ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ, 601823 ರೂಪಾಯಿಗಳು ಸಂಗ್ರಹ
1 min readವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ,
601823 ರೂಪಾಯಿಗಳು ಸಂಗ್ರಹ
ಹರಪನಹಳ್ಳಿ: ಮಾ- 25 ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರತಿಮ್ಮಲಾಪುರದ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯನ್ನು ಎಣಿಕೆ ಮಾಡಲಾಯಿತು ಈ ವೇಳೆ ಹುಂಡಿಯಲ್ಲಿ 601823 ರೂಪಾಯಿಗಳು ಸಂಗ್ರಹವಾಗಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಹುಂಡಿಯ ಎಣಿಕೆ ಕಾರ್ಯ ಮಾಡಲಾಗಿತ್ತು ಆಗ ಹುಂಡಿಯಲ್ಲಿ 702716 ರೂಪಾಯಿ ನಗದು ಸಂಗ್ರಹವಾಗಿತ್ತು .
ಈ ದೇವಾಲಯದ ಖಾತೆಯನ್ನು ತಹಶೀಲ್ದಾರ್ ರು ಮತ್ತು ಆಡಳಿತಾಧಿಕಾರಿಗಳ ಹಾಗೂ ದೇವಾಲಯದ ಹೆಸರಿನಲ್ಲಿ ಹರಪನಹಳ್ಳಿ ಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ ಸಂಗ್ರಹವಾದ ಈ ಎಲ್ಲಾ ಹಣವನ್ನು ಅಲ್ಲಿ ಜಮೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಿಬ್ಬಂದಿಯವರಾದ ರಮೇಶ್ ಟಿ.ಕೆ.ತಿಳಿಸಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ದೇವಾಲಯದಲ್ಲಿ ಪ್ರತಿವರ್ಷ ಹೊಸ್ತಿಲು ಹುಣ್ಣಿಮೆಯ ದಿನದಂದು ಹರಪನಹಳ್ಳಿ ಪಾಳೆಯಗಾರರಾದ ದಾದಣ್ಣನಾಯಕರ ಜನ್ಮದಿನದ ಪ್ರಯುಕ್ತ ನೆಡೆಯುವ ದಾದಣ್ಣನರಥೋತ್ಸವ (ತೇರು) ನಡೆದಿರುತ್ತದೆ.
ಈ ಸಂದರ್ಭದಲ್ಲಿ ಹರಪನಹಳ್ಳಿ ಕಂದಾಯ ನಿರೀಕ್ಷಕ ಅರವಿಂದ, ಮುಜರಾಯಿ ಇಲಾಖೆ ಸಿಬ್ಬಂದಿಯವರಾದ , ರಮೇಶ್,ಶಿವಕುಮಾರ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಕುಮಾರ್, ಬ್ಯಾಂಕ್ ಸಿಬ್ಬಂದಿ ಶ್ರಿಧರ, ಗ್ರಾಮಪಂಚಾಯಿತಿ ಸದಸ್ಯರಾದ ,ಜಿ.ರಮೇಶ್, ಪೂಜಾರ್ ಪ್ರಸನ್ನಕುಮಾರ್, ರೇಣುಕಾ ಮಂಜುನಾಥ್,ಬಸವನಕೋಟೆ ನಾಗರಾಜ್, ಪ್ರಧಾನ ಅರ್ಚಕ ಶ್ರೀನಿವಾಸ, ಕಟ್ಟಿ ಹರ್ಷ ,ದಂಡಿನ ಹರ್ಷ,ಗ್ರಾಮಸೇವಕ ನಾಗರಾಜ್,ಉಚ್ಚೆಂಗಿದುರ್ಗದ ಸ್ವಯಂಸೇವಕ ಸಂಘದ ಪದಾಧಿಕಾರಿಗಳು ದೇವರತಿಮ್ಮಲಾಪುರದ ಗ್ರಮದ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.
ಇತಿಹಾಸ ಪ್ರಸಿದ್ದ ದೇವಸ್ಥಾನವಾದ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯ ಐತಿಹಾಸಿಕ ಹಿನ್ನೆಲೆ ಹೊಂದಿದೆ ಒಂದು ಕಲ್ಯಾಣ ಮಂಟಪ, ಸ್ಥಿರಾಸ್ತಿಗಳಾದ ಹೊಲಗದ್ದೆಗಳು ದೇವಸ್ಥಾನದ ಹೆಸರಿನಲ್ಲಿ ಇವೆ ಈ ದೇವಾಲಯವನ್ನು ಹಿಂದೆ ಹರಪನಹಳ್ಳಿ ಯ ಪಾಳೆಯಗಾರರು ಕಟ್ಟಿಸಿದ್ದಾರೆ ಆಗ ಅವರು ಈ ದೇವಾಲಯಕ್ಕೆ ಅತ್ಯಂತ ಫಲವತ್ತಾದ ಮತ್ತು ಬೆಲೆಬಾಳುವ ಜಮೀನುಗಳನ್ನು ದತ್ತಿ, ದಾನವಾಗಿ ನೀಡಿದ್ದಾರೆ ಅಲ್ಲದೇ ಬೆಲೆಬಾಳುವ ಆಭರಣಗಳನ್ನು ನೀಡಿದ್ದರು ಎಂದು ಹೇಳಲಾಗುತ್ತದೆ ಇವುಗಳನ್ನು ಸರ್ಕಾರ ಸುಪರ್ದಿಗೆ ಪಡೆಯಲು ಮುಜರಾಯಿ ಇಲಾಖೆ ಅಧಿಕಾರಿಗಳು ಮುಂದಾಗಿ ಅವುಗಳನ್ನು ರಕ್ಷಿಸಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.