Vijayanagara Express

Kannada News Portal

ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿ ಶಾಸಕ ಕರುಣಾಕರರೆಡ್ಡಿ -ಗುಡಿಹಳ್ಳಿ ಹಾಲೇಶ್ ಆರೋಪ . ಫೇಸ್ ಬುಕ್ ಚೆರ್ಚೆಗೆ ಕಾರಣವಾದ ಅಂಬೇಡ್ಕರ್ ಭಾವಚಿತ್ರ.

1 min read

ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ,ಶಾಸಕ ಕರುಣಾಕರರೆಡ್ಡಿ -ಗುಡಿಹಳ್ಳಿ ಹಾಲೇಶ್ ಆರೋಪ . ಫೇಸ್ ಬುಕ್ ಚೆರ್ಚೆಗೆ ಕಾರಣವಾದ ಅಂಬೇಡ್ಕರ್ ಭಾವಚಿತ್ರ.

ಹರಪನಹಳ್ಳಿ: ತಾಲ್ಲೂಕಿನ ಸಿಪಿಐ ಸಂಘಟನೆಯ ತಾಲೂಕು ಕಾರ್ಯದರ್ಶಿಯಾದ ಗುಡಿಹಳ್ಳಿ ಹಾಲೇಶ್ ರವರು ಕಳೆದ 20 ವರ್ಷ ಗಳಿಂದ ತಾಲ್ಲೂಕಿನ ರೈತರ ಪರ,ಜನಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಇದ್ದದ್ದನ್ನು ಇದ್ದಹಾಗೆ ಕಡ್ಡಿ ಮುರಿದಂತೆ ಹೇಳುವವರಾಗಿದ್ದಾರೆ , ಇವರಷ್ಟೇ ಅಲ್ಲದೆ ಹರಪನಹಳ್ಳಿಯ ಅನೇಕ ಹೋರಾಟಗಾರರು ಅಧಿಕಾರ,ದೌರ್ಜನ್ಯ ಇಂತಹವುಗಳಿಗೆ ಎಂದೂ ಹೆದರಿದವರಲ್ಲ ಅಧಿಕಾರ ಇದ್ದವರೇಇರಲಿ,ಅಧಿಕಾರ ವಿರೋಧಿಗಳೇ ಹಾಗಿರಲಿ ತಪ್ಪು ಮಾಡಿದರೆ ಅದನ್ನು ಖಡಾ ಖಂಡಿತವಾಗಿ ಖಂಡಿಸುವ ಮನೋಭಾವನೆ ತಾಲ್ಲೂಕಿನ ಹೋರಾಟಗಾರರದ್ದಾಗಿದೆ ಅದರಲ್ಲಿ ಗುಡಿಹಳ್ಳಿ ಹಾಲೇಶ್ ಕೂಡ ಒಬ್ಬರು.

ಹರಪನಹಳ್ಳಿ ಯ ಹಾಲಿ ಶಾಸಕರಾದ ಗಾಲಿ ಕರುಣಾಕರರೆಡ್ಡಿ ಇವರ ಕಚೇರಿಗೆ ಗುಡಿಹಳ್ಳಿ ಹಾಲೇಶ್ ರವರ ಊರಾದ   ಕೆರೆಗುಡಿಹಳ್ಳಿ ಗ್ರಾಮದ ಕೆಲಸಕ್ಕಾಗಿ ಹಿರಿಯರ ಜೊತೆಗೆ ಶಾಸಕರ ಕಚೇರಿಗೆ ಹೋಗಿದ್ದು, ಅಲ್ಲಿ ಅಂಬೇಡ್ಕರ್ ಫೋಟೋ ಇಲ್ಲದ್ದನ್ನು  ನೋಡಿ ಶಾಸಕರ ಕಚೇರಿಯಲ್ಲಿ ಸ್ವತಂತ್ರ ಹೋರಾಟಗಾರರೂ , ಸಂವಿಧಾನ ಬರೆದುಕೊಟ್ಟ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲದಿರುವುದು ದುರಂತ,ಸಂವಿಧಾನದಿಂದ ನಮಗೆ ಸೌಲಭ್ಯಗಳು ಬೇಕು ಆದರೆ  ಅವರ ಭಾವಚಿತ್ರ ಮಾತ್ರ ಬೇಡ, ಬಿಜೆಪಿ ಶಾಸಕರ ಕಚೇರಿಯಲ್ಲಿ  ಅಂಬೇಡ್ಕರ್ ಫೋಟೋಗಳು ಇಲ್ಲ ಶಾಸಕರ ಕಚೇರಿಯಲ್ಲಿಅಂಬೇಡ್ಕರ್ ಭಾವಚಿತ್ರ ಹಾಕುವವರೆಗೂ ಒತ್ತಾಯ ಮಾಡಲೇಬೇಕು ಗುಡಿಹಳ್ಳಿ ಹಾಲೇಶ್ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಹಾಕಿಕೊಂಡಿದ್ದಾರೆ .

