಂಡೂರು ಮಲ್ಲಿಕಾರ್ಜುನ,ಹಗರಿಬೊಮ್ಮನಹಳ್ಳಿ ಯ ಮಂಜುನಾಥ್,ಹಡಗಲಿಯ ಪ್ರದೀಪ್, ದಾವಣಗೆರೆ ಯ ನಾಗರಾಜ್,ಬಳ್ಳಾರಿಯ ಚಂದ್ರಶೇಖರ,ನಾರಾಯಣ, ಮುಂತಾದವರು ಹಾಜರಿದ್ದರು .

Leave a Reply

Your email address will not be published. Required fields are marked *