October 11, 2024

Vijayanagara Express

Kannada News Portal

ನರಕ ವಾದ ಪಟ್ಟಣದ ಪಠಾಣಗೇರಿ ಮತ್ತು ಹಿಪ್ಪಿ ತೋಟದ ಚರಂಡಿಗಳು

1 min read

ನರಕ ವಾದ ಪಟ್ಟಣದ ಪಠಾಣಗೇರಿ ಮತ್ತು ಹಿಪ್ಪಿ ತೋಟದ ಚರಂಡಿಗಳು

ಹರಪನಹಳ್ಳಿ : ನರಕ ಕ್ಕಿಂತಲೂ ಕೀಳಾಗಿ ಕಾಣುವ ಕೆಟ್ಟದಾದ ಚರಂಡಿ ವ್ಯವಸ್ಥೆಯು ಪಟ್ಟಣದ ಪಠಾಣಗೇರಿ ಯ ವ್ಯಾಪ್ತಿಯಲ್ಲಿ ಕಂಡುಬರುತ್ತಿವೆ ಅಧಿಕಾರಿಗಳು ಜನಪ್ರತಿನಿಧಿಗಳು ಇಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ
ತಾಲೂಕು ಕೇಂದ್ರ ಪ್ರದೇಶವಾದ ಹರಪನಹಳ್ಳಿ ಪಟ್ಟಣದಲ್ಲಿ 12,13 ವಾರ್ಡ್ (ಚುನಾವಣೆ ವಾರ್ಡ್) ನೇ ವಾರ್ಡಿಗೆ ಸಂಬಂಧಪಟ್ಟ ಪಠಾಣಗೇರಿ ಮತ್ತು ಹಿಪ್ಪಿತೋಟದ ಲ್ಲಿ ಕಂಡುಬರುವಂತಹ ನರಕ ಸಾದೃಶ್ಯವಾಗಿ ಕಾಣಲ್ಪಡುವ ಚರಂಡಿಗಳು ಹೊಸದಾಗಿ ಯಾರಾದರೂ ಇದನ್ನು ನೋಡಿದರೆ ನರಕ ಅಂದರೆ ಇದೇ ಇರಬಹುದೇನೋ ಎನ್ನುವಂತ ಯೋಚನೆ ಬರುತ್ತದೆ ಎಂದರೆ ಬಹುಶಃ ತಪ್ಪಾಗಲಾರದು .

ಕೊಳೆತು ನಾರುತ್ತಿರುವ ಚರಂಡಿಗಳು ಒಂದುಕಡೆಯಾದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಚರಂಡಿಯಲ್ಲಿ ತೇಲಿ ಬಿಡುತ್ತಿರುವುದರಿಂದ ಪುರಸಭೆ ಯವರು ಕುಡಿಯುವ ನೀರು ಬಿಟ್ಟಾಗ ನಂತರ ಚರಂಡಿಯ ಮುಖಾಂತರ ಹರಿಯುವ ನೀರಿನಲ್ಲಿ ಪ್ಲಾಸ್ಟಿಕ್ ಕವರ್ ಗಳು ತೇಲಿಕೊಂಡು ಬಂದು ಪಠಾಣಗೇರಿ ಚರಂಡಿಯ ಕೊನೆಯಲ್ಲಿ ಸಂಗ್ರಹವಾಗಿ ತಿಪ್ಪೆಯಂತೆ ಬಿದ್ದಿರುತ್ತವೆ . ಯಾವಾಗಲೋ ಓಬಿರಾಯನ ಕಾಲದಲ್ಲಿ ಒಂದು ಬಾರಿ ನಿರ್ಮಾಣವಾದ ಚರಂಡಿಯು ಇಲ್ಲಿ ಬೇಕಾಬಿಟ್ಟಿಯಾಗಿ ಹರಿದು ಹೋಗುತ್ತದೆ ,ಮಳೆ ಬಂದರಂತೂ ಇಲ್ಲಿಯ ನಿವಾಸಿಗಳ ಬದುಕು ಹೇಳತೀರದು, ಎಷ್ಟೋ ಸಂದರ್ಭಗಳಲ್ಲಿ ಮಳೆ ಬಂದ ನಂತರ ಅಲ್ಲಿಯ ನಿವಾಸಿಗಳು ಕೈಯಲ್ಲಿ ಜೀವವನ್ನು ಹಿಡಿದುಕೊಂಡು ರಾತ್ರಿಯಾಗಿದ್ದರೆ ನಿದ್ದೆ ಮಾಡದಂತೆ ಮನೆಯಲ್ಲಿರುವ ನೀರನ್ನು ಮುಗಿದು ಹೊರಗೆ ಹಾಕುವುದೇ ಒಂದು ಸಾಹಸದ ಕೆಲಸವಾಗಿರುತ್ತದೆ ಇಷ್ಟಾದರೂ ಚುನಾವಣೆ ಸಂದರ್ಭಗಳಲ್ಲಿ ಪದೇಪದೇ ಬೀದಿಗಳಲ್ಲಿ ಅಡ್ಡಾಡಿ ಇದನ್ನು ನಾನು ಗೆದ್ದರೆ ಸಿಂಗಾಪುರದ ರಸ್ತೆಯಾಗಿ ಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಭರವಸೆ ಗಳನ್ನು ನೀಡುವ ಜನಪ್ರತಿನಿಧಿಗಳು ಇತ್ತಾ ಕಡೆ ಸುಳಿದುಕೂಡ ನೋಡುತ್ತಿಲ್ಲ ಇನ್ನೂ ಅಧಿಕಾರಿಗಳಂತೂ ವಾರಕ್ಕೆ ಒಂದು ಬಾರಿ ಇಲ್ಲವಾದರೆ ಹದಿನೈದು ದಿನಕ್ಕೆ ಒಂದು ಬಾರಿ ಪ್ಲಾಸ್ಟಿಕ್ ಕವರ್ ಗಳನ್ನು ಎತ್ತಿ ಹಾಕಿಸಿ ಹೊರಟು ಹೋದವರು ಇತ್ತಕಡೆ ತಲೆ ಹಾಕಿಯೂ ಮಲಗುವುದಿಲ್ಲ .