ಇದಕ್ಕೆ ಸಾರ್ವಜನಿಕರು ಪ್ರತಿಕ್ರಿಯೆಯನ್ನು ಫೇಸ್ ಬುಕ್ ಜಾಲತಾಣದಲ್ಲಿ ಚೆರ್ಚೆಯಮೂಲಕ ಆರಂಭಿಸಿದ್ದಾರೆ ಮಹಾಂತೇಶ್ಎನ್ನುವವರು ಇವರ  ಬರಹಕ್ಕೆ ಪ್ರತಿಕ್ರಿಯಿಸಿ
ಇದಕ್ಕೆ ಧಿಕ್ಕಾರವಿರಲಿ, ಸಾಧ್ಯವಾದರೆ ಒಂದು ದಿನ ಇವರ ಕಾರ್ಯಾಲಯದ ಮುಂದೆ ಸಾಂಕೇತಿಕ ಧರಣಿ ಮಾಡಬೇಕು,ಎಂದು ಪ್ರತಿಕ್ರಿಯಿಸಿದರೆ ಹರಿದಾಸ್ ನಾಯ್ಕ ಎನ್ನುವವರು ರಾಜಕೀಯ ನಾಯಕರೇ ಈ ರೀತಿಯಾದರೆ ಸಾಮಾನ್ಯರ ಪಾಡೇನು? ಎಂದು ಪ್ರಶ್ನೆ ಎತ್ತಿ ಆದಷ್ಟು ಬೇಗ ಫೋಟೋ ಇರಿಸಲು ಒತ್ತಾಯಿಸಿ ಜೈಭೀಮ್ ಎಂದು ಬರೆದುಕೊಂಡಿದ್ದಾರೆ.
ಇನ್ನೂ ನಿರಂಜನ್ ಪಾಟೀಲ್ ಎಂಬುವವರು ಈ ಬಿಜೆಪಿ ನಾಯಕರೇ ಇಷ್ಟು ಬಿಡಿ ಅವರಿಗೆ ಅಂಬೇಡ್ಕರ್,ಗಾಂಧೀಜಿ,ಅವರೆಲ್ಲ ಬೇಡ… ಏನಿದ್ದರು ಸಾವರ್ಕರ್   ಅಂತಹವರು ಬೇಕು ಎಂದು ಹೀಗೆ ಚಾಟಿ ಬೀಸಿದರೆ,
ಸುರೇಶ್. ಗಿಡ್ಡವ್ವರ, ಎಂಬ ವ್ಯಕ್ತಿ ನಿಜವಾಗ್ಲೂ ಇದು ನಮ್ಮ ದಲಿತ ಬಿಜೆಪಿ ಕಾರ್ಯಕರ್ತರು ಅರ್ಥ ಮಾಡ್ಕೋಬೇಕು ದಯವಿಟ್ಟು ಹೊರಬನ್ನಿ ಜೈಭೀಮ್ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮತ್ತೊಬ್ಬ ಫೇಸ್ ಬುಕ್ ಖಾತೆದಾರ ಮಲ್ಲಪ್ಪ ಎನ್ನುವ ಇವರು, ಇವರು ಸಾವರ್ಕರ್ ವಂಶಸ್ಥರು ಎನ್ನುವ ಅರ್ಥದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ಕರುಣಾಕರರೆಡ್ಡಿ ಇವರಿಗೆ ಅಂಬೇಡ್ಕರ್ ಫೋಟೋ ಹಾಕಿದರೆ ಮುಂದಿನ ಬಾರಿ ಎಂಎಲ್ಎ ಟಿಕೆಟ್ ಕೊಡುವುದಿಲ್ಲ ಎಂದು ಆರೆಸ್ಸೆಸ್ ನಾಯಕರು ಹೇಳಿದ್ದಾರೆ ಹಾಗಾಗಿ ಫೋಟೋ ಹಾಕಿಲ್ಲ ಜೈ ಭೀಮ್ ಎಂದು ಗೊಣ್ಣೆಪ್ಪ.ರಂಗಪುರ ಇವರು ತೀವ್ರ ವಿರೋಧ ಹೊರಹಾಕಿದ್ದಾರೆ.
ಮಂಜುನಾಥ್.ಹೆಚ್.ಕೆ ಎಂಬುವವರು ಏನೂ ಅಭಿವೃದ್ಧಿ ಕಾಣದ ಹರಪನಹಳ್ಳಿ ಪಟ್ಟಣ ನೋಡಿ?ಹರಪನಹಳ್ಳಿ ಪಟ್ಟಣದ ಮುಖ್ಯರಸ್ತೆಯಲ್ಲಿ ಸರಿಯಾದ ಪುಟ್ ಪಾತ್ ಇಲ್ಲ  ಅಭಿವೃದ್ಧಿ ಕಾಣದ ಹರಪನಹಳ್ಳಿ ಪಟ್ಟಣ,ಇನ್ನೂ ಶಾಸಕರ ಕೊಠಡಿಯಲ್ಲಿ ಫೋಟೋದ ಬಗ್ಗೆ ಏನು?ಇವರ ಮುಂದೆ ವಿರೋಧ ಪಕ್ಷದವರು ನೆಲಕಚ್ಚಿದ್ದಾರೆ ಎನ್ನುವ ಅರ್ಥದಲ್ಲಿ ಶಾಸಕ ಕರುಣಾಕರ ರೆಡ್ಡಿಯ ಜೊತೆಗೆ ವಿರೋಧ ಪಕ್ಷದವರನ್ನೂ ಕುಟುಕಿದ್ದಾರೆ.
