Vijayanagara Express

Kannada News Portal

ವಿಶ್ವದ ಸಮಸ್ಯೆಗಳಿಗೆ ಸಂಘದ ತತ್ವವೇ ಪರಿಹಾರ- ದಾಮೋದರ್ ಜೀ

1 min read

ವಿಶ್ವದ ಸಮಸ್ಯೆಗಳಿಗೆ ಸಂಘದ ತತ್ವವೇ ಪರಿಹಾರ- ದಾಮೋದರ್ ಜೀ

ಹರಪನಹಳ್ಳಿ:ಏ-3 ಭಾನುವಾರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದವತಿಯಿಂದ ಯುಗಾದಿ ಉತ್ಸವವನ್ನು ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾll ಇಂದ್ರೇಶ್ ಹಾಗೂ ವಕ್ತಾರರಾಗಿ ದಾಮೋದರ್ ಜಿ ಹಿರಿಯ ಪ್ರಚಾರಕರು ಪಾಲ್ಗೊಂಡಿದ್ದರು.

ā

ಯುಗಾದಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ವಕ್ತಾರರಾದ  ದಾಮೋದರ್ ಜೀ ಯವರು ಯುಗಾದಿಯು ಹಿಂದೂಗಳ ವರ್ಷಾರಂಭದ ಮೊದಲ ದಿನ ಮತ್ತು ಹಬ್ಬವಾಗಿದ್ದು ಕೇವಲ ಮನುಷ್ಯರಿಗಷ್ಟೇ ಅಲ್ಲ ಪ್ರಕೃತಿಯೂ ಸಹ ಈ ದಿನವನ್ನು ಹಬ್ಬದಂತೆ ಆಚರಿಸುತ್ತದೆ. ಹಾಗೆಯೇ ಈ ದಿನವು ಸಂಘ ಸ್ಥಾಪಿಸಿದ ಪರಮ ಪೂಜ್ಯನೀಯ ಡಾll ಕೇಶವ ಬಲಿರಾಮ್ ಹೆಡ್ಗೆವಾರ್ ರವರ ಜನ್ಮದಿನವೂ ಹೌದು,ಹುಟ್ಟ ದೇಶಭಕ್ತರಾಗಿದ್ದ ಕೇಶವರವರು ಸ್ವಾತಂತ್ರ್ಯ ಹೋರಾಟದ ಅನೇಕ ಆಂದೋಲನಗಳಲ್ಲಿ ಪಾಲ್ಗೊಂಡಿದ್ದರು.
ಹಿಂದೂ ಸಮಾಜದ ಸಂಘಟನೆಗಾಗಿ ಅವರು ಜೀವನ ಪರ್ಯಾಂತ ಬ್ರಹ್ಮಚಾರಿಯಾಗಿದ್ದು ದೇಶ ಸೇವೆ ಮಾಡಿದರು. ಅವರ ತ್ಯಾಗ ಬಲಿದಾನ ಮತ್ತು ಸಂಘಟನಾ ಕೌಶಲ್ಯತೆ ನಮ್ಮಲ್ಲರಿಗೂ ಪ್ರೇರಣಾದಾಯಿಯಾಗಿದೆ. 1925 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇನ್ನು ಮೂರು ವರ್ಷಗಳಲ್ಲಿ ಶತಮಾನ ಪೂರೈಸಲಿದೆ ಆ ಕಾರಣದಿಂದ ಸಮಾಜದ ಪ್ರತಿಯೊಬ್ಬರು ಸಮಾಜದ ಏಕತೆ ಮತ್ತು ಒಳಿತಿಗಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರು ಹಾಗೂ ಅನೇಕ ಸ್ವಯಂ ಸೇವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *