ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಮಹತ್ತರವಾದದ್ದು -ಮೋರಿಗೇರಿ ಹೆಮಣ್ಣ.
1 min readಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಮಹತ್ತರವಾದದ್ದು -ಮೋರಿಗೇರಿ ಹೆಮಣ್ಣ.
ಹರಪನಹಳ್ಳಿ : ಸಮಾಜವನ್ನು ಸರಿ ದಾರಿಗೆ ತರುವಲ್ಲಿ ತಮ್ಮ ನೇರ ,ನಿಷ್ಟುರ, ಬಂಡಾಯದ ಮಾತುಗಳನ್ನು ವಚನದ ಮೂಲಕ ತಿಳಿಸಿದ ಶ್ರೀ ಅಂಬಿಗರ ಚೌಡಯ್ಯನವರು ಬಸವಣ್ಣನವರಿಂದಲೇ ನಿಜಶರಣರೆಂದು ಕರೆಯಲ್ಪಟ್ಟವರು ಎಂದು ಸಮಾಜದ ಹೇಮಣ್ಣ ಮೋರಿಗೇರಿ ಹೇಳಿದರು.
ತಾಲೂಕು ಆಡಳಿತದಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ 902 ನೇ ಜಯಂತಿಯಲ್ಲಿ ಅವರು ಮಾತನಾಡಿದ ಅವರು 12 ನೇ ಶತಮಾನದಲ್ಲಿ ಸಮಾನತೆ, ಸಮ ಸಮಾಜದ ಜಾಗೃತಿಗಾಗಿ ಬಸವಣ್ಣನವರ ಸಮ್ಮುಖದಲ್ಲಿ ವಚನ ಕ್ರಾಂತಿಯ ಮೂಲಕ ಸಂಘಟಿತರಾದ ಸಂದರ್ಭವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು ಎಂದರು.
ಮಹರ್ಷಿ ವಾಲ್ಮೀಕಿ, ಕನಕದಾಸರು, ಅಕ್ಕಮಹಾದೇವಿ, ಬಸವಣ್ಣ, ಸರ್ವಜ್ಞ, ಒಂದು ಜಾತಿಯಲ್ಲಿ ಹುಟ್ಟಿರಬಹುದು.ಅವರಾರು ಒಂದು ಜನಾಂಗದ ಒಳಿತಿಗಾಗಿ, ಜಾಗೃತಿಗಾಗಿ ವಚನಗಳನ್ನು ಬರೆಯಲಿಲ್ಲ ಅಥವಾ ಹೋರಾಡಲಿಲ್ಲ.ಎಲ್ಲಾ ಜನಾಂಗದ ಹಿತಕ್ಕಾಗಿ ಶ್ರಮಿಸಿ ಆದರ್ಶ ವ್ಯಕ್ತಿಗಳಾಗಿದ್ದಾರೆ.ಇಂತಹವರನ್ನು ಯಾವುದೇ ಒಂದು ಜಾತಿ ಜನಾಂಗಕ್ಕಾಗಿ ಸಿಮೀತಮಾಡದೇ ಅವರ ಆದರ್ಶ ನಡೆ ನುಡಿಗಳನ್ನು ಸರ್ವರೂ ಅನುಸರಿಸಬೇಕು,ಚೌಡಯ್ಯನವರ ವಚನ ಸಾರವನ್ನು ಅರಿತು ಪ್ರತಿಯಾಬ್ಬರೂ ಅವರವರ ಜೀವನದಲ್ಲಿಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸೋಣವೆಂದರು.
ನೀಲಗುಂದ ಕ್ಷೇತ್ರದ ಜಿ.ಪಂ.ಮಾಜಿ ಸದಸ್ಯರಾದ ಹೆಚ್.ಬಿ. ಪರಶುರಾಮಪ್ಪನವರು ಮಾತನಾಡಿ ಕೋವಿಡ್ ಮಾರ್ಗಸೂಚಿಯಿಂದ ಮಹನೀಯರ ಜಯಂತಿ ಆಚರಿಸಲು ಸಹ ತೊಂದರೆಯಾಗಿದೆ ಅಂಬಿಗರ ಚೌಡಯ್ಯ ವಚನಕಾರರಲ್ಲಿಯೇ ನಿಷ್ಟುರ ನಡೆ ಹೊಂದಿದವರಾಗಿದ್ದರು ತಮ್ಮ ದೋಣಿ ನಡೆಸುವ ಕಾಯಕದೊಂದಿಗೆ ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.
ಹರಪನಹಳ್ಳಿ ಉಪವಿಭಾಗ ಅಧಿಕಾರಿಗಳ ಕಛೇರಿಯ ಗ್ರೇಡ್ 2 ತಹಶೀಲ್ದಾರರಾದ ಸುರೇಶ್ ರವರು ಮಾತನಾಡಿ “ಅಂಬಿಗರ ಚೌಡಯ್ಯನವರ ವಚನಗಳು ಜನ ಸಾಮಾನ್ಯರಿಗೂ ಅರ್ಥವಾಗುವ ಶೈಲಿಯಲ್ಲಿದ್ದು ಅವರ ವಚನಗಳಲ್ಲಿ ತಮಗೆ ತೋಚಿದನ್ನು ಮರೆಮಾಚದೇ ಹೇಳುವ ಮೂಲಕ ನಿಜಶರಣ ಎಂದು ಪ್ರಸಿದ್ದರಾಗಿದ್ದಾರೆ” ಎಂದರು.
ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಕಛೇರಿಯ ಗ್ರೇಡ್ 2 ತಹಶೀಲ್ದಾರರಾದ ರವಿಯವರು,ತಾಲೂಕು ಗಂಗಾಮತ ಸಮಾಜದ ಕಾರ್ಯದರ್ಶಿ ಪವಾಡಿ ದೇವೇಂದ್ರ, ಉಪಾಧ್ಯಕ್ಷ ಜಾಲಗಾರ್ ಕೊಟ್ರೇಶ್, ಸಂಘಟನಾ ಕಾರ್ಯದರ್ಶಿ ಕೊಂಗನಹೊಸೂರು ವೈ. ಮಹಂತೇಶ್, ಪದಾಧಿಕಾರಿಗಳಾದ ಐನಳ್ಳಿ ಪಕ್ಕೀರಪ್ಪ, ಕೆ.ರಾಘವೇಂದ್ರ, ಸುಣಗಾರ ಹನುಮಂತಪ್ಪ, ಪತ್ರಕರ್ತ ಬಿ.ರಾಮಪ್ರಸಾದ ಗಾಂಧಿ ,ಪೂಜಾರ ಬಸವರಾಜ, ಜಾಲಗಾರ ಕಾಶಪ್ಪ, ಅವಣೆಪ್ಪ, ಹನುಮಂತಪ್ಪ, ದ್ಯಾಮಪ್ಪ, ನಾಗಪ್ಪ ತಾಲೂಕು ಕಛೇರಿ ಹಾಗೂ ಸಹಾಯಕ ಆಯುಕ್ತರ ಕಛೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.