ಮುಂದುವರೆದು ಗುಡಿಹಳ್ಳಿ ಹಾಲೇಶ್ ರವರ ಬರಹಕ್ಕೆ ಪ್ರತಿಕ್ರಿಯೆ ನೀಡಿ ಪ್ರಕಾಶ್ ಸುಂಕದ ಎನ್ನುವವರು ಹಾಲೇಶ್ ಗುಡಿಹಳ್ಳಿ ಅವರೇ, ಫೋಟೋ ಏನು ನಾಳೆ ನೀವು ಬರುವುದರೊಳೊಗೆ ಅಲ್ಲಿ ಅಂಬೇಡ್ಕರ್ ಫೋಟೋ ಇರುತ್ತೆ ಆದ್ರೆ ಅವರ ಸಿದ್ಧಾಂತ ಗಳನ್ನ ರೂಢಿಸಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಆಗ ಅದಕ್ಕೊಂದು ಅರ್ಥ, ಆದ್ರೆ ನಮ್ ಗಣಿ ಧಣಿಗಳು ಕ್ಷೇತ್ರದ ಜನತೆಯ ಕಷ್ಟಗಳಿಗೆ ಹಾಗೂ ಕ್ಷೇತ್ರದ ಅಭಿೃದ್ಧಿಗೆ ಗಮನ ಕೊಡುತ್ತಿಲ್ಲೆಂದ ಮೇಲೆ ಇನ್ನೆಲ್ಲಿ ನೀವೇ ಯೋಚನೆಮಾಡಿ ಎಂದು ನೀರಸ ಪ್ರತಿಕ್ರಿಯೆ ತಿಳಿಸಿದ್ದಾರೆ.
ಇವೆಲ್ಲಾ ಸಾಮಾಜಿಕ ಜಾಲತಾಣ ಬಳಕೆದಾರರ ಅಭಿಪ್ರಾಯಗಳಾಗಿವೆ ಅವುಗಳೇನೇ ಇರಲಿ ಇವುಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಶಾಸಕರು ಇದಕ್ಕೂ , ಸಂವಿಧಾನಕ್ಕೂ ,ನಮಗೂ, ಜನ ಚೆರ್ಚೆ ಮಾಡುತ್ತಿರುವುದಕ್ಕೂ, ಯಾವುದೇ ಸಂಬಂಧವಿಲ್ಲದ ಹಾಗೆ ಬಳ್ಳಾರಿಯ ತಮ್ಮ ನಿವಾಸದಲ್ಲಿ ನೆಮ್ಮದಿಯಾಗಿದ್ದಾರೆ ಬಿಡಿ .
ಅಂಬೇಡ್ಕರ್ ಸಂವಿಧಾನವನ್ನೇ ಬರೆಯದೆ ಹೋಗಿದ್ದಿದ್ದರೆ, ಸಾರ್ವತ್ರಿಕ ಚುನಾವಣೆ, ಸಾರ್ವತ್ರಿಕ ಮತದಾನ ಪದ್ಧತಿ ಜಾರಿಗೆ ತರದೇ ಹೋಗಿದ್ದಿದ್ದರೆ ನಾವು ಮತ ಎಲ್ಲಿ ಹಾಕುತ್ತಿದ್ದೀವಿ ?ಅವರು ಶಾಸಕರು ಎಲ್ಲಿ ಆಗುತ್ತಿದ್ದರು ಅನ್ನೋದು ಜನಸಾಮಾನ್ಯರಿಗೆ ನೆಟ್ಟಿಗರಿಗೆ ಅರ್ಥ ಆಗುತ್ತೆ ಪಾಪ ನಮ್ಮ ಶಾಸಕರು ಗಣಿ ಧಣಿಗಳು ಆದ ಅವರಿಗೆ ಅರ್ಥ ಆಗ್ಬೇಕಲ್ಲ ಅದೇನೇ ಇರಲಿ ಅವರ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಹಾಕಿಕೊಳ್ಳದೇ  ಇರುವುದು ಅದು ಅಂಬೇಡ್ಕರ್ ಗೆ ಮತ್ತು ಸಂವಿಧಾನಕ್ಕೆ ಶಾಸಕರು ಮಾಡಿದ ಅಪಮಾನವೇ ಸರಿ.

Leave a Reply

Your email address will not be published. Required fields are marked *