Vijayanagara Express

Kannada News Portal

ಷಷ್ಠಿ ಪೂರ್ತಿ ಅಂಗವಾಗಿ ಗೋಪೂಜೆ ನೆರವೇರಿಸಿದ ಶಾಸಕ ಕರುಣಾಕರ ರೆಡ್ಡಿ ದಂಪತಿ

1 min read

ಷಷ್ಠಿ ಪೂರ್ತಿ ಅಂಗವಾಗಿ ಗೋಪೂಜೆ ನೆರವೇರಿಸಿದ ಶಾಸಕ ಕರುಣಾಕರ ರೆಡ್ಡಿ ದಂಪತಿ

 

ಹರಪನಹಳ್ಳಿ: ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರತಿಮ್ಮಲಾಪುರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶಾಸಕ ಗಾಲಿ ಕರುಣಾಕರ ರೆಡ್ಡಿದಂಪತಿ ಅವರು ಗೋಮಾತೆ ಪೂಜೆ ನೆರವೇರಿಸಿದರು .·

ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರ 60ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಹಿರೇಮೇಗಳಗೇರಿ ಪಾಟಿಲ್ ಸಿದ್ದನಗೌಡ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಷಷ್ಠ್ಯಾಬ್ದಿ ಕಾರ್ಯಕ್ರಮ ಮತ್ತು ಸೀತಾರಾಮ ಕಲ್ಯಾಣಮಹೋತ್ಸವ ಅಂಗವಾಗಿ ದೇವರತಿಮ್ಮಲಾಪುರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗೋಪೂಜೆ ಆಯೋಜಿಸಲಾಗಿತ್ತು ಆ ಪ್ರಕಾರ ಬೆಳಿಗ್ಗೆ 9.20 ರ ಸುಮಾರಿಗೆ ದೇವಸ್ಥಾನದಲ್ಲಿ ಗಾಲಿ ಕರುಣಾಕರ ರೆಡ್ಡಿ ಅವರ ದಂಪತಿ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸಿದರು .

ಗೋಮಾತೆ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಜಯಶೀಲ ರವರು ಕರುಣಾಕರರೆಡ್ಡಿ ದಂಪತಿಗೆ ಚಿನ್ನದ ಬ್ರೆಸ್ ಲೈಟ್ ಉಡುಗೊರೆ ನೀಡಿ ಹುಟ್ಟು ಹಬ್ಬಕ್ಕೆ ಶುಭಕೋರಿ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ
ಕೆ.ಆರ್.ಜಯಶೀಲ, ಪುರಸಭೆ ಮಾಜಿ ಸದಸ್ಯ ಬೂದಿ ನವೀನ್,ಅಡಿವಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವನಕೋಟೆ ನಾಗರಾಜ್, ರಮೇಶ್ ಗೋವಿಂದಪ್ಪರ , ಪ್ರಧಾನ ಅರ್ಚಕ ಶ್ರೀನಿವಾಸ, ತಹಶೀಲ್ದಾರ್ ಪ್ರಭಾಕರಗೌಡ, ಕಂದಾಯ ನಿರೀಕ್ಷಕ ಅರವಿಂದ್,ಮುಜಾರಾಯಿ ಸಿಬ್ಬಂದಿ ರಮೇಶ್, ಶಿವಕುಮಾರ್, ಗ್ರಾಮದ ಮುಖಂಡರಾದ ಸಣ್ಣಿಂಗಪ್ಪ, ನಾಗರಾಜ್, ವೆಂಕಟೇಶ್, ಕೃಷ್ಣ ಮೂರ್ತಿ,ಬಿ,ತಿಮ್ಮಪ್ಪ,ಎಂ.ಬಿ, ವೆಂಕಟೇಶ್ ಗೌಡಪ್ಪ ರ,ಮೂಡ್ಲಪ್ಪ, ನಿಂಗಪ್ಪ, ಪರಶುರಾಮ , ಮುಂತಾದವರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *