ನಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ದೇಣಿಗೆ ನೀಡಿದ ಎಂ.ಪಿ.ಲತಾಮಲ್ಲಿಕಾರ್ಜುನ .
1 min readನಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಟ್ಯಾಂಕ್ ದೇಣಿಗೆ ನೀಡಿದ ಎಂ.ಪಿ.ಲತಾಮಲ್ಲಿಕಾರ್ಜುನ .
ಹರಪನಹಳ್ಳಿ: ಜ-26 ತಾಲೂಕಿನ ನಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಂಪಿ ಲತಾ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ ಶಾಲೆಯಲ್ಲಿ ಆಯೋಜಿಸಿದ್ದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಕುಡಿಯುವ ನೀರಿನ ಟ್ಯಾಂಕನ್ನು ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಗಳಾದ ಎಂಪಿ ಲತಾ ಮಲ್ಲಿಕಾರ್ಜುನ್ ಅವರು ಈ ಹಿಂದೆ ನಾನು ಈ ಶಾಲೆಗೆ ಭೇಟಿ ಕೊಟ್ಟಾಗ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿತ್ತು ಆಗ ನಾನು ಕುಡಿಯುವ ನೀರಿನ ಸಮಸ್ಯೆಗೆ ಒಂದು ಟ್ಯಾಂಕರನ್ನು ಕೊಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳುವ ಮಾತನ್ನು ಹೇಳಿದ್ದೆ ಅದಕ್ಕಾಗಿ ಇಂದು ಗಣರಾಜ್ಯೋತ್ಸವ ದಿನದಂದು ಈ ಶಾಲೆಗೆ ಶುದ್ಧ ಕುಡಿಯುವ ನೀರಿನ ಟ್ಯಾಂಕರನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದರು .
ತಾಲೂಕಿನ ನಿಟ್ಟೂರು ಗ್ರಾಮವು ನದಿಪಾತ್ರದ ಒಂದು ಗ್ರಾಮ ವಾಗಿದ್ದರೂ ಸಹ ಅಲ್ಲಿಯ ಶಾಲಾ ಮಕ್ಕಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಗ್ರಾಮದಲ್ಲಿ ಮಕ್ಕಳಿಗೆ ಶಾಲೆ ಕಲಿಯಲು ಅವಕಾಶಗಳು ಇವೆ ಒಂದನೇ ತರಗತಿಯಿಂದ 6ನೇ ತರಗತಿಯವರೆಗೆ ಒಂದು ಕಟ್ಟಡವನ್ನು ಕಟ್ಟಾಲಾಗಿದೆ ಮತ್ತು ಏಳರಿಂದ ಹತ್ತನೇ ತರಗತಿಯವರೆಗೆ ನಿಟ್ಟೂರು ಕ್ರಾಸ್ನಲ್ಲಿ ಹೊಸ ಕಟ್ಟಡವನ್ನು ಕಟ್ಟಲಾಗಿದೆ ಒಂದು ಬಾರಿ ಶಾಲೆಗೆ ಅಕಸ್ಮಾತಾಗಿ ಎಂಪಿ ಲತಾ ಮಲ್ಲಿಕಾರ್ಜುನ ಅವರು ಭೇಟಿಕೊಟ್ಟಾಗ ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದದ್ದು ಅವರ ಗಮನಕ್ಕೆ ಬಂದಿತ್ತು ಆಗ ಗ್ರಾಮಸ್ಥರು ನಮ್ಮ ಶಾಲೆಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು ಆ ಕಾರಣಕ್ಕಾಗಿ ಎಂಪಿ ಲತಾ ಮಲ್ಲಿಕಾರ್ಜುನ್ ಅವರು 200ಲೀಟರ್ ಸಾಮರ್ಥ್ಯವಿರುವ ಶುದ್ಧಕುಡಿಯುವ ನೀರಿನ ಟ್ಯಾಂಕನ್ನು ಗಣರಾಜ್ಯೋತ್ಸವ ದಿನದಂದು ದೇಣಿಗೆಯಾಗಿ ಶಾಲೆಗೆ ಇಂದು ನೀಡಿರುತ್ತಾರೆ ಇದಕ್ಕೆ ಗ್ರಾಮಸ್ಥರು ಎಂಪಿ ಲತಾಮಲ್ಲಿಕಾರ್ಜುನ್ ರವರಿಗೆ ಅಭಿನಂದನೆಯನ್ನು ತಿಳಿಸಿರುತ್ತಾರೆ ಹಾಗೂ ಗ್ರಾಮಸ್ಥರು ಅವರಿಗೆ ಸನ್ಮಾನವನ್ನು ಮಾಡಿದರು .
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಪ್ಪ, ಶಿಕ್ಷಕರುಗಳಾದ ಕೊಟ್ರು ಬಸಯ್ಯ ಅಶೋಕ್ ಸುಮಾ ಚೆನ್ನಮ್ಮ ಸುಕನ್ಯಾ ವೀಣಾ ಸರೋಜಾ ಸುನಿಲ್ ಹಾಗೂ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಿ ನಾಗಮ್ಮ ಉಪಾಧ್ಯಕ್ಷರಾದ ನವೀನ್ ಗ್ರಾಮಪಂಚಾಯ್ತಿ ಸದಸ್ಯರುಗಳಾದ ರೇಣುಕಾಬಾಯಿ ಸಿದ್ದಲಿಂಗಸ್ವಾಮಿ, ಎಸ್ ಡಿಎಂಸಿ ಅಧ್ಯಕ್ಷರಾದ ಸೋಮಲಿಂಗಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಟಿ ಹನುಮಂತಪ್ಪ , ಗ್ರಾಮದ ಮುಖಂಡರುಗಳಾದ ಡಾಕ್ಟರ್ ಚಂದ್ರಪ್ಪ ,ಹುಲಿ ರಾಮಣ್ಣ , ಬಿಟಿ ಬಸಪ್ಪ, ಸಿ ಸೋಮಲಿಂಗಪ್ಪ ,ನಾಗರಾಜ್ ಜಿಕೆ, ಕರಿಯಪ್ಪ, ಪರಶುರಾಮ , ಮೋಹನ್ ಎಸ್ ಡಿ ಎಂ ಸಿ ಸದಸ್ಯರುಗಳಾದ ನಾಗೇಂದ್ರಪ್ಪ ಪರಸಪ್ಪ ,ಮುಂತಾದವರುಗಳುಹಾಜರಿದ್ದರು .