Vijayanagara Express

Kannada News Portal

ಕರಡಿ ದುರ್ಗದ ಬಳಿ ಹೆಣ್ಣು ಚಿರತೆ ಅನುಮಾನಾಸ್ಪದವಾಗಿ ಸಾವು: ತನಿಖಾಧಿಕಾರಿ ನೇಮಕ

1 min read

ಕರಡಿ ದುರ್ಗದ ಬಳಿ ಹೆಣ್ಣು ಚಿರತೆ ಅನುಮಾನಾಸ್ಪದವಾಗಿ ಸಾವು: ತನಿಖಾಧಿಕಾರಿ ನೇಮಕ .

ಹರಪನಹಳ್ಳಿ: ಅನುಮಾನಾಸ್ಪದವಾಗಿ ಚಿರತೆಯೊಂದು ಸಾವನ್ನಪ್ಪಿದ್ದ ಘಟನೆ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ಕರಡಿದುರ್ಗ ಗ್ರಾಮದ ಬಳಿಯ ಜಮೀನುಯೊಂದರಲ್ಲಿ ಎರಡು ವರ್ಷದ ವನೋಮಾನದ ಹೆಣ್ಣು ಚಿರತೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕಳೆಬರ ದೊರೆಕಿದೆ. ಚಿರತೆಯ ಕಳೆಬರವನ್ನು ಪಶು ವೈದ್ಯಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಕುರಿತು ಸ್ಥಳೀಯ ಜೆಎಂಎಫ್‌ಸಿ ನ್ಯಾಯಲಯದಲ್ಲಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಅನುಮತಿ ಪಡೆದು ತನಿಖೆ ಕೈಗೊಳ್ಳಲಾಗಿದೆ. ತನಿಖಾಧಿಕಾರಿಯಾಗಿ ದಾವಣಗೆರೆ ಉಪ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಕೆ.ಬಿ.ಮೋಹನ್ ಅವರನ್ನು ನೇಮಕ ಮಾಡಲಾಗಿದೆ.
ಚಿರತೆಯ ಕುತ್ತಿಗೆ ಹತ್ತಿರ ಗಾಯವಾದ ಗುರುತು ಮತ್ತು ರಕ್ತ ಕಂಡು ಬಂದಿರುವುದರಿಂದ ಉರುಳು ಹಾಕಿರಬಹುದು ಎಂಬ ಶಂಕೆಯೊಂದಿಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪಶು ವೈದ್ಯಾಧಿಕಾರಿಗಳ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ತಿಳಿಯುತ್ತದೆ ಎಂದು ಅರಣ್ಯ ಜಿಲ್ಲಾ ಉಪ ಸಂರಕ್ಷಣಾಧಿಕಾರಿ ಜಗನಾಥ ತಿಳಿಸಿದ್ದಾರೆ.

Leave a Reply

Your email address will not be published. Required fields are marked *