ಪುರಸಭೆಯವರು ಇದರ ಬಗ್ಗೆ ಅನೇಕ ಬಾರಿ ಜಾಗೃತಿ ಮೂಡಿಸಿದರು ಸಹ ಪ್ರಯೋಜನವಾಗುತ್ತಿಲ್ಲ ಪುರಸಭೆ ವತಿಯಿಂದ ಒಣ ಕಸ ಹಸಿ ಕಸ ಬೇರ್ಪಡಿಸಿ ಪುರಸಭೆಯ ತ್ಯಾಜ್ಯವನ್ನು ಒಯ್ಯುವ ವಾಹನಗಳಲ್ಲಿ ಕಡ್ಡಾಯವಾಗಿ ಕಸಗಳನ್ನು ಹಾಕಿ ಎಂದು ಎಷ್ಟೇ ಹೇಳಿದರು ಜನರು ಮಾತ್ರ ಪ್ಲಾಸ್ಟಿಕ್ ಮತ್ತು ಕಸವನ್ನು ಚರಂಡಿಯಲ್ಲಿಯೇ ಎಸೆಯುತ್ತಾರೆ ಇದರಿಂದ ಜನರು ಸಹ ಬದಲಾಗಬೇಕಾಗಿದೆ.

ಕುಡಿಯುವ ನೀರಿನಲ್ಲಿ ಚರಂಡಿಯ ನೀರು ಮಿಶ್ರಿತವಾಗಿ ನಲ್ಲಿಗಳಲ್ಲಿ ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸಹ ಬರುತ್ತದೆ ಇದಕ್ಕೆ ಕಾರಣ ಚರಂಡಿ ಹತ್ತಿರ ಕುಡಿಯುವ ನೀರಿನ ಪೈಪ್ ಗಳಿಗೆ ಸರಿಯಾದ ವ್ಯವಸ್ಥೆಯನ್ನು ಸಹ ಮಾಡದಿರುವುದೇ ಆಗಿದೆ ಇಂತಹ ನೀರನ್ನು ಕುಡಿದು ಸಾಕಷ್ಟು ಜನರು ಅಸ್ವಸ್ಥರಾಗಿ ಡೆಂಗ್ಯೂ ಚಿಕನಗುನ್ಯಾ ಮುಂತಾದ ರೋಗಗಳು ಇಲ್ಲಿ ಸಹಜವಾಗಿ ಆಗಾಗ ಇಲ್ಲಿಯ ಜನರಿಗೆ ಕಾಣಿಸಿಕೊಳ್ಳುತ್ತವೆ ಈ ರೀತಿಯ ಚರಂಡಿ ವ್ಯವಸ್ಥೆ ಇರುವ ಕಾರಣದಿಂದ ಹೆಗ್ಗಣಗಳಿಗೆ ಆವಾಸಸ್ಥಾನವಾಗಿದೆ ಹೆಗ್ಗಣಗಳು ಇಲಿಗಳು ಇರುವುದರಿಂದ ಸಾಂಕ್ರಾಮಿಕ ರೋಗಗಳಾದ ವಾಂತಿ ಭೇದಿ ಕಾಲರಾ ಅಂತ ರೋಗಗಳು ಹರಡುವ ಭೀತಿಯಲ್ಲೇ ಇಲ್ಲಿಯ ಜನರು ದಿನಗಳನ್ನುದೂಡುತ್ತಿದ್ದಾರೆ .

 

ಇಂಥ ಹರುಕುಮುರುಕುಲಾದ ಚರಂಡಿ ವ್ಯವಸ್ಥೆಯಿಂದಾಗಿ ಸೊಳ್ಳೆಗಳು ಸಹಜವಾಗಿ ಯಥೇಚ್ಛವಾಗಿವೆ ಆ ಕಾರಣದಿಂದ ಸರ್ಕಾರ ಜನರ ಆರೋಗ್ಯಕ್ಕೆ , ಮತ್ತು ಸ್ವಚ್ಛತೆಗೆ ಸಾಕಷ್ಟು ಯೋಜನೆಗಳನ್ನು ಘೋಷಿಸುತ್ತದೆ ಇಂಥ ವ್ಯವಸ್ಥೆಗಳನ್ನು ಸರಿಪಡಿಸದೇ ಆರೋಗ್ಯ ವ್ಯವಸ್ಥೆಯಲ್ಲಿ ಮತ್ತು ಸ್ವಚ್ಛತೆಯಲ್ಲಿ ಸುಧಾರಣೆ ತರುವುದು ಹಾಗೂ ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಅಸಾಧ್ಯ ಆಗಿದೆ .
ಪುರಸಭೆ ವತಿಯಿಂದ ಸೊಳ್ಳೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಫಾಗಿಂಗ್ ಮಿಷನ್ ಮೂಲಕ ಫಕಿಂಗ್ ಸಿಂಪಡಣೆಯನ್ನು ಮಾಡಬೇಕಾಗಿರುತ್ತದೆ ಇಲ್ಲಿ ನಿರ್ಲಕ್ಷದಿಂದಾಗಿ ಅದರ ಸಿಂಪರಣೆ ಸಹ ಸರಿಯಾಗಿ ಆಗುತ್ತಿಲ್ಲ.
ಪಟ್ಟಣದ 12 ಮತ್ತು 13ನೇ ವಾರ್ಡಿನ ಇಪ್ಪಿ ತೋಟ ಮತ್ತು ಪಠಾಣಗೇರಿಯ ಈ ರಸ್ತೆಯಲ್ಲಿ ಶೌಚಾಲಯದ ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ ಇದರಿಂದ ಚರಂಡಿಯಲ್ಲಿ ಶೌಚಾಲಯದ ತ್ಯಾಜ್ಯವು ಸೇರಿ ದುರ್ನಾಥ ಉಂಟಾಗಿ ಇದರಿಂದ ಅನೇಕ ಸಾಂಕ್ರಾಮಿಕ ಕಾಯಿಲೆಗಳು ಉಂಟಾಗುತ್ತವೆ ಇಲ್ಲಿಯ ಜನರಿಗೆ ಪದೇಪದೇ ಡೇಂಗ್ಯೂ ಚಿಕನ್ ಗುನ್ಯಾ ರೋಗಗಳು ಕಾಣಿಸಿಕೊಳ್ಳುತ್ತಿರುತ್ತವೆ ಆದ್ದರಿಂದ ಈ ಕೂಡಲೇ ಇದಕ್ಕೆ ಅಧಿಕಾರಿಗಳು ಸಾರ್ವಜನಿಕರ ಮೇಲೆ ಗಮನ ಇಟ್ಟು ಕ್ರಮಕೈಗೊಂಡು ಸೂಕ್ತವಾದಂತಹ ಮಾರ್ಗದರ್ಶನವನ್ನೂ ಮತ್ತು ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಹಾಗೂ ಅದಕ್ಕೆ ಯುಜಿಡಿ ಅಥವಾ ಇಂಗುಗುಂಡಿಯನ್ನು ಬಳಸುವಂತೆ ಸೂಚಿಸಬೇಕು ಇಲ್ಲವಾದಲ್ಲಿ ನಗರದಲ್ಲಿ ಅವ್ಯವಸ್ಥೆಯ ಜೊತೆಗೆ ರೋಗದ ಸಮುದ್ರವು ಉಂಟಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ .
ಇಷ್ಟೇ ಅಲ್ಲದೆ ಈ ರಸ್ತೆಯಲ್ಲಿ ಚರಂಡಿಯ ಮೇಲೆ ಬಹುತೇಕರು ಮನೆಗಳನ್ನು ಮತ್ತು ಶೌಚಾಲಯವನ್ನು ಚರಂಡಿಯ ಮೇಲೆ ನಿರ್ಮಿಸಿಕೊಂಡಿದ್ದು ಚರಂಡಿಯನ್ನು ಅತಿಕ್ರಮಿಸಿ ಕೊಂಡಿರುತ್ತಾರೆ ಇದರ ಬಗ್ಗೆ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಹಾಗೂ ಪುರಸಭೆಯ ಆರೋಗ್ಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ ಇದರ ಬಗ್ಗೆ ಕ್ರಮವನ್ನು ವಹಿಸುತ್ತೇವೆ ಎಂದು ಭರವಸೆ ನೀಡುತ್ತಾರೆ ವಿನಹ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ ಆದ್ದರಿಂದ ಪುರಸಭೆ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಈ ಕೂಡಲೇ ಸರಿಪಡಿಸದೆ ಹೋದರೆ ಇದು ನರಕದ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸರ್ಕಾರದಿಂದ 15ನೇ ಹಣಕಾಸು ಅಥವಾ ಬೇರೆ ಯಾವುದಾದರೂ ಅನುದಾನ ಬಂದರೆ ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೊಳ್ಳುತ್ತೇವೆ ಮತ್ತು ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಅಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡಗಳನ್ನು ಗೊಳಿಸಲು ಕ್ರಮಕೈಗೊಳ್ಳುತ್ತೇನೆ.

 

 

 

ಎರಗುಡಿ ಶಿವಕುಮಾರ್ ಪುರಸಭೆ ಮುಖ್ಯಾಧಿಕಾರಿ

ಪುರಸಭೆಯ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ಚರಂಡಿಯನ್ನು ನಿರ್ಮಿಸುವಂತೆ ಮತ್ತು ಚರಂಡಿಯ ಮೇಲೆ ಕಟ್ಟಿಕೊಂಡಿರುವ ಅಕ್ರಮ
ಕಟ್ಟಡಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದೇವೆ ಆದಾಗ್ಯೂ ಯಾರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಹಾಗೂ ಚರಂಡಿಯನ್ನು ನಿರ್ಮಿಸಿರುವುದಿಲ್ಲ ಆದ್ದರಿಂದ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದೇವೆ ಈಗಲಾದರೂ ಪುರಸಭೆ ಅಧಿಕಾರಿಗಳು ಇಲ್ಲಿನ ನಿವಾಸಿಗಳಿಗೆ ನರಕ ಜೀವನದಿಂದ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.

ಮುನ್ನಾವರ್  ಪಠಾಣಗೇರಿ ನಿವಾಸಿ.

ಚರಂಡಿಗೆ ನೇರವಾಗಿ ಶೌಚಾಲಯದ ತ್ಯಾಜ್ಯವನ್ನು ಬಿಡುತ್ತಿದ್ದಾರೆ ಇದಕ್ಕೆ ಪುರಸಭೆ ಅಧಿಕಾರಿಗಳು ಕಡಿವಾಣ ಹಾಕಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಚರಂಡಿ ಮೇಲೆ ಕಟ್ಟಿಕೊಂಡಿರುವ ಅಕ್ರಮ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು.

ಹನ್ನಾನ್ ಸಾಬ್ ಎ. ಪಠಾಣಗೇರಿ ನಿವಾಸಿ

Leave a Reply

Your email address will not be published. Required fields are marked *