ಶಾಸಕ ಕರುಣಾಕರ ರೆಡ್ಡಿಗೆ ಸಚಿವ ಸ್ಥಾನ ನೀಡಲಿ- ಮೂಲಿಮನಿ ಹನುಮಂತಪ್ಪ.
1 min readಶಾಸಕ ಕರುಣಾಕರ ರೆಡ್ಡಿಗೆ ಸಚಿವ ಸ್ಥಾನ ನೀಡಲಿ- ಮೂಲಿಮನಿ ಹನುಮಂತಪ್ಪ.
ಹರಪನಹಳ್ಳಿ: ಫ್ರೆ 5 ಹರಪನಹಳ್ಳಿ ಶಾಸಕ ಗಾಲಿ ಕರುಣಾಕರ ರೆಡ್ಡಿಗೆ ಮಂತ್ರಿ ಸ್ಥಾನ ನೀಡಬೇಕೆಂದು ತಾಲೂಕಿನ ಬಿಜೆಪಿ ಯುವ ಮುಖಂಡ ಮೂಲಿಮನಿ ಹನುಮಂತಪ್ಪ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಬಿಜೆಪಿ ಯ ಹಿರಿಯ ಶಾಸಕರಾದ ಕರುಣಾಕರ ರೆಡ್ಡಿ ಅವರು ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕ ಶಾಸಕರಾಗಿದ್ದಾರೆ . ಅಲ್ಲದೆ ಒಂದು ಬಾರಿ ಸಂಸದರಾಗಿ ಒಂದು ಬಾರಿ ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಸಚಿವರಾಗಿ ಆಡಳಿತ ನಡೆಸಿರುವ ಅನುಭವವಿದೆ ಆದ್ದರಿಂದ ಅವರಿಗೆ ಮಂತ್ರಿಸ್ಥಾನವನ್ನು ನೀಡುವುದು ಸೂಕ್ತವಾಗಿರುತ್ತದೆ ಆದ್ದರಿಂದ ಈ ಕುರಿತು ಪಕ್ಷದ ವರಿಷ್ಠರು ಗಮನಹರಿಸಿ ಕರುಣಾಕರರೆಡ್ಡಿ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆೆೆೆ
ಹರಪನಹಳ್ಳಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ ಅಲ್ಲದೆ ಜನಮಾನಸದಲ್ಲಿ ನೆಲೆಯೂರಿದ್ದಾರೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಶಾಸಕರು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಮೂಲಿಮನಿ ಹನುಮಂತಪ್ಪ ಬಿಜೆಪಿ ಯುವ ಮುಖಂಡ