Vijayanagara Express

Kannada News Portal

ತಗ್ಗು ಜೌಗು ಪ್ರದೇಶದಲ್ಲಿ ಶಾಲೆ ಕಟ್ಟಡ ಕಾಮಗಾರಿ ವಿರೋಧಿಸಿ ಪ್ರತಿಭಟನೆ

1 min read

ತಗ್ಗು ಜೌಗು ಪ್ರದೇಶದಲ್ಲಿ ಶಾಲೆ ಕಟ್ಟಡ ಕಾಮಗಾರಿ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ: ತಾಲೂಕಿನ ಶೃಂಗಾರ ತೋಟದ ಬಳಿಯಲ್ಲಿ ತಗ್ಗು ಜೌಗು ಪ್ರದೇಶದಲ್ಲಿಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿಯ ನಿರ್ಮಾಣವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆ ವತಿಯಿಂದ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು

ಈ ವೇಳೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆಯ ಚಂದ್ರಪ್ಪ ಮಾತನಾಡಿ ಶೃಂಗಾರ ತೋಟ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕಟ್ಟಡವನ್ನು ನಿರ್ಮಿಸಲು ಲ್ಯಾಂಡ್ ಆರ್ಮಿ (ಭೂ ಸೇನಾ ನಿಗಮ) ಇಲಾಖೆ ವಶಕ್ಕೆ ಈ ಕಟ್ಟಡದ ಉಸ್ತುವಾರಿಯನ್ನು ವಹಿಸಲಾಗಿರುತ್ತದೆ ಈ ಭೂಮಿಯು ಬಾಗಳಿ ಕೆರೆಯ ಆರಂಭದ ಭಾಗ ಆಗಿರುತ್ತದೆ . ಅಲ್ಲದೆ ಶೃಂಗಾರ ತೋಟ ಗ್ರಾಮದ ಹೊರವಲಯದ ಹೊಲಗಳಲ್ಲಿನ ನೀರು ತಗ್ಗು ಪ್ರದೇಶವಾದ ಈ ಜಾಗದ ಮುಖಾಂತರ ಕೆರೆಗೆ ಹರಿದು ಹೋಗುತ್ತದೆ ಮತ್ತೊಂದು ಕಡೆ ಶೃಂಗಾರ ತೋಟ ಇಡೀ ಗ್ರಾಮದ ಚರಂಡಿಯ ನೀರು ಈ ಕಟ್ಟಡದ ಪಕ್ಕದಲ್ಲಿರುವ ಹಳ್ಳದ ಮುಖಾಂತರವೇ ಕೆರೆಯಂಗಳವನ್ನು ಸೇರುತ್ತದೆ ಹೀಗಿರುವುದರಿಂದ ಈ ಸ್ಥಳವು ಸಂಪೂರ್ಣ ನೀರಿನಿಂದ ಕಪ್ಪುಮಿಶ್ರಿತ( ಕರಲು ಮಣ್ಣು )ಮಣ್ಣಿನಿಂದ ಕೂಡಿರುತ್ತದೆ ಈ ಸ್ಥಳವು ಕಟ್ಟಡವನ್ನು ಕಟ್ಟಲು ಸೂಕ್ತವಾದ ಸ್ಥಳ ಆಗಿರುವುದಿಲ್ಲ ಆರಂಭದಿಂದಲೂ ಗ್ರಾಮಸ್ಥರು ಇದನ್ನು ವಿರೋದಿಸುತ್ತಾ ಬಂದಿದ್ದರೂ ಸಹ ಇದರ ಬಗ್ಗೆ ಯಾವುದೇ ಕಾಳಜಿಯನ್ನು ವಹಿಸದೆ ಇಲಾಖೆಯವರು ತಮ್ಮಿಷ್ಟಕ್ಕೆ ಬಂದಂತೆ ಕಟ್ಟಡ ಕಾಮಗಾರಿಯನ್ನು ಕಟ್ಟಲು ಮುಂದಾಗಿದ್ದಾರೆ ಸ್ಥಳದ ಬಗ್ಗೆ ಇರುವ ಮಾಹಿತಿಯನ್ನು ಶಾಸಕರ ಗಮನಕ್ಕೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಆದುದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ಮನಗಂಡು ಭವಿಷ್ಯತ್ತಿನಲ್ಲಿ ಇಂಥ ಅನಾವುತಗಳು ಆಗದಂತೆ ತಡೆಯಬೇಕೆಂದು ಶೃಂಗಾರತೋಟ ಗ್ರಾಮಸ್ಥರಾದ ನಾವುಗಳು ಅಧಿಕಾರಿಗಳಲ್ಲಿ ತಹಸಿಲ್ದಾರರಿಗೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ ಇದರ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಂಡು ಮುಂದೊಂದು ದಿನ ಕಟ್ಟಡವು ಕುಸಿದು ಮಕ್ಕಳ ಜೀವಗಳಿಗೆ ಸಂಚಕಾರ ವಾಗುವುದನ್ನು ತಪ್ಪಿಸಬೇಕೆಂದು ಈ ಮುಖಾಂತರ ಆಗ್ರಹಿಸುತ್ತೇವೆ ಎಂದರು .ಈ ಕೂಡಲೇ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಮುಖಂಡರು ತಾಲೂಕು ಆಡಳಿತಕ್ಕೆ ಎಚ್ಚರಿಸಿದರು .

ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ್ ಎಲ್ ನಂದೀಶ್ ರವರು ಅದನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡು ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು .

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕೆ ಮುನೀರ್ , ಅಜಿತ್ ಸಾಬ್ ಮುಂತಾದವರು ಗ್ರಾಮಸ್ಥರು ಗಳಾದ ಎಂ ಮಂಜುನಾಥ, ಹನುಮಂತ, ಸುರೇಶ್ ,ರಮೇಶ್, ಮರಿಯಪ್ಪ ಭರಮಜ್ಜ ,ಹಾಲಪ್ಪ, ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *