ಹಲುವಾಗಲು ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದ ಯರಬಾಳು ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ
1 min readಹಲುವಾಗಲು ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದ ಯರಬಾಳು ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆ -ಎಂ.ಪಿ.ಲತಾಮಲ್ಲಿಕಾರ್ಜುನ್ ರಿಂದ ಅಭಿನಂದನೆ
ಹರಪನಹಳ್ಳಿ: ತಾಲೂಕಿನ ಹಲುವಾಗಲು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. 26 ಸದಸ್ಯರ ಗ್ರಾಮ ಪಂಚಾಯತಿಯಲ್ಲಿ 14 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ವೈ.ರುದ್ರಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಹಲುವಾಗಲು ಗ್ರಾಮಪಂಚಾಯಿತಿ ಯು ಒಟ್ಟು 26 ಸದಸ್ಯರು ಪೈಕಿ 12 ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿರುತ್ತಾರೆ ,12 ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿರುತ್ತಾರೆ , ಉಳಿದ 2 ಸದಸ್ಯರು ಪಕ್ಷೇತರ ಅಭ್ಯರ್ಥಿ ಗಳಿರುತ್ತಾರೆ.
ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಸೌಮ್ಯ ಸ್ವಭಾವದ, ಸಜ್ಜನ ರಾಜಕಾರಿಣಿ ವೈ.ರುದ್ರಪ್ಪ ಎಂ.ಪಿ ಪ್ರಕಾಶ್ ರವರ ಅಭಿಮಾನಿಯಾಗಿ,ಅನುಯಾಯಿಯಾಗಿ ರಾಜಕಾರಣಕ್ಕೆ ಬಂದಂತವರು, ಶ್ರೀಯುತ ಯರಬಾಳು ರುದ್ರಪ್ಪನವರಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿನಂದನೆಗಳನ್ನು ತಿಳಿಸಿ ನಿಮ್ಮ ಅಧಿಕಾರ ಬಡ ಜನರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿದ್ದು,ತಮ್ಮ ಜನಪರ ಚಿಂತನೆಗೆ ಈ ಅಧಿಕಾರ ಸಾಧನವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಅಧಿಕಾರ ಬರುತ್ತೆ-ಹೋಗುತ್ತೆ ಆದರೆ ಜನರಿಟ್ಟ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ, ನಿಮ್ಮ ಹೆಸರು ಹಲುವಾಗಲು ಗ್ರಾಮಪಂಚಾಯಿತಿ ಚರಿತ್ರೆಯ ಪುಟದಲ್ಲಿ ಉಳಿಯುವ ರೀತಿ ಕಾರ್ಯ ನಿರ್ವಹಿಸಿ, ಮುಂದಿನ ದಿನಗಳಲ್ಲಿ ಭಗವಂತ ಇನ್ನೂ ಹೆಚ್ಚು ಶಕ್ತಿಯನ್ನು ತಮಗೆ ದಯಪಾಲಿಸಲಿ, ತಮ್ಮಿಂದ ಸರ್ವರಿಗೂ ಒಳಿತಾಗಲಿ ಎಂದು ಆಶಿಸಿ ಶುಭವನ್ನು ಕೋರಿರುತ್ತಾರೆ.
ಶ್ರೀಯುತ ರುದ್ರಪ್ಪನವರ ಆಯ್ಕೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಎಂ.ಪಿ.ಲತಾಮಲ್ಲಿಕಾರ್ಜುನರವರು ಕೃತಜ್ಞತೆಗಳನ್ನು ತಿಳಿಸಿದ್ದು, ಹಾಗೂ ಸುಗಮ ಚುನಾವಣೆಗೆ ಅವಕಾಶ ಮಾಡಿಕೊಟ್ಟ ತಾಲೂಕು ಆಡಳಿತ,ಪೋಲಿಸ್ ಇಲಾಖೆ ವಿಶೇಷವಾಗಿ ಹಲುವಾಗಲು ಗ್ರಾಮ ಪಂಚಾಯತಿಯ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿರುತ್ತಾರೆ.