ಅರಸೀಕೆರೆಯ ದುರ್ಗಮ್ಮ ದೇವಸ್ಥಾನಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ
1 min readಅರಸೀಕೆರೆ ದುರ್ಗಾ ಮಂದಿರಕ್ಕೆ ಶಾಸಕ ಎಸ್.ವಿ.ರಾಮಚಂದ್ರ ಭೇಟಿ
ಹರಪನಹಳ್ಳಿ :ತಾಲ್ಲೂಕಿನ ಜಗಳೂರು ವಿಧಾನ ಸಭಾ ಕ್ಷೇತ್ರದ ಅರಸೀಕೆರೆಗೆ ಶನಿವಾರ ಶಾಸಕ ಎಸ್.ವಿ.ರಾಮಚಂದ್ರರವರು ಈ ಭಾಗದ ಪ್ರಸಿದ್ಧ ಶಕ್ತಿ ದೇವತೆ ದಂಡಿ ದುರಗಮ್ಮ ದೇವಿಯ,,(ದುರ್ಗಾ ಮಾತಾ) ಕಾರ್ತಿಕೋತ್ಸವ ಹಾಗೂ ಜಾತ್ರೆಯ ಅಂಗವಾಗಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.
ಜಗಳೂರಿನ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ರವರು ಹಾಗೂ ಪತ್ನಿ ಶ್ರೀ ಮತಿ ಇಂದಿರಾ ರಾಮಚಂದ್ರಪ್ಪ.. ಪುತ್ರ ಆಜೆಯೇಂದ್ರ ಸಿಂಹ ರವರು ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೋಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಅರಸೀಕೆರೆ ಕೋಲಶಾಂತೇಶ್ವರ ಮಠದ ಶ್ರೀಗಳನ್ನು ಭೇಟಿ ಮಾಡಿ ಆರ್ಶಿವಾದ ಪಡೆದರು. ಸಂಜೆ ಬಳ್ಳಾರಿ ಜಿಲ್ಲೆಯ ಸಂಸದರಾದ ವೈ.ದೇವೇಂದ್ರಪ್ಪ ರವರ ನಿವಾಸಕ್ಕೆ ಭೇಟಿ ಕೊಟ್ಟು ಕುಶಲೋಪರಿ ವಿಚಾರಿಸಿ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದರು
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಂಸದರಾದ ವೈ.ದೆವೇಂದ್ರಪ್ಪ ,ವೈ.ಡಿ.ಅಣ್ಣಪ್ಪ. ಜಗಳೂರು ತಾಲ್ಲೂಕಿನ ಬಿಜೆಪಿ ತಾಲೂಕು ಅಧ್ಯಕ್ಷರಾದ ಪಲ್ಲಾಗಟ್ಟೆ ಮಹೇಶ್, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಡಿ.ವಿ ನಾಗಪ್ಪ, ಮುಖಂಡರಾದ ಪ್ರಶಾಂತ ಪಾಟೀಲ್, ವಿಶ್ವನಾಥಯ್ಯ, ಆನಂದಪ್ಪ, ಶೇಡ್ಡೆರ್ ನಿಂಗಪ್ಪ, ಮರಿಯಪ್ಪ, ಲಕ್ಷ್ಮಣ, ಪರಶುರಾಮ, ತೌಡೂರು ಮಂಜಯ್ಯ, ಕಮ್ಮತ್ತಹಳ್ಳಿ ಸಿದ್ದಪ್ಪ, ನಂದಿಕಂಬ ಚಂದ್ರನಾಯ್ಕ, ಅಣಜಿಗೆರೆ ಮಲ್ಲಿಕಾರ್ಜುನ, ಸಂತೋಷ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.