Vijayanagara Express

Kannada News Portal

ಕಾಂಗ್ರೆಸ್ ತೆಕ್ಕೆಗೆ ನೀಲಗುಂದ ಗ್ರಾಮ ಪಂಚಾಯಿತಿ

1 min read

ಕಾಂಗ್ರೆಸ್ ತೆಕ್ಕೆಗೆ ನೀಲಗುಂದ ಗ್ರಾಮ ಪಂಚಾಯಿತಿ

 

ಹರಪನಹಳ್ಳಿ: ಏ-5: ತಾಲೂಕಿನ ನೀಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಭೋವಿ ಹನುಮವ್ವ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷರಾಗಿ ಹೊನ್ನಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಪ್ರಭಾಕರಗೌಡ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನ ಬಯಸಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಭೋವಿ ಹನುಮವ್ವ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಕೆ.ಸರೋಜಾ ನಾಮಪತ್ರ ಸಲ್ಲಿಸಿದ್ದರು. ನೀಲಗುಂದ ಗ್ರಾಮ ಪಂಚಾಯತಯಲ್ಲಿ ಒಟ್ಟು 23 ಸದಸ್ಯರ ಸಂಖ್ಯಾ ಬಲ ಹೊಂದಿದ್ದು, ಇದರಲ್ಲಿ 16 ಬಿಜೆಪಿ ಬೆಂಬಲಿತ ಸದಸ್ಯರು ಮತ್ತು7 ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಬೋವಿ ಹನುಮವ್ವ ಅವರಿಗೆ 12ಮತಗಳು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಕೆ.ಸರೋಜಾ ಅವರಿಗೆ 11 ಮತಗಳು ಚಲಾವಣೆಗೊಂಡಿದ್ದವು.

ಒಂದು ಮತ ಹೆಚ್ಚು ಪಡೆದ ಕಾಂಗ್ರೆಸ್ ಬೆಂಬಲಿತ ಬೋವಿ ಹನುಮವ್ವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಪ್ರಭಾಕರಗೌಡ ಘೋಷಿಸಿದರು. ಉಪಾಧ್ಯಕ್ಷ ಹುದ್ದೆಯು ಸಾಮಾನ್ಯ ಮಹಿಳೆ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷರಾಗಿ ಹೊನ್ನಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ ಸೇರಿದೆ.

ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅನಭಿಷಿಕ್ತದೊರೆ, ಅಭಿವೃದ್ದಿ ಹರಿಕಾರ ಎಂ.ಪಿ.ರವೀಂದ್ರ ಅವರ ಜನ್ಮ ದಿನಾಚರಣೆಯಂದು ಕಾಂಗ್ರೆಸ್ ಪಕ್ಷ ನೀಲಗುಂದ ಗ್ರಾಮ ಪಂಚಾಯ್ತಿಯಲ್ಲಿ ತನ್ನ ಬಾವುಟ ಹಾರಿಸಿದೆ. ಎಂ.ಪಿ.ರವೀಂದ್ರ ರವರ ಜನ್ಮ ದಿನಕ್ಕೆ ನೀಲಗುಂದ ಪಂಚಾಯ್ತಿಯಿಂದ ಗೆಲುವಿನ ಉಡುಗೊರೆ ನೀಡಿದ್ದೇವೆ  ಹಾಗೂ ಚುನಾವಣೆಯನ್ನು ಬೇಲೂರು ಅಂಜಿನಪ್ಪ ಮತ್ತು ಬುರುಡಿ ವಾಗೀಶ ರವರ ಮಾರ್ಗದರ್ಶನದಲ್ಲಿ ವಿಜಯಿಗಳಾಗಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಭೋವಿ ಮಹಾಂತೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಮುಖಂಡರಾದ ಬುರಡಿ ವಾಗೀಶ್, ಶರಣಪ್ಪ, ಕಾಳಪ್ಪ, ಐ.ಜಿ.ಹಾಲನಗೌಡ, ಹೊಸಮನಿ ವೀರಣ್ಣ, ಬೋವಿ ಬಸವರಾಜ್, ಜಿ.ತಿರುಪತಿ, ಮುಲಾಲಿ ವಾಗೀಶ್, ಹೊಂಬಾಳೆ ಚನ್ನಬಸಪ್ಪ, ಮಾಳಿಗೆ ಚೌಡಪ್ಪ, ಹಾರಕನಾಳು ಚೌಡಪ್ಪ, ಜಿ.ಮಂಜುನಾಥ, ಮಾಳಿಗೆ ರಾಘವೇಂದ್ರ, ಬೋವಿ ಶಿವಕುಮಾರ್ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂಧಿಸಿದರು.

Leave a Reply

Your email address will not be published. Required fields are marked *